ಸಾಸ್ತಾನ: ಪಾಂಡೇಶ್ವರ ಶಾಲಾ ಆವರಣದಲ್ಲಿ ಜುಗಾರಿ ನಿರತ ಐವರ ಬಂಧನ

Spread the love

ಸಾಸ್ತಾನ: ಪಾಂಡೇಶ್ವರ ಶಾಲಾ ಆವರಣದಲ್ಲಿ ಜುಗಾರಿ ನಿರತ ಐವರ ಬಂಧನ

ಬ್ರಹ್ಮಾವರ: ಸಾಸ್ತಾನ ಸಮೀಪದ ಪಾಂಡೇಶ್ವರ ಶಾಲೆಯ ಆವರಣದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ 5 ಮಂದಿಯನ್ನು ಕೋಟ ಪೊಲೀಸರು ವಶಕ್ಕೆ ಪಡೆದು ನಗದು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಗಣೇಶ ಪೂಜಾರಿ ಮೂಡಹಡು (36), ರಾಘವೇಂದ್ರ ಕುಂದರ್ ಕೋಡಿಕನ್ಯಾನ (40), ಪ್ರವೀಣ್ ಕುಮಾರ್ ಹಾಡಿಮನೆ ಪಾಂಡೇಶ‍್ವರ (28), ಚಂದ್ರ ಪೂಜಾರಿ (52) ಗುಂಡ್ಮಿ, ಸಚಿನ್ ಪೂಜಾರಿ ಮಕ್ಕಿಮನೆ ಪಾಂಡೇಶ‍್ವರ (25) ಪೊಲೀಸರು ವಶಕ್ಕೆ ಪಡೆದಿದ್ದು, ಪುನೀತ್ ಪೂಜಾರಿ ಹಾಡಿಮನೆ ಪಾಂಡೇಶ್ವರ, ಬಾಲ ಪಾಂಡೇಶ್ವರ, ಸಂದೇಶ ಪಾಂಡೇಶ್ವರ ಮತ್ತು ಹರೀಶ್ ಪಾಂಡೇಶ್ವರ ಎಂಬವರು ತಪ್ಪಿಸಿಕೊಂಡು ಹೋಗಿರುತ್ತಾರೆ.

ಕೋಟ ಪೊಲೀಸ್ ಠಾಣಾ ಪಿ ಎಸ್ ಐ ಮಧು ಬಿಇ ಅವರು ಗಣೇಶೋತ್ಸವದ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ಪಾಂಡೇಶ್ವರ ಶಾಲೆಯ ಆವರಣದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ದೊರೆ ಮಾಹಿತಿಯಂತೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಅವರಿಂದ ನಗದು 8840 ರೂಪಾಯಿ, ತಲಾ 30000 ರೂಪಾಯಿ ಅಂದಾಜು ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love