
ಸಮಾಜ ನಿರ್ಮಾಣದತ್ತ ಯುವಜನತೆ
ವಸುದೈವ ಕುಟುಂಬಕಂ ಎಜುಕೇಶನ್ ಸಮಿಟ್’ 2022ರ ಸಾಪ್ತಾಹಿಕ ತಜ್ಞರ ಚರ್ಚೆ ಏಪ್ರಿಲ್ ವರಗೆ ಮುಂದುವರೆಯಲಿದ್ದು 11ನೇ ವಾರದ ಚರ್ಚೆ ಯಶಸ್ವಿಯಾಗಿ ನಡೆದಿತ್ತು ” ಸಮಾಜಕ್ಕೆ ಮರಳಿ ಕೊಡುವುದು ಮತ್ತು ಸಾಮಾಜಿಕ ಜವಾಬ್ದಾರಿ” ಎಂಬ ವಿಷಯ ಬಗ್ಗೆ ನುರಿತ ಶಿಕ್ಷಣ ತಜ್ಞರಿಂದ ಚರ್ಚೆಗಳು ನಡೆದವು.
ಬೆಂಗಳೂರು, ಮಾರ್ಚ್ 21, 2022 : ಸಮಿಟ್ ಇಂಡಿಯಾ ಈಗ ಟೆಕ್ ಅವಾಂತ ಗಾರ್ಡ್ (ಟ್ಯಾಗ ) (Tech Avant Garde) ಸಹಯೋಗದೊಂದಿಗೆ ಆಯೋಜಿಸಿದ ಶೈಕ್ಷಣಿಕ ಶೃಂಗ ‘ವಸುದೈವ ಕುಟುಂಬಕಂ ಎಜುಕೇಶನ್ ಸಮಿಟ್’ (Vasudhaiva Kutumbakam Education Summit 2022) ಕಾರ್ಯಕ್ರಮದ ವಾರಗಳ ಸಭೆಗಳು ನಡೆಯುತ್ತಿದ್ದು.11ನೇ ವಾರದ ಶೃಂಗಸಭೆಯ ವಿಷಯ “ಸಮಾಜಕ್ಕೆ ಮರಳಿ ಕೊಡುವುದು ಮತ್ತು ಸಾಮಾಜಿಕ ಜವಾಬ್ದಾರಿ” ಎಂಬ ವಿಷಯಗಳ ಬಗ್ಗೆ ಒಳನೋಟಗಳಿಂದ ತುಂಬಿದ ಕೆಲವು ಚರ್ಚೆ, ಆಲೋಚನೆಗಳೊಂದಿಗೆ ವಾರದ ಸಭೆ ಹೆಚ್ಚಿನ ಸಂಖ್ಯೆಯ ಶಿಕ್ಷಣತಜ್ಞರು, ಶಿಕ್ಷಕರು ಮತ್ತು ಪೋಷಕರು ಈ ಸಮ್ಮೇಳನಕ್ಕೆ ಹಾಜರಾಗಿದ್ದರು.
ಈ ವಾರದ ಶೃಂಗಸಭೆಯ ಚರ್ಚೆಯಲ್ಲಿ ಶ್ರೀ ಮಹೇಶ್ ವರ್ಮ, ಸಮಿಟ್ ಇಂಡಿಯಾ ಕಾರ್ಯದರ್ಶಿಗಳು, ಶ್ರೀ ಶ್ಯಾಮ್ ಜಾಜೂ, ಸಮಿಟ್ ಇಂಡಿಯಾ ಅಧ್ಯಕ್ಷರು, ಶಿಲ್ಪ ಪುರಿ, ಸಿಇಓ, ಸಮಿಟ್ ಇಂಡಿಯಾ, ಶ್ರೀ ದೆಬಾನಂದ ಸಾಹೂ, ಚೀಫ್ ಜನರಲ್ ಮ್ಯಾನೇಜರ್, ಬೆಂಗಳೂರು ಸರ್ಕಲ್, ಕೆನರಾ ಬ್ಯಾಂಕ್, ಶ್ರೀಮತಿ ರಿತು ಜಿಂಗೊನ್, ನಿರ್ದೇಶಕರು, ಕಾರ್ಪೊರೇಟ್ ಕಮ್ಯುನಿಕೇಶನ್ ಫಾರ್ ವೇದಾಂತ, ಗ್ರೂಪ್ ಅಂಡ್ ಸಿಇಓ, ನಂದ್ ಘರ್, ಶ್ರೀಮತಿ ಅಂಶು ಗುಪ್ತ, ಸಂಸ್ಥಾಪಕರು, ಸರ್ವೋದಯ ಫೌಂಡೇಶನ್, ಶ್ರೀ ರಮೇಶ್ ಕುಮಾರ್ ಆರ್, ಡಿ ಡಿ ಆರ್ ಎಫ್, ರೋಟರಿ ಡಿಸ್ಟಿಕ್ 3190, ಶ್ರೀ ನಾವ್ ಕಿಶ್ಲೇ, ಸಂಸ್ಥಾಪಕರು ಮತ್ತು ನಿರ್ದೇಶಕರು, ಅರ್ಕಮೈಂಡ್ ಕಾನ್ಸುಲ್ಟ್ಯಾಂನ್ಸಿ ಪ್ರೈವೇಟ್ ಲಿಮಿಟೆಡ್, ಶ್ರೀಮತಿ ದ್ವಾರಕಾ ಶ್ರೀರಾಮ್, ಯುನಿಸೆಫ್, ಇಂಡಿಯಾಸ್ ಚೀಫ್, ಜನರೇಷನ್ ಲಿಮಿಟೆಡ್ (ಯುವ ) ಯೂತ್ ದೆವಲಪ್ಮೆಂಟ್ ಅಂಡ್ ಪಾರ್ಟ್ನರ್ಶಿಪ್, ಮಿಸ್, ಅಸ್ಮಾ ಖಾನ್, ಸದಸ್ಯರು, ಯುನಿಸೆಫ್- ಯುವಸ್ ಯಂಗ್ ಪೀಪಲ್ ಆಕ್ಷನ್ ಟೀಮ್, ಮಿಸ್ ಅಂಕಿತ ಸಹದೇವ್, ಸದಸ್ಯರು, ಯುನಿಸೆಫ್- ಯುವಸ್ ಯಂಗ್ ಪೀಪಲ್ ಆಕ್ಷನ್ ಟೀಮ್, ಮಿಸ್ಟರ್ ಭರತ್ ಬನ್ಸಲ್, ಸದಸ್ಯರು, ಯುನಿಸೆಫ್ -ಯುವಸ್ ಯಂಗ್ ಪೀಪಲ್ ಆಕ್ಷನ್ ಟೀಮ್, ಮಿಸ್ಟರ್ ಅಶುತೋಷ್ ವರ್ಮ, ಸದಸ್ಯರು, ಯುನಿಸೆಫ್ -ಯುವಸ್ ಯಂಗ್ ಪೀಪಲ್ ಆಕ್ಷನ್ ಟೀಮ್, ಹಾಗೂ ಟೆಕ್ ಅವಾಂತ ಗಾರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲಿ ಸೇಠ್ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಮಾಜ ಸೇವೆಯಲ್ಲಿ ಕಾರ್ಯನಿರತರಾದ ಯುವಜರು ಭಾಗಿಯಾಗಿದ್ದರು. ನೂತನ ಶಿಕ್ಷಣ ನೀತಿಯು ಸಮಾಜಸೇವೆಯ ಅಂಶವನ್ನು ಒಳಗೊಂಡಿದ್ದು ಯುವ ಜನತೆಗೆ ಗುಣಮಟ್ಟದ ಶಿಕ್ಷಣವನ್ನು ಕೊಡುವುದಲ್ಲದೆ ಸಮಾಜಕ್ಕೆ ಹೇಗೆ ತಾವು ಮರಳಿ ನೀಡುವುದು ಎಂದು ತಿಳಿಸಿಕೊಡುತ್ತದೆ, ಮತ್ತು ಪ್ರತಿ ವಿದ್ಯಾರ್ಥಿಗಳಿಗು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ತಿಳಿಸುತ್ತದೆ ಎಂದು ಮಾತನಾಡಿದರು.
