ಸಮುದಾಯಗಳ ಓಲೈಕೆಯಲ್ಲಿ ಬಜೆಟ್ ಸಂಭ್ರಮ – ಭಾಸ್ಕರ್‌ ರಾವ್‌ ಕಿದಿಯೂರು

Spread the love

ಸಮುದಾಯಗಳ ಓಲೈಕೆಯಲ್ಲಿ ಬಜೆಟ್ ಸಂಭ್ರಮ – ಭಾಸ್ಕರ್‌ ರಾವ್‌ ಕಿದಿಯೂರು

ಉಡುಪಿ: ಮುಂದಿನ ವರ್ಷ ಚುನಾವಣಾ ವರ್ಷವಾಗಿರುವುದರಿಂದ ಎಲ್ಲಾ ಸಮುದಾಯದ ಸಮುದಾಯಗಳ ಓಲೈಕೆಯಲ್ಲಿ ಬಜೆಟ್ ಮಂಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ವಕ್ತಾರರಾದ ಭಾಸ್ಕರ್‌ ರಾವ್‌ ಕಿದಿಯೂರು ಹೇಳಿದ್ದಾರೆ.

ಮುಂದಿನ ವರ್ಷ ಚುನಾವಣಾ ವರ್ಷವಾಗಿರುವುದರಿಂದ ಎಲ್ಲಾ ಸಮುದಾಯದ ನಿಗಮಗಳಿಗೆ ಬರಪೂರ ಅನುದಾನ ನೀಡಲಾಗಿದೆ. ಕರಾವಳಿ ಪ್ರದೇಶಕ್ಕೆ ನಾರಾಯಣ ಗುರುಗಳ ಹೆಸರನ್ನು ನೀಡಿ ವಸತಿ ಶಾಲೆಯ ಕೊಡುಗೆ ನೀಡಲಾಗಿದೆ. ಮಹಿಳೆಯರನ್ನು ಸಂತೃಪ್ತಿಪಡಿಸಲು ವಿಚ್ಚೇದಿತ ಮಹಿಳೆ ವಿಧವಾ ವೇತನ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಅವಿವಾಹಿತ ಮಹಿಳೆಯರಿಗೆ ನೀಡುವ ಸಹಾಯಧನವನ್ನು ಹೆಚ್ಚಳಗೊಳಿಸಲಾಗಿದೆ. ಒಟ್ಟು 14,699 ಕೋಟಿ ರಜಸ್ವ ಕೊರತೆಯಿರುವ ಬಜೆಟ್‍ನಿಂದಾಗಿ ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುವುದು ಎಂದು ಅವರು ಹೇಳಿದ್ದಾರೆ.


Spread the love