ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಾರತಮ್ಯದ ನೀತಿ ಏಕೆ ? ಯು.ಟಿ.ಖಾದರ್

Spread the love

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಾರತಮ್ಯದ ನೀತಿ ಏಕೆ ? ಯು.ಟಿ.ಖಾದರ್

ಮಂಗಳೂರು: ರಾಜ್ಯದಲ್ಲಿ ಸಮಾಜದ ಸ್ವಾಸ್ಥ್ಯ ಕೆಡವುವವರ ವಿರುಧ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದ್ದು ಸಣ್ಣ ಮಟ್ಟಿನ ತಪ್ಪು ಮಾಡಿದವರನ್ನು ಭೇಟೆಯಾಡಿ ಬಂಧಿಸುವ ಗೃಹ ಇಲಾಖೆ ದೊಡ್ಡ ಮಟ್ಟಿನ ಸಮಾಜದ ಶಾಂತಿ ಕದಡುವವರ ವಿರುಧ್ಧ ಮೌನ ವಹಿಸಿರುವ ಬಗ್ಗೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದು ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಬಾಯಿಗೆ ಬಂದಂತೆ ಮಾತನಾಡುವ ಪ್ರಮೋದ್ ಮುತಾಲಿಕ್ ಹಾಗೂ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗಳು ಕಾನೂನು ಉಲ್ಲಂಘನೆ ಅಲ್ಲದೇ ಬೇರೆ ಇನ್ನೇನು ?.ಕೇವಲ ಪ್ರತಿಭಟನೆ ಮಾಡಿದ್ದೇ ಅಪರಾಧ ಎಂಬಂತೆ ಕಾಂಗ್ರೆಸ್ ನ NSUI ಅಧ್ಯಕ್ಷರ ವಿರುದ್ದ ಕೇಸ್ ದಾಖಲಿಸುವ ಬಿಜೆಪಿ ಸರ್ಕಾರ, ಗುಂಡು ಹಾರಿಸುವೆ ಎಂದು ಸಾರ್ವಜನಿಕವಾಗಿಯೇ ಹೇಳಿದ ಪ್ರಮೋದ್ ಮುತಾಲಿಕ್ ವಿರುದ್ದ ಮೌನವಾಗಿರುವುದು ಏಕೆ?,ಮೂರು ಮಸೀದಿ ಬಿಟ್ಟುಕೊಡಿ ಎಂದು ತಾಕೀತು ಮಾಡುವ ಚಕ್ರವರ್ತಿ ಸೂಲಿಬೆಲೆ ವಿರುದ್ದವೇಕೆ ಕಾನೂನು ಕ್ರಮವಿಲ್ಲ?‌,ಇಷ್ಟಕ್ಕೂ ಈ ರೀತಿ ಹೇಳಲು ಅಧಿಕಾರ ಇವರಿಗೆ ಕೊಟ್ಟವರು ಯಾರು?.

ಕಾಂಗ್ರೆಸ್ ಸರ್ಕಾರವಿದ್ದಾಗ ಸರ್ವಸ್ವವನ್ನು ಅದುಮಿಟ್ಟುಕೊಂಡಿದ್ದ ಈ ಮಂದಿ ಈಗ ಸಾರ್ವಜನಿಕವಾಗಿಯೇ ಧಮಿಕಿ ಹಾಕುತ್ತಿದ್ದಾರೆ ಎಂದರೆ ಇದಕ್ಕೆ ಬಿಜೆಪಿ ಸರ್ಕಾರದ ಕುಮ್ಮಕ್ಕು ಹಾಗೂ ಬೆಂಬಲ ಇದೆ ಎಂದು ಸಾಬೀತಾಗಿದೆ.ಸಮಾಜ ದ್ರೋಹಿಗಳನ್ನು ಸಹಿಸುವುದಿಲ್ಲ ಹೇಳುವ ಸರಕಾರ ಮುತಾಲಿಕ್ ಹಾಗೂ ಸೂಲಿಬೆಲೆ ರವರಂಥಹ ವಿರುದ್ದ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲೇ ಬೇಕು ಎಂದು ಶಾಸಕ ಯು.ಟಿ.ಖಾದರ್ ಸರಕಾರಕ್ಕೆ ಒತ್ತಾಯಿಸಿದ್ದಾರೆ.


Spread the love