ಸರಕಾರ ಹಬ್ಬಗಳ ಆಚರಣೆಯ ನಿಯಮ ಸಡಿಲಿಸಲಿ: ಜೆಡಿಎಸ್ ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ

Spread the love

ಸರಕಾರ ಹಬ್ಬಗಳ ಆಚರಣೆಯ ನಿಯಮ ಸಡಿಲಿಸಲಿ: ಜೆಡಿಎಸ್ ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ

ಮಂಗಳೂರು: ರಾಜ್ಯ ಸರಕಾರವು ಧಾರ್ಮಿಕ ಹಬ್ಬಗಳ ಆಚರಣೆಗಳ ಬಗ್ಗೆ ಕಠಿಣ ಆದೇಶವನ್ನು ಹೊರಡಿಸಿದ್ದು, ಇದು ಸರಿಯಲ್ಲ ಕಳೆದ ವರ್ಷವೂ ಕೂಡ ಈ ಹಬ್ಬಗಳನ್ನು ಶ್ರದ್ದಾ ಪೂರ್ವವಾಗಿ ಆಚರಿಸಿದು ಜನಸಾಮಾನ್ಯರಿಗೆ ಅವಕಾಶ ದೊರಕಿರಲಿಲ್ಲ.

ಆದರೆ ಇದೀಗಾ ಹಬ್ಬಗಳ ಆಚರಣೆಯ ಹಂತದಲ್ಲಿರುವಾಗ ಸರಕಾರವು ಕೊರೋನಾ 2ನೇ ಅಲೆಯ ಭೀತಿಯ ನೆಪವೊಡ್ಡಿ ಈ ಅದೇಶವನ್ನು ಹೊರಡಿಸಿದೆ. ಕಳೆದ ಹಲವು ದಿನಗಳಿಂದ ಸಭೆ ಸಮಾರಂಭಗಳು, ಸಮಾವೇಶಗಳು ಹಾಗೂ ಇನ್ನೀತರ ಯಾವುದೇ ಆಚರಣೆಯ ಹಗಲು ರಾತ್ರಿ ನಡೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ದಿಢಿರನೆ ಈ ರೀತಿಯ ಕ್ರಮ ಕೈಗೊಂಡಿರುವುದು ಉದ್ದೇಶ ಪೂರ್ವಕವಾರಿರುವುದೆಂದು ಜನಾಭಿಪ್ರಾಯವಾಗಿದೆ.

ಯಾವುದೇ ಧಾರ್ಮಿಕ ಆಚರಣೆಗೂ ಪ್ರಾರ್ಥನಾ ಮಂದಿರಗಳಲ್ಲಿ ಭಕ್ತಿ ಶ್ರದ್ದೆಯಿಂದ ಆಚರಿಸಲು ಅವಕಾಶ ನೀಡಬೇಕು. ಮಾಸ್ಕ್ ಧರಿಸಲು ಹಾಗೂ ಸ್ಯಾನಿಟೈಸರನ್ನು ಅಳವಡಿಸಲು ಕ್ರಮ ಕೈಗೊಳ್ಳಲಿ. ಯಾಕೆಂದರೆ ಪ್ರಾರ್ಥನಾ ಮಂದಿರಗಳಲ್ಲಿ ದೈವ ಭಕ್ತಿ ಮೂಲಕ ಕೊರೊನಾ ಎಂಬ ಮಹಾ ಮಾರಿಯನ್ನು ದೂರವಿಡಲು ದೇವರಲ್ಲಿ ಪ್ರಾರ್ಥಿಸಲು ದೊರಕುವ ಒಳ್ಳೆಯ ಅವಕಾಶವಾಗಿರುತ್ತದೆ. ಸಾಂಸ್ಕ್ರತಿಕ ಅಡಂಬರದ ಅಚರಣೆಗೆ ಅವಕಾಶ ನೀಡದಿರಲಿ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲೆಯ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಜನ ಪ್ರತಿನಿದಿಗಳು ಈ ಗೊಂದಲವನ್ನು ಕೂಡಲೇ ನಿವಾರಿಸಬೇಕೆಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಅಗ್ರಹಿಸಿದ್ದಾರೆ.


Spread the love