Home Mangalorean News Kannada News ಸಮರ್ಪಕ ಕಸ ವಿಲೇವಾರಿ – ಸಚಿವ ಪ್ರಮೋದ್ ಮಧ್ವರಾಜ್ ಸೂಚನೆ

ಸಮರ್ಪಕ ಕಸ ವಿಲೇವಾರಿ – ಸಚಿವ ಪ್ರಮೋದ್ ಮಧ್ವರಾಜ್ ಸೂಚನೆ

Spread the love

ಸಮರ್ಪಕ ಕಸ ವಿಲೇವಾರಿ – ಸಚಿವ ಪ್ರಮೋದ್ ಮಧ್ವರಾಜ್  ಸೂಚನೆ

ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಮರ್ಪಕವಾದ ರೀತಿಯಲ್ಲಿ ಕಸ ವಿಲೇವಾರಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಅವರು ಶನಿವಾರ ಉಡುಪಿ ನಗರಸಭೆಯ 2013-14 ಮತ್ತು 2014-15 ನೇ ಸಾಲಿನ ಎಸ್.ಎಫ್.ಸಿ ಅನುದಾನದಡಿ ಪ್ರಾಥಮಿಕ ಕಸ ಸಂಗ್ರಹಣೆಗೆ 15,41,679 ರೂ ಮೊತ್ತದ 1.8 ಕ್ಯೂಬಿಕ್ ಮೀಟರ್ ಸಾಮಥ್ರ್ಯದ 3 ಏಸ್ ಹೋಪರ್ ಟಿಪ್ಪರ್ ಬಿಎಸ್4 ಗಳನ್ನು ಉದ್ಘಾಟಿಸಿ ಮಾತನಾಡಿದರು.

image003waste-dispossal-vehicle-cmc-udupi-20160730

ಈ ಟಿಪ್ಪರ್‍ಗಳನ್ನು ಪ್ರಾಥಮಿಕ ಹಂತದಲ್ಲಿ ಬಡಗಬೆಟ್ಟು, ಕಲ್ಮಾಡಿ ಮತ್ತು ಮೂಡಬೆಟ್ಟು ವಾರ್ಡ್‍ಗಳಲ್ಲಿ ಕಸ ಸಂಗ್ರಹಣೆಗೆ ಉಪಯೋಗಿಸಲಾಗುವುದು, ಮುಂದಿನ ಹಂತದಲ್ಲಿ ನಗರಸಭೆಯ ಎಲ್ಲಾ ವಾರ್ಡ್‍ಗಳಿಗೆ ವಾಹನಗಳನ್ನು ಖರೀದಿಸಲಾಗುವುದು ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪೌರಾಯುಕ್ತ ಮಂಜುನಾಥಯ್ಯ, ನಗರಸಭೆಗೆ ಹೊಸದಾಗಿ ನೇಮಕಗೊಂಡಿರುವ 32 ಜನ ಪೌರ ಕಾರ್ಮಿಕರನ್ನು ಸ್ವಚ್ಛತಾ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು, ಕಸವನ್ನು ಮೂಲದಲ್ಲೇ ವಿಂಗಡಣೆ ಮಾಡಿ ಸಂಗ್ರಹಿಸಲು ಈಗಾಗಲೇ ನಗರದ 63 ಅಪಾರ್ಟ್ ಮೆಂಟ್ ಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ, ಅಪಾರ್ಟ್ ಮೆಂಟ್ ಗಳಲ್ಲಿ ಸಂಗ್ರಹವಾಗುವ ಕಸವನ್ನು ಅಲ್ಲಿನ ಗಾರ್ಡನ್ ಗಳಿಗೆ ಗೊಬ್ಬರದ ರೀತಿಯಲ್ಲಿ ಬಳಸಲು ಜಾಗೃತಿ ಮೂಡಿಸುವ ಕುರಿತಂತೆ ಚಿಂತನೆ ನಡೆದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯರಾದ ಸಲಿನಾ ಕರ್ಕೆಡಾ ಮತ್ತು ನಗರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version