ಸರಣಿ ಕಳ್ಳತನ ಪ್ರಕರಣ ಭೇದಿಸಿದ ಬಂಟ್ವಾಳ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್ ವಿಶೇಷ ತಂಡ

Spread the love

ಸರಣಿ ಕಳ್ಳತನ ಪ್ರಕರಣ ಭೇದಿಸಿದ ಬಂಟ್ವಾಳ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್ ವಿಶೇಷ ತಂಡ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ವಿಟ್ಲ, ಉಪ್ಪಿನಂಗಡಿ, ಪುತ್ತೂರು ಭಾಗದಲ್ಲಿ ಸರಣಿ ಕಳ್ಳತನಗಳು ಹೆಚ್ಚಿದ ಹಿನ್ನಲೆಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್ ರವರ ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕರಾದ ಅವಿನಾಶ್ ಮತ್ತು ಕಲೈಮಾರ್, ಬಂಟ್ವಾಳ ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಪ್ರಸನ್ನ ಮತ್ತು ಸಂಜೀವ್, ವಿಟ್ಲ ಠಾಣಾ ಉಪನಿರೀಕ್ಷಕರಾದ ವಿನೋದ್ ರೆಡ್ಡಿ, ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕರಾದ ಈರಯ್ಯ , ಡಿಸಿಐಬಿ ಮತ್ತು ಠಾಣಾ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಆರೋಪಿಗಳನ್ನು ಅರ್ಕುಳ ವಳಚ್ಚಿಳ್ ನಿವಾಸಿ ಅಮ್ಮೀ ಯಾನೆ ಅಮರುದ್ದಿನ್, ಮಂಗಳೂರು ಕಣ್ಣೂರು ನಿವಾಸಿಗಳಾದ ಮಹಮದ್ ಯೂನಸ್ ಮತ್ತು ಹಫೀಸ್ ಯಾನೆ ಅಪ್ಪಿ, ಸಜಿಪಮೂಡ ಗ್ರಾಮದ ಪೆರ್ವಾ ನಿವಾಸಿ ಫಾರೂಕ್ ಯಾನೆ ಉಮ್ಮರ್ ಫಾರೂಕ್ ಯಾನೆ ಕಳ್ಳ ಫಾರೂಕ್ (27) ಹಾಗೂ ಮಂಗಳೂರು ಬೆಂಗ್ರೇ ನಿವಾಸಿ ಮಹಮ್ಮದ್ ಸಫ್ವಾನ್ ಯಾನೆ ಸರತ್ ಯಾನೆ ಕರೂ ಯಾನೆ ಸರೂ ಯಾನೆ ಸಫ್ವಾನ್ (19) ಎಂದು ಗುರುತಿಸಲಾಗಿದೆ.

ಬಂಧಿತರು ಒಟ್ಟು 13 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಸದರಿ ಆರೋಪಿಗಳಿಂದ 3 ಬೈಕ್ ,ಒಂದು ಮೊಬೈಲ್, 6 DVR set box , 14 ಜೀವಂತ ಗುಂಡು, 2 ಮಾನಿಟರ್, ಬ್ರಾಡ್ ಬ್ಯಾಂಡ್ ಒ ಎಲ್ ಟಿ ಬಾಕ್ಸ್ ಪತ್ತೆ ಹಚ್ಚುವ ಮತ್ತು ರೂ 40,000 ಸಾವಿರ ಹಣ ಸೇರಿದಂತೆ ಒಟ್ಟು ಅಂದಾಜು ರೂ 4,80,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿರುತ್ತಾರೆ.


Spread the love