
Spread the love
ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ 2022: ಆಳ್ವಾಸ್ಗೆ ಪ್ರಥಮ ಸ್ಥಾನ
ಮೂಡುಬಿದಿರೆ: ಅಡ್ಯಾರ್ನ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ 2022ರ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿದ್ದ ಇಕೋ ಕಾರ್ಗೆ ರೀಜನ್ ಒನ್ ಕಟಗರಿಯಲ್ಲಿ ಪ್ರಥಮ ಬಹುಮಾನ ಬಂದಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಡಿಯೋಲ್ ಲೂಯಿಸ್ ಡಿಸೋಜಾ, ಮಹಮ್ಮದ್ ಒಯೈಸ್ ಪಟೇಲ್, ಮನ್ವಿತ್ ಶೆಟ್ಟಿ, ಹಾಗೂ ಅರ್ಹತರಾಜ್ ಶೆಟ್ಟಿ ಎಂ ಸೋಲಾರ್ ಪ್ಯಾನಲ್ ಬಳಸಿ ಕಾರನ್ನು ತಯಾರಿಸಿದ್ದರು.
ವಿಜೇತ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯ ಮಹಮ್ಮದ್ ಸದಾಕತ್ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.
Spread the love