ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ: ಮಹಾನಗರಪಾಲಿಕೆ ಸಹಾಯವಾಣಿ
ಮಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಸೆ.22 ರಿಂದ ಪ್ರಾರಂಭವಾಗಿ ಅ. 7 ರ ಒಳಗಾಗಿ ಗಣತಿ ಕಾರ್ಯವನ್ನು ಮುಕ್ತಾಯಗೊಳಿಸಲು ಸೂಚಿಸಲಾಗಿರುತ್ತದೆ. ಆದರೆ ನಿಗಧಿತ ಕಾಲಮಿತಿಯೊಳಗೆ ಗಣತಿ ಕಾರ್ಯವು ಪೂರ್ಣಗೊಳ್ಳದೆ ಪ್ರಗತಿ ಕುಂಠಿತವಾಗಿರುವುದನ್ನು ಗಮನಿಸಿ ಈ ಗಣತಿ ಕಾರ್ಯವನ್ನು ಅಕ್ಟೋಬರ್ 18 ರವರೆಗೆ ವಿಸ್ತರಣೆಗೊಳಿಸಿ ಸರ್ಕಾರವು ಈಗಾಗಲೇ ಆದೇಶಿಸಿರುತ್ತದೆ.
ಅದರಂತೆ ಮಂಗಳೂರು ತಾಲೂಕು ವ್ಯಾಪ್ತಿಯೊಳಗೆ ಇನ್ನೂ ಸಹ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕರು ಗಣತಿ ಕಾರ್ಯಕ್ಕೆ ಮಾಹಿತಿ ನೀಡದಿರುವುದು ಕಂಡುಬರುತ್ತದೆ. ಈ ನಿಟ್ಟಿನಲ್ಲಿ ಗಣತಿಯಾಗದೆ ಬಾಕಿಯಿರುವ ನಾಗರೀಕರು ಗಣತಿ ಮಾಡಿಸಿಕೊಳ್ಳುವ ಸಲುವಾಗಿ ಪಾಲಿಕೆಯ ಸಹಾಯವಾಣಿ ಸಂಖ್ಯೆ: 0824-2220306 ಅಥವಾ ವಾಟ್ಸಾಪ್ ಸಂಖ್ಯೆ 9449007722 ಸಂಪರ್ಕಿಸುವಂತೆ ಹಾಗೂ ಈ ಸಮೀಕ್ಷೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನಾಗರೀಕರ ಸಂಪೂರ್ಣ ಸಹಕರಿಸಲು ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.