ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಕೊಡವೂರು ದೇವಸ್ಥಾನದಲ್ಲಿ ರಾಶಿ ಪೂಜಾ ಮಹೋತ್ಸ ಸಂಪನ್ನ

Spread the love

ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಕೊಡವೂರು ದೇವಸ್ಥಾನದಲ್ಲಿ ರಾಶಿ ಪೂಜಾ ಮಹೋತ್ಸ ಸಂಪನ್ನ

ಉಡುಪಿ: ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ರಾಶಿ ಪೂಜಾ ಮಹೋತ್ಸವು ಸಂಪನ್ನಗೊಂಡಿತು.

ದೇವಳದ ತಂತ್ರಿ ವೇ|ಮೂ|ಪುತ್ತೂರು ಹಯವದನ ತಂತ್ರಿಗಳು ಹಾಗೂ ತಂಡದವರ ನೇತೃತ್ವದಲ್ಲಿ ಗುರುವಾರ ಸೂರ್ಯೋದಯದಿಂದ ಶುಕ್ರವಾರ ಬೆಳಗ್ಗಿನ ಜಾವದ ಸೂರ್ಯೋದಯದವರೆಗೆ 24 ಗಂಟೆ ಜರುಗಿದ ಪೂಜಾ ಮಹೋತ್ಸವವು ವಾದ್ಯ, ಸಂಗೀತ, ಭರತನಾಟ್ಯ ಯಕ್ಷಗಾನ, ಭಜನೆ, ಕೀರ್ತನೆ, ಅಷ್ಟಾವಧಾನ ಪೂಜೆಯೊಂದಿಗೆ ಸಂಪನ್ನಗೊಂಡಿತು.

ರಾಶಿ ಪೂಜೆಯ ಮಹೋತ್ಸವದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ಮಧ್ಯಾಹ್ನ ರಾತ್ರಿ 18 ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿಯ ಧಾರ್ಮಿಕ ಸಭೆಯಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ರಾಶಿಪೂಜೆಯ ಪುಸ್ತಕವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಆರೂರು ಶ್ರೀ ವಿಷ್ಣುಮೂರ್ತಿ ತಂಡದಿಂದ ನಾಮ ಸಂಕೀರ್ತನೆ ನಡೆಯಿತು. 12 ಹರಿವಾಣದಲ್ಲಿ 12 ರಾಶಿಗಳ ಉಬ್ಬು ಚಿತ್ರ ರಚಿಸಿ ಶಂಕರನಾರಾಯಣ ದೇವರನ್ನು ಅಲಂಕರಿಸಲಾಗಿತ್ತು.

ನೃತ್ಯಸೇವೆ ಭರತನಾಟ್ಯದಲ್ಲಿ ಸರ್ವೇಶ್ ಭಟ್ ಕರಂಬಳ್ಳಿ, ಮಾನಸಿ ಕೆ ಮಲ್ಪೆ, ಯಶಸ್ವಿ ಸುಬ್ರಹ್ಮಣ್ಯನಗರ, ವೈಷ್ಣವಿ ವಿಜಯ ಕೊಡವೂರು, ಸಂಜನ ಸುವರ್ಣ ಕೆಮ್ಮಣ್ಣು, ಸಂಜನಾ ಸನೀಲ್ ಗರಡಿಮಜಲು, ನೃತ್ಯನಿಕೇತನ ಕೊಡವೂರು, ಲಕ್ಷ್ಮೀ ಗುರುರಾಜ್, ಯಕ್ಷಗಾನದಲ್ಲಿ ವರಾಲಿ ಪ್ರಕಾಶ್ ಮತ್ತು ತಂಡ, ವಿನುತಾ ಅಜ್ಜರಕಾಡು, ಸಿರಿ ಅಂಬಲಪಾಡಿ, ಮೋಹಿನಿಯಟ್ಟಂನಲ್ಲಿ ಭಾವನ ಕೆರೆಮಠ ಹಾಗೂ ಗೋವಿಂದ ಐತಾಳ, ರಾಮ ಐತಾಳ್, ದರ್ಶನ್ ಎಸ್ ಜತ್ತನ್, ಸೌಮ್ಯ ಶೆಟ್ಟಿ ಸಂತೆಕಟ್ಟೆ, ಪಾಡಿಗಾರು ಲಕ್ಷ್ಮಿ ನಾರಾಯಣ ಉಪಾಧ್ಯ, ಉಷಾ ಹೆಬ್ಬಾರ ಮತ್ತು ತಂಡ, ದುರ್ಗಾ ಭಜನಾ ಮಂಡಳಿ ಕೊಡವೂರು, ಅನೀಷ್ ಸನೀಲ್, ಕಾವ್ಯ ಸೀತಾರಾಮ, ಮಹಾಲಕ್ಷ್ಮೀ ಸಂಘ, ಕಿರಣ್ ಕುಮಾರ್ ಕೊಡವೂರು, ಸುಶಾಂತ ಶಾಲ್ಮಲಿ, ಭಾರತೀ ಸುಬ್ರಹ್ಮಣ್ಯಂ ಅವರು ಸಂಗೀತ ಸೇವೆ ನೀಡಿದರು. ಮಧ್ಯಾಹ್ನ ರೋಹಿತ್ ಮಲ್ಪೆ ಮತ್ತು ಬಳಗದವರಿಂದ ಭಾವಯಾನ ಸುಗುಮ ಸಂಗೀತ, ರಾತ್ರಿ ಹಟ್ಟಿಯಂಗಡಿ ಮೇಳದವರಿಂದ ಕಾಲ ಮಿತಿ ಯಕ್ಷಗಾನ ಬಯಲಾಟ ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಸದಸ್ಯರಾದ ಜನಾರ್ದನ ಕೊಡವೂರು, ಅಡಿಗ ಕೃಷ್ಣಮೂರ್ತಿ ಭಟ್, ಭಾಸ್ಕರ ಪಾಲನ್ ಬಾಚನಬೈಲು, ರಾಜ ಎ ಸೇರಿಗಾರ್, ಚಂದ್ರಕಾಂತ್ ಕಾನಂಗಿ, ಬಾಬ ಕೆ ಸುಧಾ ಎನ್ ಶೆಟ್ಟಿ, ಬೇಬಿ ಎಸ್ ಮೆಂಡನ್, ರಾಶಿ ಪೂಜಾ ಸೇವಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಗೌರಾವಾಧ್ಯಕ್ಷ ಆನಂದ ಪಿ ಸುವರ್ಣ ಹಾಗೂ ಇತರರು ಉಪಸ್ಥೀತರಿದ್ದರು.


Spread the love