ಸಮವಸ್ತ್ರ ಇಲ್ಲದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಹಿಂದಿನಂತೆ ಅವಕಾಶ: ಶಾಸಕ ರಘುಪತಿ ಭಟ್

Spread the love

ಸಮವಸ್ತ್ರ ಇಲ್ಲದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಹಿಂದಿನಂತೆ ಅವಕಾಶ: ಶಾಸಕ ರಘುಪತಿ ಭಟ್

ಉಡುಪಿ: ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ಹಾಗೂ ಸೋಮವಾರದಿಂದ ಪ್ರೌಢಶಾಲೆಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಹಾಗೂ ಧಾರ್ಮಿಕ ಮುಖಂಡರ ಶಾಂತಿ ಸಭೆಯು ರವಿವಾರ ಉಡುಪಿ ತಾಲೂಕು ಕಚೇರಿಯಲ್ಲಿ ಜರಗಿತು.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಉಡುಪಿ ಶಾಸಕ ಕೆ.ರಘುಪತಿ ಭಟ್, ಎಲ್ಲಿ ಸಮವಸ್ತ್ರ ಇರಲಿಲ್ಲವೋ ಅಲ್ಲಿ ಈ ಹಿಂದೆ ಇದ್ದ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗಬಹುದು.

ಸಮವಸ್ತ್ರ ಕಡ್ಡಾಯ ಇರುವಲ್ಲಿ ಹೈಕೋರ್ಟ್ ಆದೇಶವನ್ನು ಪಾಲಿಸಬೇಕು. ಸಮವಸ್ತ್ರ ಇಲ್ಲದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಹಾಕಿಕೊಂಡು ಹಿಂದಿನಂತೆ ಬರಬಹುದು. ಕೋರ್ಟ್ ಅದನ್ನು ಹೇಳಲಿಲ್ಲ. ಎಲ್ಲಿ ಸಮವಸ್ತ್ರ ಇದೆಯೋ ಅಲ್ಲಿ ಹಾಕಿಕೊಂಡು ಬರಲು ಹೇಳಿದೆ. ಯಾವುದೇ ಸಮಸ್ಯೆ ಇಲ್ಲದೆ ಸೌಹಾರ್ದತೆಯಿಂದ ನಡೆಸಿಕೊಂಡು ಹೋಗಬೇಕೆಂಬ ನಿರ್ಣಯ ಆಗಿದೆ ಎಂದರು.

ಉಡುಪಿ ತಹಶೀಲ್ದಾರ ಪ್ರದೀಪ್ ಕುರ್ಡೆಕರ್ ಮಾತನಾಡಿ, ಉಡುಪಿ ತಾಲೂಕಿನ ಸರ್ವಪಕ್ಷ ಹಾಗೂ ಸರ್ವಧರ್ಮದವರ ಸಭೆಯಲ್ಲಿ ಭಾಗವಹಿಸಿದ್ದು, ಶಾಂತಿ ಸಭೆ ಯಶಸ್ವಿಯಾಗಿದೆ. ಹೈಕೋರ್ಟ್ ಆದೇಶದಂತೆ ನಾಳೆ ಶಾಲೆಗಳು ಆರಂಭವಾಗುತ್ತವೆ. ಗುರುವಾರದಿಂದ ಪಿಯುಸಿ ಪದವಿ ಕಾಲೇಜುಗಳು ಪುರಾಂಭವಾಗುತ್ತವೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಲು ಒಪ್ಪಿದ್ದಾರೆ. ಉಡುಪಿ ಮಾದರಿ ರೀತಿಯಲ್ಲಿ ಸಮಸ್ಯೆ ನಿರ್ವಹಿಸುತ್ತೇವೆ. ಸಮವಸ್ತ್ರ ಕಡ್ಡಾಯ ಇರುವ ಶಾಲೆಗಳಲ್ಲಿ ಕಡ್ಡಾಯ ಧರಿಸಿ ಬರಬೇಕು ಎಂದರು.

ದಸಂಸ ಅಂಬೇಡ್ಕರ್ ವಾದ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ‘ಶಿಕ್ಷಣದಲ್ಲಿ ಉಡುಪಿ ಜಿಲ್ಲೆಗೆ ಒಳ್ಳೆಯ ಹೆಸರಿತ್ತು. ಆದರೆ ಈ ವಿವಾದದಿಂದಾಗಿ ಇಲ್ಲಿನ ಶೈಕ್ಷಣಿಕ ವ್ಯವಸ್ಥೆ ಹಾಳಾಗಿದೆ. ವಿದ್ಯಾರ್ಥಿಗಳ ಮಧ್ಯೆ ವಿಷ ಬೀಜ ಬಿತ್ತಿ ಗೊಂದಲ ಉಂಟು ಮಾಡಲಾಗಿದೆ. ಸರಕಾರ ಯಾರು ಕೂಡ ಪರ ವಿರೋಧ ಹೇಳಿಕೆ ನೀಡಬಾರದೆಂದು ತಿಳಿಸಿದರೂ ಇಲ್ಲಿನ ಕೆಲವು ರಾಜ ಕೀಯ ಮುಖಂಡರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗೆ ಮಾಡಿದರೆ ಶಾಂತಿ ಸಭೆಗೆ ಏನು ಅರ್ಥ ಇದೆ. ಮುಂದೆ ಬರುವ ಪರೀಕ್ಷೆ ನಡೆಸಲು ಹಿಂದಿನಂತೆ ಉತ್ತಮ ವಾತಾವರಣವನ್ನು ಕಲ್ಪಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಶಾಸಕ ಕೆ.ರಘುಪತಿ ಭಟ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಡುಪಿ ಡಿವೈಎಸ್ಪಿ ಸುಧಾಕರ್ ನಾಯ್ಕ್, ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್, ವೃತ್ತ ನಿರೀಕ್ಷಕ ಶರಣ ಗೌಡ, ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ದಸಂಸ ಮುಖಂಡ ಶ್ಯಾಮ್‌ರಾಜ್ ಬಿರ್ತಿ, ಉಡುಪಿ ಶೋಕಾ ಮಾತಾ ಇಗರ್ಜಿಯ ರೆ.ಫಾ. ಚಾರ್ಲ್ಸ್ ಮಿನೇಜಸ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಜಿಪಂ ಮಾಜಿ ಸದಸ್ಯ ವಿಲ್ಸನ್ ರೋಡಿಗ್ರಸ್, ಹಿಂದು ಜಾಗರಣಾ ವೇದಿಕೆಯ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ವಿಷ್ಣು ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.


Spread the love

2 Comments

  1. Ha.Ha. Ha. Those are operating Medical and Engineering colleges in Mangalore for local and international students would have been affected by the decision of the court. So suddenly the MLA realizes and says where there is no uniform the rule is not applicable. He got himself in a mess by targeting the government school which in turn affected the private funded school, Colleges and universities. Now a new U-Turn. Can he reverse the publicity done so far? Although I am not a big supporter of Hijab or any other thing. But the decision should have been taken by the school management, teachers and parents as they did in Chikkamagaluru one month back. Created unnecessary enmity between students. Anyway, the communities are already spoiled!

  2. Hi Franscis, Are you not reading news? The school management and teachers tried to reason with these 6 students and they didn’t want to listen to anything. Those Hijabi girls wanted to create a big scene and it resulted in Hindu students reacting. This is new India. This is not the same old India where everyone could lecture and mock Hindus. People are very well aware of what’s going on and who is doing what. The true colors of some groups and their twisted agenda are clear to everyone.

Comments are closed.