ಸಾಮಾಜಿಕ ಹೊಣೆಗಾರಿಕೆ ಕೆಲಸಗಳಿಗೆ ದ.ಕ ಜಿಲ್ಲೆ ಮಾದರಿ-ಮುಲ್ಲೈ ಮುಗಿಲನ್

Spread the love

ಸಾಮಾಜಿಕ ಹೊಣೆಗಾರಿಕೆ ಕೆಲಸಗಳಿಗೆ ದ.ಕ ಜಿಲ್ಲೆ ಮಾದರಿ-ಮುಲ್ಲೈ ಮುಗಿಲನ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಹೊಣೆಗಾರಿಕೆ ಅರಿತುಕೊಂಡು ನಡೆಯುತ್ತಿರುವ ಕೆಲಸಗಳು ಮಾದರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಶ್ಲಾಘಿಸಿದರು.

ಅವರು ಗುರುವಾರ ವೆನ್ ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೆನ್ಲಾಕ್ ಆಸ್ಪತ್ರೆ,ಇಂಡಿಯನ್ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕ, ಯೂತ್ ರೆಡ್ ಕ್ರಾಸ್ ಘಟಕ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆರಂಭ ಗೊಂಡಿರುವ ಸಮುದಾಯ ವಾಚನಾ ಲಯದ ಚಟುವಟಿಕೆಗಳನ್ನು ವೀಕ್ಷಿಸಿ ಈ ವಾಚನಾಲಯದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಓದಲು ದಿನ ಪತ್ರಿಕೆ, ನಿಯತಕಾಲಿಕಗಳನ್ನು ರೋಗಳಿಗೆ ದಾನಿಗಳ ನೆರವಿನಿಂದ ಒದಗಿಸುತ್ತಿರು ವುದು.ಅದನ್ನು ರೋಗಿಗಳಿಗೆ ಸ್ವಯಂ ಸೇವಾ ನೆಲೆಯಲ್ಲಿ ತಲುಪಿಸುತ್ತಿರು ವುದು,ಓದುವ ಹವ್ಯಾಸ ಉಳಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ.ಈ ರೀತಿಯ ಸಾಮಾಜಿಕ ಕಾರ್ಯ ಗಳಿಗೆ ರೆಡ್ ಕ್ರಾಸ್, ಪತ್ರಕರ್ತರ ಸಂಘ ಇತರ ಸಂಸ್ಥೆ ಗಳು ಸಹಕಾರ ನೀಡುತ್ತಿರುವುದು ಇತರರಿಗೆ ಮಾದರಿ ಎಂದರು.ತಾನೂ ಯುವ ರೆಡ್ ಕ್ರಾಸ್ ಘಟಕದ ಸದಸ್ಯ ನಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಪ್ರೋತ್ಸಾಹಿಸಿದರು.

ಸಮುದಾಯ ವಾಚನಾಲಯಕ್ಕೆ ಪತ್ರಿಕೆ ಒದಗಿಸುತ್ತಿರುವ ದಾನಿಗೆ ಗೌರವಾರ್ಪಣೆ:-ಇದೇ ಸಂದರ್ಭದಲ್ಲಿ ಸಮುದಾಯ ವಾಚನಾಲಯಕ್ಕೆ ಅಗತ್ಯ ವಿರುವ ಪತ್ರಿಕೆ ಗಳನ್ನು ಖರೀದಿಸಲು ಅದರ ವೆಚ್ಚ ವನ್ನು ಕೊಡುಗೆಯಾಗಿ ನೀಡಿರುವ ಅನಘ ರಿಫೈನರಿಯ ಮಾಲಕರಾದ ಸಾಂಬ ಶಿವರಾವ್ ರವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಸಂಘಟಕರ ಪರವಾಗಿ ಗೌರವಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್,ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ವೈದ್ಯಕೀಯ ಅಧೀಕ್ಷಕ ಡಾ.ಸದಾಶಿವ ಶ್ಯಾನ್ ಬೋಗ್,ಇಂಡಿಯನ್ ರೆಡ್ ಕ್ರಾಸ್ ಸಭಾಪತಿ ಸಿ.ಎ.ಶಾಂತರಾಮ ಶೆಟ್ಟಿ, ಇಂಡಿ ಯನ್ ರೆಡ್ ಕ್ರಾಸ್ ಘಟಕದ ಹಿರಿಯ ಸಲಹೆಗಾರರು ಮಾಜಿ ಅಪರ ಜಿಲ್ಲಾ ಧಿಕಾರಿ ಪ್ರಭಾಕರ ಶರ್ಮಾ, ಇಂಡಿಯನ್ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ಹಿರಿಯ ಸದಸ್ಯರಾದ ರವೀಂದ್ರ ನಾಥ ಉಚ್ಚಿಲ್ ,ವೆನ್ಲಾಕ್ ಆಸ್ಪತ್ರೆಯ ವೈದ್ಯರಾದ ಡಾ.ಕೆ.ಆರ್ ಕಾಮತ್, ಯುವ ರೆಡ್ ಕ್ರಾಸ್ ಘಟಕದ ಸದಸ್ಯರು ಉಪಸ್ಥಿತರಿದ್ದರು.


Spread the love