ಸಮಾಜಸೇವೆ ಬಗ್ಗೆ ಮಾತನಾಡಿದ ಶ್ರೀ ದೆಬಾನಂದ ಸಾಹೂ, ಚೀಫ್ ಜನರಲ್ ಮ್ಯಾನೇಜರ್, ಬೆಂಗಳೂರು ಸರ್ಕಲ್, ಕೆನರಾ ಬ್ಯಾಂಕ್, ” ನಮ್ಮ ಜೀವನದಲ್ಲಿ ನಾವು ಯಶಸ್ವಿಯಾಗುವುದು ಎಷ್ಟು ಮುಖ್ಯವೋ, ಅದೇ ರೀತಿಯಲ್ಲಿ ಸಮಾಜಕ್ಕೆ ಮರಳಿ ಕೊಡುವುದು ಮುಖ್ಯ. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಕೆಲಸ ಮಾಡುತ್ತಿದೆ, ಉನ್ನತ ಶಿಕ್ಷಣದಿಂದ ಶಾಲಾ ಶಿಕ್ಷಣದವರೆಗು ಸಾಲಗಳನ್ನು ನೀಡಲಾಗುತ್ತದೆ. ಮತ್ತು ಉದ್ಯಮ ಸಾಲಗಳನ್ನು ನೀಡುತ್ತಿದ್ದು ಯುವಜನತೆ ಇದರ ಲಾಭಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾರತದ ಬಗ್ಗೆ ಮಾತನಾಡಿದ ಶ್ರೀಮತಿ ರಿತು ಜಿಂಗೊನ್, ನಿರ್ದೇಶಕರು, ಕಾರ್ಪೊರೇಟ್ ಕಮ್ಯುನಿಕೇಶನ್ ಫಾರ್ ವೇದಾಂತ, ಗ್ರೂಪ್ ಅಂಡ್ ಸಿಇಓ, ನಂದ್ ಘರ್, “ಗ್ರಾಮೀಣ ಭಾರತದಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆಯಿದ್ದು ಅವುಗಳನ್ನು ನೀಗಿಸುವಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ನಂದ್ ಘರ್ ರಾಜಸ್ಥಾನದ ಹಳ್ಳಿಗಳಲ್ಲಿ ಅಂಗನವಾಡಿಗಳ ಮೂಲಕ ಮಕ್ಕಳಿಗೆ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಾಯಮಾಡುತ್ತಿದೆ. ನಂದ್ ಘರ್ ಮೊಬೈಲ್ ಹೆಲ್ತ್ ಮೂಲಕ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ವಿವರಿಸುತ್ತಾ ಈ ನಿಟ್ಟಿನಲ್ಲಿ ಸಮಾಜ ಸೇವೆಗಳು ನಡೆಯಬೇಕು ಎಂದು ವಿವರಿಸಿದರು.”
ಶ್ರೀಮತಿ ಅಂಶು ಗುಪ್ತ, ಸಂಸ್ಥಾಪಕರು, ಸರ್ವೋದಯ ಫೌಂಡೇಶನ್, ಮಾತನಾಡಿ “ಸರ್ವೋದಯ ಸಂಸ್ಥೆಯು ವಿವಿಧ ಯೋಜನೆಗಳ ಮೂಲಕ ಸಮಾಜವನ್ನು ತಲುಪುತ್ತಿದೆ, ವಿದ್ಯಾ ಪ್ರಾಜೆಕ್ಟ್ – ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವುದು, ಶ್ರೀ ಪ್ರಾಜೆಕ್ಟ್ – ಪರಿಸರ ಸಂರಕ್ಷಣೆ ಮಾಡುವುದು, ಸಾವಿತ್ರಿ ಪ್ರಾಜೆಕ್ಟ್ – ಹೆಣ್ಣುಮಕ್ಕಳ ಸಬಲೀಕರಣ ಮಾಡುವುದು, ರಘು ಪ್ರಾಜೆಕ್ಟ್ – ಅಂಗನವಾಡಿಯ ಕಾರ್ಯಕರ್ತೆಯರ ಅಭಿವೃದ್ಧಿಗೆ, ಪ್ರಾಣಿ ರಕ್ಷಣೆ ಮತ್ತು ಹೀಗೆ ಹಲವಾರು ಯೋಜನೆಗಳ ಮೂಲಕ ಸಮಾಜಸೇವೆಯ ಕಾರ್ಯವನ್ನು ಸರ್ವೋದಯ ಫೌಂಡೇಶನ್ ಮಾಡುತ್ತಾ ಬಂದಿದೆ. ಸಮಾಜಸೇವೆಯ ಮೂಲಕ ಸಮಾಜದ ಅಭಿವೃದ್ಧಿಗೆ ದುಡಿಯುತ್ತಿದೆ ಈ ಅಂಶಗಳನ್ನು ಹೊಸ ಶಿಕ್ಷಣ ನೀತಿ ಹೊಂದಿದ್ದು ಮುಂದಿನ ಪೀಳಿಗೆ ಸದೃಢ ಮತ್ತು ಸಮೃದ್ಧಿ ಭಾರತ ನಿರ್ಮಾಣದತ್ತ ಹೆಜ್ಜೆ ಇಡುವಲ್ಲಿ ಸಹಾಯಕಾರಿ ಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶ್ರೀ ರಮೇಶ್ ಕುಮಾರ್ ಆರ್, ಡಿ ಡಿ ಆರ್ ಎಫ್, ರೋಟರಿ ಡಿಸ್ಟಿಕ್ 3190, ಶ್ರೀ ನಾವ್ ಕಿಶ್ಲೇ, ಸಂಸ್ಥಾಪಕರು ಮತ್ತು ನಿರ್ದೇಶಕರು, ಅರ್ಕಮೈಂಡ್ ಕಾನ್ಸುಲ್ಟ್ಯಾಂನ್ಸಿ ಪ್ರೈವೇಟ್ ಲಿಮಿಟೆಡ್, ವಾರದ ಚರ್ಚೆಯಲ್ಲಿ ಮಾತನಾಡಿ ಯಾವ ರೀತಿಯಲ್ಲಿ ತಮ್ಮ ತಮ್ಮ ಸಂಸ್ಥೆಗಳು ಸಾಮಾಜ ಸೇವೆಯಲ್ಲಿ ತೊಡಗಿದ್ದು, ಯಾವ ಹೊಸ ಯೋಜನೆಗಳ ಮೂಲಕ ಜನರನ್ನು ತಲುಪಿದ್ದೇವೆ ಎಂದು ವಿವರಿಸಿದರು.
