ಸಮುದ್ರಕ್ಕೆ ಬಿದ್ದ ಗೆಳತಿಯನ್ನು ರಕ್ಷಿಸಲು ತೆರಳಿದ್ದ ಯುವಕ ಸಾವು

Spread the love

ಸಮುದ್ರಕ್ಕೆ ಬಿದ್ದ ಗೆಳತಿಯನ್ನು ರಕ್ಷಿಸಲು ತೆರಳಿದ್ದ ಯುವಕ ಸಾವು

ಮಂಗಳೂರು: ಯುವತಿಯೋರ್ವಳು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ರಕ್ಷಿಸಲು ಹೋದ ಯುವಕ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮೇಶ್ವರದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಮೃತರನ್ನು ರಾಣಿಪುರದ ಲಾಯ್ಡ್ ಡಿಸೋಜ (28) ಮೃತರು ಎಂದು ಗುರುತಿಸಲಾಗಿದೆ.

ಲಾಯ್ಡ್‌ ಅವರು ತನ್ನ ಪ್ರೇಯಸಿ ಜೊತೆ ಸೋಮೇಶ್ವರ ಬೀಚ್‌ ಗೆ ತೆರಳಿದ್ದು, ಕಲ್ಲಿನ ಮೇಲೆ ಇಬ್ಬರು ಕುಳಿತಿದ್ದ ಸಮಯದಲ್ಲಿ ಯುವತಿ ಜಾರಿ ನೀರಿಗೆ ಬಿದ್ದಿದ್ದು ಆಕೆಯನ್ನು ರಕ್ಷಿಸಲು ತೆರಳಿದ್ದ ಸಂದರ್ಭದಲ್ಲಿ ಸಮುದ್ರದಲ್ಲಿ ಕಲ್ಲು ತಲೆಗೆ ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ನೀರಿಗೆ ಬಿದ್ದ ಯುವತಿಯನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಲಾಯ್ಡ್‌ ಈ ಮೊದಲು ವಿದೇಶದಲ್ಲಿ ಕೆಲಸದಲ್ಲಿದ್ದು ಇತ್ತೀಚೆಗೆ ಊರಿಗೆ ಮರಳಿ ಹೊಸ ಉದ್ಯಮವನ್ನು ಆರಂಭಿಸಿದ್ದರು.

ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love