
ಸರ್ವ ಸ್ಪರ್ಶಿ, ಸರ್ವ ವ್ಯಾಪಿ, ಪ್ರಗತಿ ಪೂರಕ ಸ್ವಾಗತರ್ಹ ಬಜೆಟ್- ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು 2023-24ರ ಆಯವ್ಯಯವನ್ನು ಆರು ವಲಯಗಳಲ್ಲಿ ಮಂಡಿಸಿರುವುದು ಅತ್ಯಂತ ಸ್ವಾಗತಾರ್ಹ. ರಾಜ್ಯದ ಎಲ್ಲಾ ವರ್ಗಗಳ ಜನರನ್ನು ಗಮನದಲ್ಲಿರಿಸಿ ಮಂಡಿಸಿದ 3 ಲಕ್ಷ 9 ಸಾವಿರ 182 ಕೋಟಿ ವೆಚ್ಚದ ಬಜೆಟ್ ವಿಶೇಷವಾಗಿ ವಿದ್ಯಾರ್ಥಿಗಳು, ಕೃಷಿಕರು, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ವಿಶೇಷ ಗಮನ ನೀಡಿರುವುದು ಅತ್ಯಂತ ಸ್ವಾಗತಾರ್ಹ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಮಟ್ಟದ ವರೆಗೆ ಉಚಿತ ಶಿಕ್ಷಣ, ಉಚಿತ ಬಸ್ಪಾಸ್, ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ವಿಶೇಷ ಅನುದಾನ, ಮೆಟ್ರಿಕ್ ನಂತರದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಹಾಗೂ ಶಿಕ್ಷಣಕ್ಕಾಗಿ ಗರಿಷ್ಠ ಮೊತ್ತದ ಅನುದಾನ ಶ್ಲಾಘನೀಯ ಹೆಜ್ಜೆಗಳು.
ಮೇಕೆದಾಟು, ಕೃಷ್ಣ, ಭದ್ರ ಹಾಗೂ ಇತರ ನೀರಾವರಿ ಯೋಜನೆಗಳಿಗೆ ನೀಡಿರುವ ಹೆಚ್ಚುವರಿ ಅನುದಾನ ಕೃಷಿ ಉತ್ಪಾದನೆಗೆ ಆದ್ಯತೆ ನೀಡಲಿದೆ.
ರೈತರಿಗಾಗಿ ಜೀವನ ಜ್ಯೋತಿ ವಿಮಾ ಯೋಜನೆ, ತೀರ್ಥಹಳ್ಳಿಯಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ, ತಿಪಟೂರಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆ, ಬಳ್ಳಾರಿಯಲ್ಲಿ 100 ಕೋಟಿ ವೆಚ್ಚದ “ಮೆಗಾ ಡೈರಿ” ಸ್ಥಾಪನೆ, ಬೈಂದೂರಿನಲ್ಲಿ “ಸೀಫುಡ್ ಪಾರ್ಕ್” ಸ್ಥಾಪನೆ, ಸಿರಿಧಾನ್ಯ ಬೆಳೆಯುವ ರೈತರಿಗೆ 10 ಸಾವಿರ ರೂಪಾಯಿ ಮೌಲ್ಯದ “ರೈತ ಸಿರಿ” ಸಹಾಯಧನ, ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ರೂಪಾಯಿ 10 ಸಾವಿರ ಸಹಾಯಧನ, ಅಲ್ಪಾವಧಿ ಬಡ್ಡಿ ರಹಿತ ಸಾಲದ ಮೊತ್ತವನ್ನು 5 ಲಕ್ಷ ರೂಗಳಿಗೆ ಏರಿಸಿರುವುದು ಹಾಗೂ 10 ಸಾವಿರ ಮೀನುಗಾರರಿಗೆ ವಸತಿ ಯೋಜನೆ, ಬೊಮ್ಮಾಯಿ ಸರ್ಕಾರದ ಕೃಷಿಕ ಪರನೀತಿಗೆ ಸಾಕ್ಷಿ.
ಆರೋಗ್ಯ ಕ್ಷೇತ್ರಕ್ಕೆ ಸಂಬAಧಿಸಿದAತೆ 6 ವರ್ಷ ವಯಸ್ಸಿನ ಒಳಗಿನ ಮಕ್ಕಳ ಆರೋಗ್ಯ ತಪಾಸಣೆಗಾಗಿ “ವಾತ್ಸಲ್ಯ” ಯೋಜನೆ, ರಕ್ತಹೀನತೆ ನಿವಾರಿಸಲು “ಆರೋಗ್ಯ ಪುಷಿ”್ಠ” ಯೋಜನೆ, ತಾಯಿ ಮಕ್ಕಳ ಆಸ್ಪತ್ರೆ ಸ್ಥಾಪನೆ, “ಅಂಗಾAಗ ಜೋಡಣೆ ಆಸ್ಪತ್ರೆ” ಸ್ಥಾಪನೆ ಹಾಗೂ ಕ್ಯಾನ್ಸರ್ ತಪಾಸಣೆಗಾಗಿ “ಜೀವಸುಧೆ” ಯೋಜನೆ ಸ್ಥಾಪನೆ ಮುಂತಾದವುಗಳು ಆರೋಗ್ಯ ಕ್ಷೇತ್ರದ ವಿಶೇಷ ಮೈಲಿಗಲ್ಲುಗಳು.
ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಯಂತ್ರಚಾಲಿತ ಗಾಲಿ ಕುರ್ಚಿಗಳ ವಿತರಣೆ, ಸಫಾಯಿ ಕರ್ಮಚಾರಿಗಳಿಗಾಗಿ ವಿಶೇಷ ವಸತಿ ಸೌಲಭ್ಯ, ನಿರುದ್ಯೋಗಿ ಯುವಕರಿಗೆ ರೂ. 10 ಲಕ್ಷದವರೆಗೆ 4% ಬಡ್ಡಿಯಲ್ಲಿ ಸಾಲ ಮುಂತಾದವುಗಳು ಜೀವನ ಮಟ್ಟದ ಸುಧಾರಣೆಗಾಗಿ ಬೊಮ್ಮಾಯಿ ಸರಕಾರ ಕೈಗೊಂಡ ಸ್ವಾಗತಾರ್ಹ ಕಾರ್ಯಕ್ರಮಗಳು.
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 4 ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ ಸ್ಥಾಪನೆ, ಮಹಿಳೆಯರಿಗಾಗಿ ರೂ.250 ಕೋಟಿ ವೆಚ್ಚದ “She ಖಿoiಟeಣ” ಸ್ಥಾಪನೆ, ಆರ್ಥಿಕ ದುರ್ಬಲ ವರ್ಗದವರಿಗಾಗಿ 10 ಸಾವಿರ ನಿವೇಶನಗಳ “ನಮ್ಮ ನೆಲೆ” ಯೋಜನೆ, ಬಡವರ್ಗದವರಿಗಾಗಿ 5 ಲಕ್ಷ ಹೊಸ ಮನೆಗಳ “ವಸತಿ” ಯೋಜನೆ, ಎಸ್ಸಿ/ಎಸ್ಟಿ ಕುಟುಂಬಗಳಿಗೆ 75 ಯೂನಿಟ್ ಉಚಿತ ವಿದ್ಯುತ್, ಭೂರಹಿತ ಮಹಿಳಾ ಕಾರ್ಮಿಕರಿಗಾಗಿ “ಗೃಹಿಣಿ ಶಕ್ತಿ ಯೋಜನೆ”ಯಡಿ ರೂ. 500 ಮಾಸಿಕ ಸಹಾಯಧನ ಯೋಜನೆ ಸಮಾಜದ ದುರ್ಬಲ ವರ್ಗದವರ ಸಶಕ್ತಿಕರಣಕ್ಕಾಗಿ ಕೈಗೊಂಡಿರುವ ಶ್ಲಾಘನೀಯ ಕಾರ್ಯಕ್ರಮಗಳು.
ಎಸ್ಸಿ/ಎಸ್ಟಿ ಮಕ್ಕಳಿಗಾಗಿ ಅಗ್ನಿವೀರ್ ತರಬೇತಿ ಕಾರ್ಯಕ್ರಮ, ಬಂಜಾರ ಸಂಸ್ಕೃತಿ ಭಾಷಾ ಅಕಾಡೆಮಿ ಸ್ಥಾಪನೆ, ಬೀದರ್ ಮತ್ತು ರಾಯಚೂರುಗಳನ್ನು ಮಹಾನಗರ ಪಾಲಿಕೆಯಾಗಿ ಘೋಷಿಸಿರುವುದು, ಮಠ ಮಂದಿರಗಳ ಅಭಿವೃದ್ಧಿಗಾಗಿ 1 ಸಾವಿರ ಕೋಟಿ ನಿಗದಿಪಡಿಸಿರುವುದು, ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಿಗೆ ತಸ್ತಿಕ್ ಮೊತ್ತವನ್ನು ವಾರ್ಷಿಕ ರೂ.60 ಸಾವಿರಕ್ಕೆ ಏರಿಸಿರುವುದು ಧರ್ಮ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ ದೃಷ್ಟಿಯಿಂದ ಬೊಮ್ಮಾಯಿ ಸರ್ಕಾರ ಘೋಷಿಸದ ಅತ್ಯಂತ ಪ್ರಮುಖ ಯೋಜನೆ.
ಚುನಾವಣಾ ಪೂರ್ವಭಾವಿಯಾಗಿ ಪ್ರಸಕ್ತ ಸರ್ಕಾರ ಮಂಡಿಸಿರುವ ಕೊನೆಯ ಬಜೆಟ್ ಇದಾಗಿದ್ದು ಕೇವಲ ಜನಪ್ರಿಯತೆಗೆ ಶರಣಾಗದೆ ಸಮಾಜದ ಎಲ್ಲಾ ವರ್ಗಗಳನ್ನು ತಲುಪುವ ಸರ್ವಸ್ಪರ್ಶಿ ಹಾಗೂ ಕೇಂದ್ರ ಸರಕಾರದ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಇನ್ನಷ್ಟು ವೇಗವನ್ನು ನೀಡುವ ಪ್ರಗತಿಪರ ಬಜೆಟ್ ಇದಾಗಿದ್ದು ವಿಶೇಷವಾಗಿ ಮಹಿಳೆಯರನ್ನು, ರೈತರನ್ನು, ವಿದ್ಯಾರ್ಥಿಗಳನ್ನು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನತೆಗೆ ನ್ಯಾಯ ಒದಗಿಸುವ ಸ್ವಾಗತಾರ್ಹ ಬಜೆಟ್.