ವಾರದ ಚರ್ಚೆಯಲ್ಲಿ ಮಾತನಾಡಿದ ಅಸ್ಮಾ ಖಾನ್, ಸದಸ್ಯರು, ಯುನಿಸೆಫ್- ಯುವಸ್ ಯಂಗ್ ಪೀಪಲ್ ಆಕ್ಷನ್ ಟೀಮ್, ಮಿಸ್ ಅಂಕಿತ ಸಹದೇವ್, ಸದಸ್ಯರು, ಯುನಿಸೆಫ್- ಯುವಸ್ ಯಂಗ್ ಪೀಪಲ್ ಆಕ್ಷನ್ ಟೀಮ್, ಮಿಸ್ಟರ್ ಭರತ್ ಬನ್ಸಲ್, ಸದಸ್ಯರು, ಯುನಿಸೆಫ್ -ಯುವಸ್ ಯಂಗ್ ಪೀಪಲ್ ಆಕ್ಷನ್ ಟೀಮ್, ಮಿಸ್ಟರ್ ಅಶುತೋಷ್ ವರ್ಮ, ಸದಸ್ಯರು, ಯುನಿಸೆಫ್ -ಯುವಸ್ ಯಂಗ್ ಪೀಪಲ್ ಆಕ್ಷನ್ ಟೀಮ್, ಯುನಿಸೆಫ್ -ಯುವಸ್ ಯುವಕರಿಗೆ ಮಾಡಿರುವ ವೇದಿಕೆ. ಇದನ್ನು ಯುವಕರು ತಮ್ಮ ಶ್ರೇಯೋಭಿವೃದ್ಧಿಗೆ ಮತ್ತು ಸಮಾಜದ ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳಬೇಕು. ಸಮಾಜ ನಿರ್ಮಾಣದತ್ತ ಯುವಜನತೆಯನ್ನು ಕೊಂಡೊಯ್ಯುವ ಯುವ ವೇದಿಕೆ ಇದಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಟೆಕ್ ಅವಾಂತ ಗಾರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲಿ ಸೇಠ್ ಮಾತನಾಡಿ, “ಭಾರತದ ಪರಂಪರೆಯಲ್ಲಿ ಸೇವೆ ಅನ್ನುವುದು ಇದೆ,ಭಾರತದ ಪ್ರತಿ ಪ್ರಜೆಯಲ್ಲೂ ಸೇವಾ ಮನೋಭಾವ ತುಂಬಿದೆ. ಶಿಕ್ಷಣವೆಂದರೆ ವ್ಯಕ್ತಿಗತ ಅಭಿವೃದ್ಧಿಯಲ್ಲ ಅದು ಸಮಾಜ ನಿರ್ಮಾಣದ ಆಲಯ. ನೂತನ ಶಿಕ್ಷಣ ನೀತಿಯು ಇವುಗಳನ್ನು ಒಳಗೊಂಡಿದ್ದು ಕೇವಲ ಶಿಕ್ಷಣವನ್ನು ಕೊಡುವುದಲ್ಲದೆ ಸಮಾಜದ ಅಭಿವೃದ್ಧಿಗೆ ದುಡಿಯುವುದು ಹೇಗೆ ಎಂದು ತೋರಿಸುತ್ತದೆ ಇವುಗಳ ಜೊತೆ ಕೈಜೋಡಿಸಿ ಟೆಕ್ ಅವಾಂತ ಗಾರ್ಡ್ ದುಡಿಯುತ್ತಿದೆ ಎಂದು ತಿಳಿಸಿದರು”.