
ಸರ್ಕಾರಿ ಪ್ರೌಢಶಾಲೆ ನೆಂಪು: 2000-01ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪುನರ್ಮಿಲನ, ಗುರುವಂದನೆ
ಸರ್ಕಾರಿ ಪ್ರೌಢಶಾಲಾ ನೆಂಪು-ವಂಡ್ಸೆ ಇಲ್ಲಿನ 2000-2001 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು 22 ವರ್ಷಗಳ ಬಳಿಕ ಪುನರ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಚಿತ್ತೂರಿನ ಸಕಲ ಕನ್ವೆನ್ಷನ್ ಹಾಲ್ನಲ್ಲಿ ಜ.15ರಂದು ನಡೆಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ರಾಜು ಶೆಟ್ಟಿ, ಕೃಷ್ಣಕುಮಾರ್, ಗೋವಿಂದ ರಾಯ್, ಚಂದ್ರ ಶೆಟ್ಟಿ, ಸುಭಾಷಿಣಿ, ಅಶ್ವಥ್, ಉದಯ, ನಾಗರಾಜ್, ಹೆರಿಯಣ್ಣ, ರಾಘವೇಂದ್ರ, ರಾಮ್ ಜಿ, ಸುರೇಶ್, ಸುಭಾಶ್ಚಂದ್ರ ಶೆಟ್ಟಿ ಇವರುಗಳಿಗೆ ಗುರುವಂದನೆ ಸಲ್ಲಿಸಿದರು. ಮತ್ತೆ ಇಪ್ಪತ್ತೆರಡು ವರ್ಷ ಹಿಂದಕ್ಕೆ ಕರೆದೋಯ್ದ ವಿದ್ಯಾರ್ಥಿಗಳ ಕಾರ್ಯವೈಖರಿಯನ್ನು ಶಿಕ್ಷಕರು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಉದಯ್ ಆಚಾರ್ಯ ನಿರ್ವಹಿಸಿದರು. ಹರೀಶ್ ಭಟ್ ಗುಡ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು. 22 ವರ್ಷಗಳ ಹಿಂದೆ ಒಟ್ಟಿಗೆ ವ್ಯಾಸಂಗ ಮಾಡಿ ಬಳಿಕ ಕವಲೊಡೆದ ರಂಗದಲ್ಲಿ ಸಾಗಿ, ಪ್ರಸ್ತುತ ಬೇರೆ ಬೇರೆ ವೃತ್ತಿಗಳಲ್ಲಿ, ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಅಂದಿನ ವಿದ್ಯಾರ್ಥಿಗಳು ಮತ್ತೆ ಒಂದಾಗಿ ಅಂದಿನ ನೆನಪುಗಳ ಹಂಚಿಕೊಂಡರು. ಮತ್ತೆ ಹೈಸ್ಕೂಲ್ ಜೀವನದ ನೆನಪಿನೊಂದಿಗೆ ಅಂದು ವಿದ್ಯಾದಾನ ಮಾಡಿದ ಗುರುಗಳನ್ನು ಗೌರವಪೂರ್ವಕವಾಗಿ ಗೌರವಿಸಿ ಧನ್ಯತೆ ಮೆರೆದರು.