ಸಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿದ ರುತ್ ಡಿಸಿಲ್ವಾಗೆ ಸನ್ಮಾನ

Spread the love

ಸಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿದ ರುತ್ ಡಿಸಿಲ್ವಾಗೆ ಸನ್ಮಾನ

ಮಂಗಳೂರು: ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ.ಆರ್.ಲೋಬೊರವರ ನೇತೃತ್ವದಲ್ಲಿ ಇಂದು C.A ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿದ ರುತ್ ಕ್ಲೇರ್ ಡಿಸಿಲ್ವ ರವರ ಮನೆಗೆ ತೆರಳಿ ಅವರ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಅವರಿಗೆ ಅಭಿನಂದಿಸಿ ಸಲ್ಲಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ನಗರ ಬ್ಲಾಕ್ ಅಧ್ಯಕ್ಷರಾದ  ಪ್ರಕಾಶ್ ಸಾಲಿಯಾನ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಸಲಿಂ, ಜಿಲ್ಲಾ ಹಿಂದುಳಿದ ಘಟಕದ ಅಧ್ಯಕ್ಷರಾದ  ವಿಶ್ವಾಸ್ ಕುಮಾರ್ ದಾಸ್, ಹಿರಿಯ ಸೇವಾದಳದ ನಾಯಕರಾದ  ಪ್ರಭಾಕರ್ ಶ್ರೀಯಾನ್, ಮಹಿಳಾ ಘಟಕದ ಅಧ್ಯಕ್ಷರಾದ ಶಾಂತಲಾ ಗಟ್ಟಿ, ನಮಿತಾ. ಡಿ. ರಾವ್, ದಕ್ಷಿಣ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಐವನ್ ಡಿಸೋಜಾ,ಜಿಲ್ಲಾ ಹಾಗೂ ಬ್ಲಾಕ್ ಪದಾಧಿಕಾರಿಗಳು ಉಪಸ್ಥಿತರಿದ್ದರು


Spread the love