ಸರಳ ಕೊಡಿಹಬ್ಬ – ಸರ್ಕಾರದ ಕೋವಿಡ್ – 19 ಮಾರ್ಗಸೂಚಿಯನ್ವಯ ಮುಂಜಾಗ್ರತೆ

Spread the love

ಸರಳ ಕೊಡಿಹಬ್ಬ – ಸರ್ಕಾರದ ಕೋವಿಡ್ – 19 ಮಾರ್ಗಸೂಚಿಯನ್ವಯ ಮುಂಜಾಗ್ರತೆ

ಕುಂದಾಪುರ: ಇದೇ ನ.19 ರಂದು ಕೋಟೇಶ್ವರದ ಐತಿಹಾಸಿಕ ಶ್ರೀ ಕೋಟಿಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಕೊಡಿಹಬ್ಬವು ನಡೆಯಲಿದ್ದು, ಹಬ್ಬದ ಧಾರ್ಮಿಕ ವಿಧಿಗಳು, ದೇವರ ಪುರಮೆರವಣಿಗೆ ಈಗಾಗಲೇ ಆರಂಭಗೊಂಡಿವೆ. ಈ ನಡುವೆ ಹವಾಮಾನ ವೈಪರೀತ್ಯದಿಂದಾಗಿ ಪ್ರತಿದಿನವೂ ಸುರಿಯುತ್ತಿರುವ ಮಳೆ, ಜನರು ಮತ್ತು ವ್ಯಾಪಾರಿಗಳಲ್ಲಿ ಹಬ್ಬದ ಉತ್ಸಾಹವನ್ನೇ ಕುಂದಿಸಿದೆ.

ನ12ರಿಂದ ಮೊದಲ್ಗೊಂಡು ಹಬ್ಬದ ಕಾರ್ಯಕ್ರಮಗಳು ನ.20ರವರೆಗೂ ನಡೆಯುತ್ತವೆ. ದೇವಳ ವ್ಯವಸ್ಥಾಪನಾ ಸಮಿತಿಯು ಎಲ್ಲ ಪೂರ್ವ ತಯಾರಿಗಳನ್ನೂ ನಡೆಸಿದ್ದು, ಸರ್ಕಾರದ ಮಾರ್ಗಸೂಚಿಗಳನ್ವಯ ಕೋವಿಡ್ – 19 ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸರಳ ರೀತಿಯಲ್ಲಿ ಹಬ್ಬ ಆಚರಿಸಲು ನಿರ್ಧರಿಸಿದೆ. ಸಾರ್ವಜನಿಕ ಭಕ್ತಾಭಿಮಾನಿಗಳೂ ಸರ್ಕಾರದ ಸೂಚನೆಯನ್ನು ಅನುಸರಿಸಿ ಸರಳ ಹಬ್ಬಾಚರಣೆಗೆ ಸಹಕರಿಸಬೇಕು ಎಂದು ವ್ಯವಸ್ಥಾಪನಾ ಸಮಿತಿ ಪ್ರಕಟಣೆಯ ಮೂಲಕ ಮನವಿ ಮಾಡಿದೆ.


Spread the love