ಸಮಾಜ ಸೇವಕ ವಕೀಲ   ರಾಘವೇಂದ್ರ ರಾವ್‌ರವರಿಗೆ “ಸೇವಾರತ್ನ” ಬಿರುದು ಪ್ರದಾನ

Spread the love

ಸಮಾಜ ಸೇವಕ ವಕೀಲ   ರಾಘವೇಂದ್ರ ರಾವ್‌ರವರಿಗೆ “ಸೇವಾರತ್ನ” ಬಿರುದು ಪ್ರದಾನ

ಮಂಗಳೂರು: 75ನೇ ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ಸಮಾಜದಲ್ಲಿ ಉತ್ತಮ ಸೇವೆಗಳನ್ನು ಮಾಡಿದ ಗಣ್ಯ ವ್ಯಕ್ತಿಗಳನ್ನು ಗುರುತಿಸಿ “ಸೇವಾರತ್ನ” ಬಿರುದನ್ನು ನೀಡಲಾಯಿತು.

ವಕೀಲ ವೃತ್ತಿಯೊಂದಿಗೆ ಸಾಮಾಜಿಕ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಂಗಳೂರಿನ ಖ್ಯಾತ ನ್ಯಾಯವಾದಿ ಹಾಗು ನೋಟರಿ ಶ್ರೀ ರಾಘವೇಂದ್ರ ರಾವ್‌ರವರಿಗೆ ಮ್ಯಾಕ್ಸ್ ಲೈಫ್ ಸಂಸ್ಥೆಯು”ಸೇವಾ ರತ್ನ ಪ್ರಶಸ್ತಿ” ನೀಡಿ ಗೌರವಿಸಿತು. ಈ ಸಂದರ್ಭದಲ್ಲಿ ಅವರ ಉತ್ತಮ ಸೇವೆಗಳನ್ನು ನೆನಪಿಸಿ ಕೊಳ್ಳಲಾಯಿತು.

ರಾಘವೆಂದ್ರ ರಾವ್ ಅವರು ಲಾಕ್ಡೌನ್ ಸಮಯದಲ್ಲಿ ವಿರಾಮಿಸದೆ ಸಾವಿರಾರು ಮಂದಿಗೆ ಆಹಾರ, ಅತ್ಯಾಗತ್ಯ ವಸ್ತುಗಳ ಪೂರೈಕೆ, ಬಡವಿದ್ಯಾರ್ಥಿಗಳಿಗೆ ಪುಸ್ತಕ ಹಾಗು ಲೇಖನಿ ಸಾಮಗ್ರಿಗಳು ಮತ್ತು ಸಮವಸ್ತ್ರ ವಿತರಣೆ, ರಕ್ತದಾನ ಶಿಬಿರ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಹಾಗು ಇನ್ನು ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತನನ್ನು ತೊಡಗಿಸಿಕೊಂಡಿದ್ದರು.

ಮಾತ್ರವಲ್ಲದೇ ಸಮಾಜದ ಬಡವರ್ಗದ ಜನರಿಗೆ ಉಪಯೋಗವಾಗಲಿ ಎಂದು ತನ್ನ ಅಂಗಾಂಗಳನ್ನು ದಾನ ಮಾಡುವ ಬಗ್ಗೆ ಬರೆದು ಕೊಟ್ಟು ಇಂದಿನ ಯುವಪೀಳಿಗೆಗೆ ಮಾದರಿ ಎನಿಸಿಕೊಂಡಿದ್ದಾರೆ. ಈ ರೀತಿ ಇವರ ಉತ್ತಮ ಸೇವಾ ಕಾರ್ಯವನ್ನು ಗುರುತಿಸಿ ಅವರಿಗೆ “ಸೇವಾರತ್ನ” ಬಿರುದನ್ನು ನೀಡಲಾಯಿತು ಎಂದು ಮಂಗಳೂರು ಮ್ಯಾಕ್ಸ್ ಲೈಫ್‌ನ ಕಛೇರಿ ಮುಖ್ಯಸ್ಥರಾದ ಶ್ರೀ ಸತೀಶ್ ಮೆನನ್ ತಿಳಿಸಿದ್ದಾರೆ.

ಲಯನ್ ಪ್ರದೀಪ್ ಕುಮಾರ್ ಅಥಿತಿಗಳಾಗಿದ್ದರು. ಮಂಗಳೂರು ಮ್ಯಾಕ್ಸ್ ಲೈಫ್‌ನ ಕಛೇರಿ ಮ್ಯಾನೇಜರ್ ಶ್ರೀ ಆನಂದನ್, ಸಲಹೆಗಾರ ಶ್ರೀಮತಿ ಗೀತಾ ಹಾಗು ಸಂಸ್ಥೆಯ ಇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love