ಸಮುದ್ರ ಪ್ರಕ್ಷುಬ್ದ ಹಿನ್ನಲೆ:  ಜಲಕ್ರೀಡಾ ಬೋಟ್ ಚಟುವಟಿಕೆ ಹಾಗೂ ಸೈಂಟ್ ಮೆರೀಸ್ ದ್ವೀಪ ಪ್ರಯಾಣ ಸ್ಥಗಿತ

Spread the love

ಸಮುದ್ರ ಪ್ರಕ್ಷುಬ್ದ ಹಿನ್ನಲೆ:  ಜಲಕ್ರೀಡಾ ಬೋಟ್ ಚಟುವಟಿಕೆ ಹಾಗೂ ಸೈಂಟ್ ಮೆರೀಸ್ ದ್ವೀಪ ಪ್ರಯಾಣ ಸ್ಥಗಿತ

ಉಡುಪಿ: ಪ್ರಸ್ತುತ ಉಂಟಾಗಿರುವ ಚಂಡಮಾರುತದಿಂದ ಅರಬೀ ಸಮುದ್ರದಲ್ಲಿ ತೀವ್ರವಾದ ಗಾಳಿ ಹಾಗೂ ದೊಡ್ಡ ಅಲೆಗಳು ಉದ್ಭವಿಸಿರುವದರಿಂದ ಸಮುದ್ರವು ಪ್ರಕ್ಷುಬ್ದಗೊಂಡಿದ್ದು, ಅಪಾಯಕಾರಿಯಾಗಿರುವುದರಿಂದ ಪ್ರವಾಸಿಗರು ಸಮುದ್ರಕ್ಕೆ ಇಳಿಯಬಾರದು.

ಪ್ರವಾಸೀ ಬೋಟ್ ಮಾಲೀಕರು, ಬೀಚ್ ಪ್ರದೇಶದಲ್ಲಿ ನಡೆಸಲಾಗುವ ಜಲಕ್ರೀಡಾ ಬೋಟ್ ಚಟುವಟಿಕೆ ಹಾಗೂ ಸೈಂಟ್ ಮೆರೀಸ್ ದ್ವೀಪಕ್ಕೆ ಪ್ರಯಾಣಿಸುವ ಎಲ್ಲಾ ಪ್ರವಾಸ ಬೋಟ್‌ಗಳನ್ನು ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲಾಡಳಿತದ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸುವಂತೆ ನಗರಸಭೆ ಪೌರಾಯುಕ್ತರು ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love