
ಸಮರ್ಪಕ ನೀರು ಪೊರೈಸುವಲ್ಲಿ ಬಿಜೆಪಿ ವಿಫಲ – ಪ್ರಸಾದ್ ರಾಜ್ ಕಾಂಚನ್
ಉಡುಪಿ: ಬಿಜೆಪಿ ಸರಕಾರ, ಶಾಸಕರು ಉಡುಪಿಯ ಒಳಚರಂಡಿ, ಮನೆ ಕಟ್ಟಲು ಪರವಾನಿಗೆ, ನಿರುದ್ಯೋಗ, ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣವಾಗಿ ವಿಫಲತೆಯನ್ನು ಕಂಡಿದೆ ಇದನ್ನು ಸರಿಪಡಿಸಲು ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಮುಂದಾಗಿದ್ದಾರೆ ಎಂದು ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.
ಅವರು ಮೂಡಬೆಟ್ಟು ವಾರ್ಡಿನಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಸರಕಾರ ಸಂಪೂರ್ಣ ಭ್ರಷ್ಠಾಚಾರದಿಂದ ಕೂಡಿದ್ದು ಜನರನ್ನು ಲೂಟುವ ಕೆಲಸ ಮಾಡುತ್ತಿದೆ. ಉಡುಪಿಯಲ್ಲಿ ಕುಡಿಯುವ ನೀರಿನ ಅಸಮರ್ಪಕ ಪೊರೈಕೆಯಿಂದ ಜನರು ಕಂಗೆಟ್ಟಿದ್ದಾರೆ. ಸರಿಯಾದ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ಬಾವಿಯ ನೀರು ಕೆಟ್ಟು ಹೋಗಿದ್ದು ಇದನ್ನು ಸರಿಪಡಿಸಲು ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು
ಸಭೆಯಲ್ಲಿ ಅಮೃತ್ ಶೆಣೈ, ಕುಶಲ್ ಶೆಟ್ಟಿ, ಗಣೇಶ್ ನೆರ್ಗಿ, ಮಹಾಬಲ ಕುಂದರ್, ರವಿರಾಜ್, ಶೋಭಾ, ಸುಕೇಶ್, ಪ್ರಶಾಂತ ಪೂಜಾರಿ, ನಾಸಿರ್, ಉದಯ, ಸುರೇಶ್ ಬನ್ನಂಜೆ, ಹಾರ್ಮಿಸ್ ನೋರೊನಾ, ಹಿರಿಯರು ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.