ಸಾಮರಸ್ಯ ವೇದಿಕೆಯ ಆಶ್ರಯದಲ್ಲಿ  ‘ಬೆಳಕು’ ಕಾರ್ಯಕ್ರಮಕ್ಕೆ ಚಾಲನೆ

Spread the love

ಸಾಮರಸ್ಯ ವೇದಿಕೆಯ ಆಶ್ರಯದಲ್ಲಿ  ‘ಬೆಳಕು’ ಕಾರ್ಯಕ್ರಮಕ್ಕೆ ಚಾಲನೆ

ಕುಂದಾಪುರ: ಕುಂದೇಶ್ವರ ದೇವಸ್ಥಾನದಲ್ಲಿ ಬುಧವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮರಸ್ಯ ವೇದಿಕೆಯ ಆಶ್ರಯದಲ್ಲಿ ನಡೆದ ‘ ಬೆಳಕು ‘ ಕಾರ್ಯಕ್ರಮಕ್ಕೆ ಉಡುಪಿಯ ಅದಮಾರು ಮಠದ ಯತಿಗಳಾದ ಈಶಪ್ರಿಯ ತೀರ್ಥರು ಚಾಲನೆ ನೀಡಿದರು.

ಕುಂದೇಶ್ವರ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ದೀಪವನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ನಗರದ ನಿವಾಸಿಗಳಿಗೆ ಹಸ್ತಾಂತರಿಸಲಾಯಿತು.ದೀಪ ಜ್ಯೋತಿಯ ಮೆರವಣಿಗೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿದ ಅದಮಾರು ಸ್ವಾಮೀಜಿಯರು, ಅಲ್ಲಿನ ನಿವಾಸಿಗಳ ಮನೆಗೆ ತೆರಳಿ ಅವರ ಮನೆಯ ದೇವರ ಕೋಣೆಯಲ್ಲಿ ಮಂಗಳಾರತಿ ಮಾಡುವುದರ ಮೂಲಕ ದೀಪಾವಳಿಯನ್ನು ಆಚರಿಸಿಕೊಂಡು, ಆಶಿರ್ವಚನ ನೀಡಿದರು.

ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ಮಂಗಳೂರು ವಿಭಾಗ ಕಾರ್ಯವಾಹ ವಾದಿರಾಜ, ಕುಂದಾಪುರ ತಾಲ್ಲೂಕುಕು ಸಂಘ ಚಾಲಕ್ ಸತೀಶ್ ಚಂದ್ರ ಕಾಳವರ್ಕರ್, ತಾಲ್ಲೂಕು ಸಹ ಕಾರ್ಯವಾಹ ಸತ್ಯನಾರಾಯಣ ಮಂಜ, ತಾಲ್ಲೂಕು ಸೇವಾ ಪ್ರಮುಖರಾದ ಮುರಳಿಧರ್ ಜಪ್ತಿ, ಕುಟುಂಬ ಪ್ರಬೋಧನ್ ಪ್ರಮುಖರಾದ ಗುರುರಾಜ್ ಕೋಟೇಶ್ವರ, ಕುಂದೇಶ್ವರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೃಷ್ಣಾನಂದ ಜಾತ್ರಾ, ಸ್ವಯಂ ಸೇವಕರಾದ ಬಿ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಶಂಕರ ಅಂಕದ ಕಟ್ಟೆ, ಬಜರಂಗದಳದ ಮುಖಂಡರಾದ ಗಿರೀಶ್, ಮಾರ್ಕೊಡು ಸುರೇಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್ ಪೂಜಾರಿ,ಪುರಸಭಾ ಸದಸ್ಯರಾದ ಪ್ರಭಾಕರ್, ರಾಘವೇಂದ್ರ ಖಾರ್ವಿ, ಸಂತೋಷ್ ಶೆಟ್ಟಿ , ಪ್ರಕಾಶ್ ಖಾರ್ವಿ, ರತ್ನಾಕರ್ ಚರ್ಚ್ ರೋಡ್, ದಿವಾಕರ್ ಕಡ್ಗಿ ಮನೆ, ರಾಜೇಶ್ ಕಡ್ಗಿ ಮನೆ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ಬಿಲ್ಲವ , ಮಂಜು ಬಿಲ್ಲವ, ರೂಪ ಪೈ, ಕೃಷ್ಣಮೂರ್ತಿ, ಕೆ ಟಿ ಸತೀಶ್ , ಸುರೇಂದ್ರ ಸಂಗಮ್, ಅಭಿಷೇಕ್ ಅಂಕದ ಕಟ್ಟೆ, ಪೌರ ಕಾರ್ಮಿಕರ ಸಂಘಟನೆಯ ಮುಖಂಡ ನಾಗರಾಜ್, ವಸಂತ್ ಅವಿನ್ ಇದ್ದರು.


Spread the love