
ಸಮಾಜ ಘಾತುಕರ ಸದ್ದಡಗಿಸಿದ ಧೀರ ಪೋಲೀಸ್ ಅಧಿಕಾರಿ – ಡಿ.ವೈ.ಎಸ್. ಪಿ. ಸಿ.ಇ. ತಿಮ್ಮಯ್ಯ
ನಾಡಿನ ಶಾಂತಿ ಸಂರಕ್ಷಣೆಯ ಪ್ರಧಾನ ಹೊಣೆ ಹೊತ್ತ ಕರ್ನಾಟಕದ ಪೊಲೀಸ್ ಇಲಾಖೆ ಹಲವಾರು ಧೀರ, ಧೀಮಂತ ಅಧಿಕಾರಿಗಳನ್ನು ಜನರ ಸೇವೆಗೆ ನಿಯುಕ್ತಿ ಗೊಳಿಸಿದೆ. ಅಂತಹವರಲ್ಲಿ ಡಿ.ವೈ.ಎಸ್. ಪಿ. ಸಿ.ಇ. ತಿಮ್ಮಯ್ಯ ಒಬ್ಬರು. ತಾನು ಇಲಾಖೆಗೆ ಸೇರಿದಂದಿನಿಂದ ಇಂದಿನ ವರೇಗೂ ದಕ್ಷ ರೀತಿಯ ಸೇವೆಗೋಸ್ಕರ ತನ್ನ ಸೇವಾವಧಿಯಲ್ಲಿ ಹಲವಾರು ಪ್ರಶಸ್ತಿ, ಪುರಸ್ಕಾರಗಳ ಸರಮಾಲೆಗಳನ್ನೇ ಪಡೆದ ಶ್ರೀಯುತರು ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ವಿಶಿಷ್ಟವಾದಂತಹ ದಾಖಲೆ ನಿರ್ಮಿಸಿದ್ದಾರೆ.
ವೀರರ ನಾಡು ಎಂದೇ ಖ್ಯಾತಿವೆತ್ತ ಕೊಡಗಿನ ಸುಸಂಸ್ಕೃತ ಕುಟುಂಬದ ಸುಪುತ್ರರಾದ ಚೈಯಡ ಸಿ.ಇ. ತಿಮ್ಮಯ್ಯರವರು ದ.ಕ. ಜಿಲ್ಲೆಯ ಮಂಗಳೂರಿನ ಪಾಂಡೇಶ್ವರ, ಉಡುಪಿಯ ಲೋಕಾಯುಕ್ತ, ಉಡುಪಿಯ ಅಪರಾಧ ಪತ್ತೇದಳ, ಉಡುಪಿ ನಗರ,ಕೋಟ, ಕಾರ್ಕಳ, ಹೊನ್ನಾವರ, ಭಟ್ಕಳ, ಬೆಂಗಳೂರು ನಗರದ ಜಯನಗರ, ಬೆಂಗಳೂರು ಟ್ರಾಫಿಕ್ ಗಳಲ್ಲಿ ಎಸ್.ಐ.ಯಾಗಿಯೂ, ಇನ್ಸ್ ಪೆಕ್ಟರ್ ರಾಗಿಯೂ, ಡಿ.ವೈ.ಎಸ್.ಪಿ. ಯಾಗಿಯೂ ನಿಷ್ಠೆ, ಪ್ರಾಮಾಣಿಕತೆ ಯಿಂದ ದುಡಿದು ಇಲಾಖೆಗೆ ಕೀರ್ತಿ ತಂದಿರುತ್ತಾರೆ.
ಡಿ.ವೈ ಎಸ್.ಪಿ. ಸಿ.ಇ. ತಿಮ್ಮಯ್ಯ ಸೇವೆ ಸಲ್ಲಿಸಿದ ಎಲ್ಲಾ ಪ್ರದೇಶದ ಜನರು ಅವರನ್ನು ಸದಾ ಸ್ಮರಿಸುತ್ತಾರೆ, ಅಭಿನಂದಿಸುತ್ತಾರೆ. ತಿಮ್ಮಯ್ಯ ರಂತಹ ಪೋಲಿಸ್ ಅಧಿಕಾರಿ ಬೇಕಿತ್ತು ಎಂದು ಈಗಲೂ ಅಲ್ಲಿನ ಜನ ನೆನೆಸಿಕೊಳ್ಳ ತೊಡಗಿದ್ದಾರೆ. ಇದು ತಿಮ್ಮಯ್ಯ ರವರ ಪ್ರಾಮಾಣಿಕತೆಯ ಪ್ರತೀಕವಲ್ಲದೆ ಮತ್ತೆನಲ್ಲ. ಪ್ರತ್ಯೇಕವಾಗಿ ಭಟ್ಕಳ, ಹೊನ್ನಾವರ ದಂತಹ ಗಲಭೆ ಪೀಡಿತ ಪ್ರದೇಶಗಳನ್ನು ಶಾಂತಿಯ ವಲಯವನ್ನಾಗಿ ಮಾರ್ಪಡಿಸಿದ ಕೀರ್ತಿ ತಿಮ್ಮಯ್ಯ ನವರಿಗೆ ಸಲ್ಲುತ್ತದೆ. ತಿಮ್ಮಯ್ಯನವರು ಎಲ್ಲಿ ಅಧಿಕಾರ ವಹಿಸಿಕೊಂಡರೂ ಅಲ್ಲಿ ನಿರ್ಭೀತಿಯ ವಾತಾವರಣ ಮೂಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಮಾಜಬಾಹಿರ ಶಕ್ತಿಗಳನ್ನು ಮಟ್ಟಹಾಕಿ ನಾಡಿನಲ್ಲಿ ಶಾಂತಿ ನೆಲೆ ಗೊಳಿಸುವಲ್ಲಿ ತಿಮ್ಮಯ್ಯರದು ಎತ್ತಿದ ಕೈ. ಮದಿ೯ತರ, ಅನ್ಯಾಯಕ್ಕೊಳಗಾದವರ, ಸಂತ್ರಸ್ತರ ಅಭಯ ಕೇಂದ್ರವಾಗಿದ್ದಾರೆ. ಸಿ.ಇ. ತಿಮ್ಮಯ್ಯ. ಇದೀಗ ರಾಜ್ಯ ಸಿಐಡಿ ವಿಭಾಗದಲ್ಲಿ ಡಿ.ವೈ.ಎಸ್. ಪಿ. ಯಾಗಿ ಸೇವೆ ಸಲ್ಲಿಸುತ್ತಿರುವ ಸಿ.ಇ. ತಿಮ್ಮಯ್ಯ ಭಡ್ತಿಯ ನಿರೀಕ್ಷೆಯಲ್ಲಿದ್ದು ಶೀಘ್ರವೇ ಎಸ್.ಪಿ.ಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.