ಸಿಆರ್‌ಪಿಎಫ್‌ನಲ್ಲಿ 9,212 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ  

Spread the love

ಸಿಆರ್‌ಪಿಎಫ್‌ನಲ್ಲಿ 9,212 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
 

ಬೆಂಗಳೂರು: ಮೆಟ್ರಿಕುಲೇಷನ್ ಅಥವಾ 10 ನೇ ತರಗತಿ ಮುಗಿಸಿ ವಿವಿಧ ಕೌಶಲ್ಯ ಹೊಂದಿರುವವರಿಗೆ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್‌ಪಿಎಫ್) ದೊಡ್ಡ ಪ್ರಮಾಣದ ನೇಮಕಾತಿಗೆ ಚಾಲನೆ ನೀಡಲಾಗಿದೆ.

ಸಿಆರ್‌ಪಿಎಫ್‌ನಲ್ಲಿ ಪುರುಷ ಮತ್ತು ಮಹಿಳೆಯರಿಗೆ ‘ಟೆಕ್ನಿಷಿಯನ್’ ಹಾಗೂ ‘ಟ್ರೇಡ್ಸ್‌ಮನ್’ ಕಾನ್‌ಸ್ಟೆಬಲ್ ಎಂಬ ಒಟ್ಟು 9,212 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

ಇದರಲ್ಲಿ 9,105 ಹುದ್ದೆಗಳು -ಪುರುಷರಿಗೆ ಹಾಗೂ 107 ಹುದ್ದೆಗಳು ಮಹಿಳೆಯರಿಗೆ ಮೀಸಲಿವೆ. ಹುದ್ದೆಗಳು ರಾಜ್ಯವಾರು ಹಂಚಿಕೆಯಾಗಿದ್ದು ಇದೇ ಮಾರ್ಚ್ 27 ರಿಂದ www.crpf.gov.in ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ. ಏಪ್ರಿಲ್ 25 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿರಲಿದೆ.

ಕಾನ್‌ಸ್ಟೆಬಲ್ ಡ್ರೈವರ್, ಕಾನ್‌ಸ್ಟೆಬಲ್ ಮೋಟಾರ್ ಮೆಕಾನಿಕಲ್, ಕಾನ್‌ಸ್ಟೆಬಲ್ ಪ್ಲಂಬರ್, ಎಲೆಕ್ಟ್ರೀಷಿಯನ್, ಗಾರ್ಡನರ್ ಈ ರೀತಿಯ ಕೌಶಲ್ಯ ಆಧರಿತ ಹುದ್ದೆಗಳಿವೆ. ಎಸ್‌ಎಸ್‌ಎಲ್‌ಸಿ ಜೊತೆಗೆ ಸಂಬಂಧಿಸಿದ ವಿಭಾಗಗಳಲ್ಲಿನ ಅರ್ಹತಾ ಪ್ರಮಾಣಪತ್ರಗಳು, ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ, ಇಡಬ್ಲೂಎಸ್, ಒಬಿಸಿ ವರ್ಗದವರಿಗೆ ಅರ್ಜಿ ಶುಲ್ಕ ₹100 ಇದೆ. ಎಸ್‌ಸಿ/ಎಸ್‌ಟಿ, ಮಹಿಳೆಯರಿಗೆ ಶುಲ್ಕ ವಿನಾಯಿತಿ ಇದೆ.

ನೇಮಕಾತಿಯು 4 ಹಂತಗಳಲ್ಲಿ ನಡೆಯಲಿದೆ. ಮೊದಲಿಗೆ ಕಂಪ್ಯೂಟರ್ ಆಧರಿತ ಪರೀಕ್ಷೆ (ಸಿಬಿಟಿ), ದೈಹಿಕ ಸಾಮರ್ಥ್ಯ ಪರೀಕ್ಷೆ (ಇಟಿ, ಪಿಎಸ್‌ಟಿ), ಟ್ರೇಡ್ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ.

ವೇತನಶ್ರೇಣಿ ₹21,700-69,100ವರೆಗೆ ಇದ್ದು ಹೆಚ್ಚಿನ ಮಾಹಿತಿಗಾಗಿ ಆಸಕ್ತರು crpf.gov.in ವೆಬ್‌ಸೈಟ್‌ನಲ್ಲಿ ನೇಮಕಾತಿ ಅಧಿಸೂಚನೆ ಪರಿಶೀಲಿಸಬಹುದು.


Spread the love