ಸಾಲ ಸೌಲಭ್ಯ ಯೋಜನೆಗಳನ್ನು ಜನರಿಗೆ ತಲುಪಿಸಲು ಹೆಚ್ಚಿನ ಶ್ರಮ ವಹಿಸಿ: ಸಿಇಒ  ಡಾ.ಕುಮಾರ್

Spread the love

ಸಾಲ ಸೌಲಭ್ಯ ಯೋಜನೆಗಳನ್ನು ಜನರಿಗೆ ತಲುಪಿಸಲು ಹೆಚ್ಚಿನ ಶ್ರಮ ವಹಿಸಿ: ಸಿಇಒ  ಡಾ.ಕುಮಾರ್

ಮಂಗಳೂರು:  ಸರ್ಕಾರ ಪ್ರಕಟಿಸಿರುವ ಹಲವಾರು ಸಾಲ ಸೌಲಭ್ಯ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲೀ, ಮತ್ತಷ್ಟು ಹಾದಿಗಳನ್ನು ಕಂಡುಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಕರೆ ನೀಡಿದರು.

ಅವರು ಸೆ.22ರಂದು ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಬ್ಯಾಂಕರ್‍ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸದ್ಯ ಜಿಲ್ಲೆಯಲ್ಲಿ ವಿವಿಧ ಬ್ಯಾಂಕುಗಳ ಒಟ್ಟು 613 ಶಾಖೆಗಳಿದ್ದು, ಪ್ರತಿಯೊಂದು ಬ್ಯಾಂಕ್ ಕೂಡ ನಾಗರೀಕರ ಆರ್ಥಿಕ ಏಳಿಗೆಗಾಗಿ ಕಾರ್ಯನಿರ್ವಹಿಸಬೇಕು. ಅದರಲ್ಲೂ ಮಹಿಳಾ ಸಬಲೀಕರಣಕ್ಕೆ ಬ್ಯಾಂಕ್ ಗಳ ಕೊಡುಗೆ ಬಹುಮುಖ್ಯವಾಗಿದೆ, ಆ ನಿಟ್ಟಿನಲ್ಲಿ ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರ ವ್ಯವಹಾರಗಳಿಗೆ ಹಾಗೂ ಅವರ ಸ್ವ ಉದ್ಯೋಗ ಕೈಗೊಳ್ಳುವ ದೃಷ್ಟಿಯಿಂದ ಸಾಲ ಸೌಲಭ್ಯ ನೀಡಬೇಕು ಹಾಗೂ ವಿμÉೀಶವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಹಸುಗಳ ಖರೀದಿಗಾಗಿ ಜಾರಿಯಾದ ಅಮೃತ ಜೀವನ ಯೋಜನೆಗೆ ಒಟ್ಟು 94 ಗುರಿಗಳನ್ನು ನೀಡಿದ್ದು ಈಗಾಗಲೇ 86 ನೋಂದಣಿಯಾಗಿರುವುದು ಸಂತಸದ ವಿಚಾರ. ಇನ್ನುಳಿದಂತೆ ಪಿ.ಎಂ ಸ್ವ-ನಿಧಿ ಯೋಜನೆ, ಅಟಲ್ ಪಿಂಚಣಿ ಯೋಜನೆ, ಕೃಷಿ ಹಾಗೂ ಮುದ್ರಾ ಯೋಜನೆಗಳಿಗೆ ನೀಡಿರುವ ಗುರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಇವುಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿದರೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಮೀನುಗಾರರು ಹೆಚ್ಚಿರುವ ಕಾರಣ ಅವರಿಗೆ ಬ್ಯಾಂಕಿನಲ್ಲಿ ದೊರೆಯುವ ಸೌಲಭ್ಯಗಳು ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಒಟ್ಟಿನಲ್ಲಿ ಜನರಿಗೆ ಉಪಯೋಗವಾಗುವಂತ ಸರ್ಕಾರಿ ಮತ್ತು ಖಾಸಗಿ ಯೋಜನೆಗಳನ್ನು ಅವರಿಗೆ ತಲುಪಿಸುವಲ್ಲಿ ಬ್ಯಾಂಕರ್ಸ್ ಗಳು ಆದ್ಯತೆ ನೀಡುವುದರೊಂದಿಗೆ ಇನ್ನಷ್ಟು ದಾರಿಗಳನ್ನು ಕಂಡುಕೊಳ್ಳಬೇಕು ಮತ್ತು ಮುಂದಿನ ಸಭೆಯಲ್ಲಿ ಪ್ರತಿಯೊಂದು ಬ್ಯಾಂಕುಗಳು ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಮತ್ತಷ್ಟು ಪ್ರಗತಿ ದಾಖಲಿಸಬೇಕು ಎಂದರು.

ಈ ಸಂದರ್ಭದಲ್ಲಿಲೀಡ್ ಬ್ಯಾಂಕ್ ಮ್ಯಾನೆಜರ್ ಪ್ರವೀಣ್, ಆರ್.ಬಿ.ಐ ಬೆಂಗಳೂರು ವಿಭಾಗದ ಹಣಕಾಸು ಸೇರ್ಪಡೆ ಹಾಗೂ ಅಭಿವೃದ್ಧಿ ವ್ಯವಸ್ಥಾಪಕ ಗುರುರಾಜ್ ಆಚಾರ್, ನಭಾರ್ಡ್‍ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಸಂಗೀತ ಎಸ್ ಕರ್ತಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಬ್ಯಾಂಕರ್ಸ್‍ಗಳು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here