ಸರ್ಕಾರದ ಸವಲತ್ತು ತಲುಪಿಸಲು ಗ್ರಾಮವಾಸ್ತವ್ಯ:ಆರ್.ಅಶೋಕ್

Spread the love

ಸರ್ಕಾರದ ಸವಲತ್ತು ತಲುಪಿಸಲು ಗ್ರಾಮವಾಸ್ತವ್ಯ:ಆರ್.ಅಶೋಕ್

ಎಚ್.ಡಿ.ಕೋಟೆ: ವಿಧಾನಸೌಧದ ಎಸಿ ಕೊಠಡಿಯಲ್ಲಿ ಕೂತರೆ ಜನರ ಸಮಸ್ಯೆ ತಿಳಿಯಲ್ಲ, ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸಿ ಅವರಿಗೆ ಸಿಗಬೇಕಾದ ಸರ್ಕಾರದ ಸವಲತ್ತು ತಲುಪುವ ನಿಟ್ಟಿನಲ್ಲಿ ತಿಂಗಳಲ್ಲಿ ಒಂದು ದಿನ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ತಾಲ್ಲೂಕಿನ ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೀಮನಕೊಲ್ಲಿ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಸವಲತ್ತು ವಿತರಿಸಿ ಮಾತನಾಡಿದರು.

ನಮ್ಮ ದೇಶ ಶೇ.70ರಷ್ಟು ಹಳ್ಳಿಗಳ ದೇಶವಾಗಿದ್ದು ಸರ್ಕಾರದ ಸವಲತ್ತುಗಳು ಸರಿಯಾಗಿ ಜನರಿಗೆ ತಲುಪದ ಕಾರಣ ಗ್ರಾಮೀಣ ಪ್ರದೇಶದ ಜನರು ಪಟ್ಟಣಕ್ಕೆ ವಲಸೆ ಹೋಗುತ್ತಿದ್ದಾರೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದಂತೆ ಹಳ್ಳಿಗಳ ಉದ್ಧಾರ ಆದರೆ ಮಾತ್ರ ನಮ್ಮ ರಾಜ್ಯದ ಕನಸು ನನಸಾಗಲು ಸಾಧ್ಯ, ಜನರ ಮನೆ ಬಾಗಿಲಿಗೆ ಸರ್ಕಾರವೇ ಹೋಗಬೇಕು ಅಲ್ಲಿ ಜನರ ಸಮಸ್ಯೆ ಹರಿತು ಸರ್ಕಾರದ ಸವಲತ್ತುಗಳು ಪ್ರತಿಯೊಬ್ಬರಿಗೂ ಸಿಗುವಂತೆ ಆಗಬೇಕು, ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳೇ ಗ್ರಾಮ ವಾಸ್ತವ್ಯ ಕೈಗೊಂಡು ಜನರ ಕಷ್ಟ ಕೇಳಿದರೆ ಎಷ್ಟೋ ಸಮಸ್ಯೆಗಳು ಸ್ಥಳದಲ್ಲೇ ಪರಿಹಾರವಾಗುತ್ತದೆ ಎಂದರು.

ಅರ್ಹ ಫಲಾನುಭವಿಗಳು, ರೈತರು ತಮ್ಮ ಸಮಸ್ಯೆಗಳ ಈಡೇರಿಕೆಗಾಗಿ ಅರ್ಜಿ ಹಾಕಿದರೂ ಕೆಲಸ ನೆರವೇರದೆ ಕಚೇರಿಗಳಿಗೆ ದಿನನಿತ್ಯ ಅಲೆಯುವುದನ್ನು ಕಂಡಿದ್ದೇನೆ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಪೌತಿ ಖಾತೆ ವೇಳೆ ಕುಟುಂಬದ ಹೆಣ್ಣು ಮಕ್ಕಳ ಪರಿಗಣನೆ ಹಾಗೂ 94 ಸಿ ಕಾಯ್ದೆಗೆ ತಿದ್ದುಪಡಿ ತಂದು ಮನೆ ಕಟ್ಟಿಕೊಂಡಿರುವವರಿಗೆ ಹಕ್ಕು ಪತ್ರ ನೀಡುವ ಕೆಲಸ ನಡೆಯುತ್ತಿದೆ, ಉಳುಮೆ ಮಾಡುವ ರೈತರಿಗೆ ಯಾವುದೇ ಕ್ರಿಮಿನಲ್ ಕೇಸ್ ಹಾಕಬಾರದು. ಈ ದಿಶೆಯಲ್ಲಿ ಇದ್ದ ಕಾನೂನನ್ನೇ ನಾನು ಬಂದ ಮೇಲೆ ತೆಗೆದುಹಾಕಿದ್ದೇನೆ, ರೈತಾಪಿ ಜನಕ್ಕೆ ಉಪಯೋಗವಾಗಲಿ ಎಂದು ಕೋಳಿ ಸಾಕಣೆಯನ್ನು ಕೃಷಿಗೆ ತರಲಾಗಿದೆ. ಎಸ್ಸಿ ಎಸ್ಟಿ ಜಮೀನಲ್ಲಿ ಮನೆ ಕಟ್ಟಿಕೊಳ್ಳಲು ಭೂ ಪರಿವರ್ತನೆಗೆ ಮೊದಲು ಆರು ತಿಂಗಳು ಬೇಕಿತ್ತು ನಾನು ಬಂದ ಮೇಲೆ 7 ದಿನದಲ್ಲಿ ಆಗಲಿದೆ ಇಂದು ಸಚಿವರು ಅಲೆದಾಟ ಸುತ್ತಾಟ ಯಾವುದು ಇಲ್ಲ ಮನೆ ಬಾಗಿಲಿಗೆ ಖಾತೆ, ಕಂದಾಯ ಎಲ್ಲ ಬರಬೇಕು ಆ ನಿಟ್ಟಿನಲ್ಲಿ ಎಲ್ಲ ಕಾಯ್ದೆ, ಕಾನೂನುಗಳನ್ನು ಸರಳೀಕರಣ ಮಾಡಲಾಗಿದೆ ಎಂದು ತಿಳಿಸಿದರು.


Spread the love

Leave a Reply

Please enter your comment!
Please enter your name here