Home Mangalorean News Kannada News ಸಾಸ್ತಾನ: ಮೊಬೈಲ್ ಕೊಡದ್ದಕ್ಕೆ ಕೋಪಗೊಂಡು ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

ಸಾಸ್ತಾನ: ಮೊಬೈಲ್ ಕೊಡದ್ದಕ್ಕೆ ಕೋಪಗೊಂಡು ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

Spread the love

ಸಾಸ್ತಾನ: ಮೊಬೈಲ್ ಕೊಡದ್ದಕ್ಕೆ ಕೋಪಗೊಂಡು ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

ಕೋಟ: ಕ್ಷುಲ್ಲಕ ವಿಚಾರಕ್ಕೆ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ. 6 ರಂದು ಗುರುವಾರ ಸಾಸ್ತಾನದ ಕುಂಬಾರಬೆಟ್ಟುವಿನಲ್ಲಿ ಸಂಭವಿಸಿದೆ.

ಮೃತ ವಿದ್ಯಾರ್ಥಿನಿ ಕುಂಬಾರಬೆಟ್ಟು ನಿವಾಸಿ ದಿನೇಶ್ ಮೊಗವೀರ ಅವರ ಪುತ್ರಿ ದಿಶಾ(16) ಎಂದು ಗುರುತಿಸಲಾಗಿದೆ.

ವಿದ್ಯಾರ್ಥಿನಿ ದಿಶಾ ಕೋಟದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡಿಕೊಂಡಿದ್ದು, ಪರೀಕ್ಷೆ ಮುಗಿಸಿ ರಜೆಯಲ್ಲಿ ಮನೆಯಲ್ಲಿ ಇದ್ದು, ಗುರುವಾರ ಮಧ್ಯಾಹ್ನ ಸಮಯ ಮೊಬೈಲ್ ಕೊಡಬೇಕೆಂದು ಹಠ ಹಿಡಿದಾಗ ಮನೆಯವರು ಮತ್ತೆ ಮೊಬೈಲ್ ಪೋನ್ ನೀಡುತ್ತೇನೆ ಎಂದು ಹೇಳಿದ್ದು, ಇದರಿಂದ ಕೋಪಗೊಂಡ ದಿಶಾ ನೇರವಾಗಿ ಕೋಣೆಯ ಬಾಗಿಲು ಹಾಕಿಕೊಂಡಿದ್ದು, ತಾಯಿ ಜೋರು ಮಾಡಿ ಬಾಗಿಲು ತೆರೆಯಲು ಹೇಳಿದ್ದಾರೆ. ಎಷ್ಟು ಹೊತ್ತಾದರೂ ಬಾಗಿಲು ತೆರೆಯದೆ ಇರುವುದನ್ನು ಕಂಡ ತಾಯಿ, ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಮನೆಯ ಕಿಟಕಿಯ ಕಂಬಿಗೆ ಹಗ್ಗ ಹಾಕಿಕೊಂಡು ಆತ್ಮಹತ್ಯೆಯತ್ನಿಸಿದ್ದು, ತಕ್ಷಣ ಸ್ಥಳೀಯರು ಬಂದು ಬಾಲಕಿಯನ್ನು ರಕ್ಷಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಜೀವನ್ಮಿತ್ರ ಅಂಬ್ಯುಲೆನ್ಸ್ನ ನಾಗರಾಜ್ ಪುತ್ರನ್ ಮತ್ತು ಕಿಶೋರ್ ಶೆಟ್ಟಿ ಬಾಲಕಿಯ ರಕ್ಷಣೆಗೆ ಪ್ರಯತ್ನಿಸಿದ್ದು, ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ.

ಸ್ಥಳಕ್ಕೆ ಕೋಟ ಕ್ರೈಂ ಪಿಎಸ್ಐ ಸುಧಾಪ್ರಭು ಮತ್ತು ಎಎಸ್ಐ ರವಿ ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ


Spread the love

Exit mobile version