ಸಹ್ಯಾದ್ರಿ ಕಾಲೇಜಿನಲ್ಲಿ ಏರೋಫಿಲಿಯಾ 2022 ಆರಂಭ-ಗಗನದಲ್ಲಿ ಹಾರಾಡಿದ ಪುಟಾಣಿ ವಿಮಾನಗಳು 

Spread the love

ಸಹ್ಯಾದ್ರಿ ಕಾಲೇಜಿನಲ್ಲಿ ಏರೋಫಿಲಿಯಾ 2022 ಆರಂಭ-ಗಗನದಲ್ಲಿ ಹಾರಾಡಿದ ಪುಟಾಣಿ ವಿಮಾನಗಳು 

ಮಂಗಳೂರು: ಸಹಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ ಮೆಂಟ್ ಮಂಗಳೂರು ಇದರ ಟೀಮ್ ಚಾಲೆಂಜರ್ಸ್ ನ ಈ ವರ್ಷದ ಬಹು ನಿರೀಕ್ಷಿತ ಉತ್ಸವಗಳಲ್ಲಿ ಒಂದಾದ 5 ನೇ ಆವೃತ್ತಿಯ ಏರೋಫಿಲಿಯಾ 2022 ಅಂಗವಾಗಿ ಆರಂಭಗೊಂಡ ಉದ್ಘಾಟನಾ ಕಾರ್ಯಕ್ರಮ ದಲ್ಲಿಂದು ಯುವ ಇಂಜಿನಿಯರ್ ಗಳು ತಯಾರಿಸಿದ ಪುಟಾಣಿ ವಿಮಾನಗಳು ರೇಡಿಯೋ ನಿಯಂತ್ರಿತ ಸಲಕರಣೆಗಳ ಮೂಲಕ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಇರುವ ನೇತ್ರಾವತಿ ನದಿ ಕಿನಾರೆಯ ಮೈದಾನದಲ್ಲಿ ಹಾರಾಡಿತು.

ನವೆಂಬರ್ 11 ರಿಂದ 13 ರವರೆಗೆ ನಡೆಯುವ ಏರೋಫಿಲಿಯಾ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಉತ್ಸವದ ಮೊದಲ ದಿನ ದೇಶಾದ್ಯಂತ ವಿವಿಧ ಕಾಲೇಜು ಗಳ 400 ವಿದ್ಯಾರ್ಥಿಗಳ 250 ತಂಡಗಳು ಆಗಮಿಸಿವೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ಸೇನೆಯ ನಿವೃತ್ತ ಅಧಿಕಾರಿ ಕರ್ನಲ್ ನಿಟ್ಟೆ ಗುತ್ತು ಶರತ್ ಭಂಡಾರಿ ಏರೋಫಿಲಿಯಾ 2022 ನ್ನು ಉದ್ಘಾಟಿಸಿ ಮಾತನಾಡುತ್ತಾ, ಇದು ಹಲವಾರು ಉದಯೋನ್ಮುಖ ಎಂಜಿನಿಯರ್‌ಗಳು ಮತ್ತು ನವೋದ್ಯಮಿ ಗಳಿಗೆ ಈ ಉತ್ಸವವು ಯುವ ವಿದ್ಯಾರ್ಥಿಗ ಳಿಗೆ ಹೋಸ ಯೋಜನೆ ಗಳನ್ನು ರೂಪಿಸಲು ಅವಕಾಶ ನೀಡಿದೆ. ರಕ್ಷಣಾ ಕ್ಷೇತ್ರ,ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಡ್ರೋಣ್ ತಂತ್ರಜ್ಞಾನ ಬಳಕೆಯಾಗುತ್ತದೆ. ಏರೋಫಿ ಲಿಯಾ ವಿದ್ಯಾರ್ಥಿಗಳಿಗೆ ಸ್ಪರ್ಧಾ ತ್ಮಕ ವೇದಿಕೆಯನ್ನು ಒದಗಿಸುವು ದಲ್ಲದೇ, ಸಾಮಾಜಿಕ ಮಾನ್ಯತೆಯನ್ನು ಪಡೆಯಲು ಮತ್ತು ವೃತ್ತಿಪರ ಸಂಪರ್ಕವನ್ನು ವಿಸ್ತರಿಸಲು ಉತ್ತಮ ಅವಕಾಶ ಒದಗಿಸುತ್ತದೆ.

ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಮಂಜಪ್ಪ ಮಾತನಾಡುತ್ತಾ,ರಾಷ್ಟ್ರೀಯ ಉತ್ಸವದ 5 ನೇ ಆವೃತ್ತಿಯು ಏರೋಫಿಲಿ ಯಾ ಈ ಹಿಂದಿನ ಅನುಭವದ ಹಿನ್ನಲೆಯಲ್ಲಿ ಭಾಗವಹಿಸು ವವರು ರೇಡಿಯೋ ನಿಯಂತ್ರಿತ ವಿಮಾನ ವನ್ನು, ಅದರ ಆಯಾಮ ಮತ್ತು ಕೆಲವು ಮಿತಿಗಳೊಂದಿಗೆ ವಿನ್ಯಾಸಗೊಳಿಸುವ ಅನುಭವ ಪಡೆಯಲು ಏರೋಫಿಲಿಯಾ 2022 ಸಹಕಾರಿ.ವೃತ್ತಿಪರ ಯುವ ಇಂಜಿನಿಯರ್ ಗಳಿಂದ ವೈಮಾನಿಕ ಪ್ರದರ್ಶನ, ಐಷಾರಾಮಿ ಮತ್ತು ವಿದೇಶಿ ಕಾರುಗಳ ಪದರ್ಶನ ದೊಂದಿಗೆ ಮಂಗಳೂರಿನ ಅತಿದೊಡ್ಡ ಆಟೋ ಎಕ್ಸ್‌ಪೋ, ಇಸ್ರೋ ಅಭಿವೃದ್ಧಿಪ ಡಿಸಿದ ತಂತ್ರಜ್ಞಾನದಲ್ಲಿನ ಕುರಿತು ಹ್ಯಾಕಥಾನ್, ತಾಂತ್ರಿಕ ಭಾಷಣಗಳು, ಛಾಯಾಗ್ರಹಣ ಸ್ಪರ್ಧೆಗಳು ನಡೆಯಲಿದೆ ಎಂದು ಡಾ.ಮಂಜಪ್ಪ ತಿಳಿಸಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಮಾಂಡರ್ ಟಿ. ಆರ್. ನಾರಾಯಣನ್ ಮಾತನಾಡುತ್ತಾ, ಏರೋ ಮೋಡಲ್ ಹೊಸ ಸ್ಪರ್ಧೆ ಯುವ ಇಂಜಿನಿಯರ್ ಗಳ ಪ್ರತಿಭಾ ಪ್ರದರ್ಶನ ಕ್ಕೆ ಅವಕಾಶ ನೀಡುತ್ತದೆ ಎಂದರು. ಏರೋಫಿಲಿಯಾ ಅತಿಥಿ ಗಳಾಗಿ ವಿಶಾಲ್ ರಾವ್, ಅನುಷ್ ಬೇಕಲ್, ಚಂದ್ರ ಸಿಂಗ್, ನಿಖಿಲ್ ಜಿ.ವಿ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಟ್ರಸ್ಟಿ ದೇವದಾಸ್ ಹೆಗ್ಡೆ, ಮೊದಲಾದವರು ಭಾಗವಹಿಸಿದ್ದರು. ಪ್ರಾಂಶುಪಾಲ ಡಾ. ರಾಜೇಶ್ ಎಸ್ ಮೊದಲಾದವರು ಉಪಸ್ಥಿತರಿದ್ದರು.

ಏರೋಫಿಲಿಯಾ 2022 ಸಂಘಟಕ ಅಭಿನವ್ ತೋಡ್ತಿಲ್ಲಾಯ ವಂದಿಸಿದರು.


Spread the love

Leave a Reply

Please enter your comment!
Please enter your name here