ಸಿಒಡಿಪಿ ವತಿಯಿಂದ ಕ್ಯಾನ್ಸರ್ ಮತ್ತು ಕೊರೋನಾ ರೋಗದ ಬಗ್ಗೆ ಮಾಹಿತಿ
ಮಂಗಳೂರು: ಸಿಒಡಿಪಿ (ರಿ) ಸಂಸ್ಥೆ ಮಂಗಳೂರು ಮತ್ತು ಸ್ಪರ್ಶ ಯೋಜನೆಯ ವತಿಯಿಂದ ಮುಡಿಪು ಸ್ವ ಸಹಾಯ ಸಂಘದ ಸದಸ್ಯರಿಗೆ ಕ್ಯಾನ್ಸರ್ ಮತ್ತು ಕೊರೋನಾ ರೋಗದ ಮಾಹಿತಿ ಕಾರ್ಯಕ್ರಮವನ್ನು ಸೈಂಟ್ ತೋಮಸ್ ಚರ್ಚ್ ಅಮ್ಮೆಂಬಳ್ ನಲ್ಲಿ ಆಯೋಜಿಸಲಾಯಿತು.
ಈ ಕಾರ್ಯಕ್ರಮಕ್ಕೆ ಸಿ.ಒ.ಡಿ.ಪಿ ಸಂಸ್ಥೆಯ ಸಂಯೋಜಕಿಯಾದ ರೀಟಾ ಡಿ ಸೋಜರವರು ಕೋವಿಡ್ ರೋಗದ ಬಗ್ಗೆ ಜಾಗೃತಿ ನೀಡಿ, ಮುಂಜಾಗ್ರತಾ ಕ್ರಮವಾಗಿ ಕೆಲವು ಸೂತ್ರಗಳನ್ನು ಆಳವಡಿಸಿ, ಈ ರೋಗವನ್ನು ದೂರವಾಗಿಸಲು ಸಾಧ್ಯವೆಂದು ತಿಳಿಸಿದರು.
ಸ್ಪರ್ಶ ಯೋಜನೆಯ ಸಂಯೋಜಕಿಯಾದ ಶಿಲ್ಪ ಡಿ ಸೋಜರವರು ಕ್ಯಾನ್ಸರ್ ಕಾಯಿಲೆ ಮತ್ತು ಅದನ್ನು ತಡೆಗಟ್ಟುವುದು, ಚಿಕಿತ್ಸೆ ಮತ್ತು ರೋಗಿಗಳಿಗೆ ಆತ್ಮವಿಶ್ವಾಸ ತುಂಬುವ ಬಗ್ಗೆ ಹಾಗೂ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ವಿವರಿಸಿದರು ಮತ್ತು ರಾಸಾಯನಿಕ ವಸ್ತುಗಳ ಬಳಕೆಯ ಬದಲು ಸಾವಯವ ವಸ್ತುಗಳನ್ನು ಉಪಯೋಗಿಸುವುದರಿಂದ ಆರೋಗ್ಯಕರವಾದ ಜೀವನ ಸಾಗಿಸಬಹುದು ಎಂದು ತಿಳಿಸಿದರು.
ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ಫಾ| ಓಸ್ವಲ್ಡ್ ಮೊಂತೇರೊ ಮತ್ತು ಅಮ್ಮೆಂಬಳ್ ಚರ್ಚ್‍ನ ಧರ್ಮಗುರುಗಳಾದ ಫಾ| ಲೊರೆನ್ಸ್ ಮಸ್ಕರೇನಸ್‍ರವರು ನೆರೆದಂತಹ ಸದಸ್ಯರಿಗೆ ಆರೋಗ್ಯ ಕಾಪಾಡುವ ಬಗ್ಗೆ ಸಲಹೆ ನೀಡಿ, ನಮ್ಮೆಲ್ಲರ ಆರೋಗ್ಯಕ್ಕೆ ನಾವೇ ಹೊಣೆಗಾರರು ಹಾಗೂ ಆರೋಗ್ಯವೇ ಭಾಗ್ಯ ಎಂದು ಮನವರಿಕೆ ಮಾಡಿದರು ಹಾಗೂ ಈ ಸಂದರ್ಭದಲ್ಲಿ ಸಿಒಡಿಪಿ ಸಂಸ್ಥೆಯ ವತಿಯಿಂದ ಸ್ಥಳೀಯ ಬಡ ಜನರಿಗೆ ಉಚಿತ ಆಹಾರದ ಪೆÇಟ್ಟಣಗಳನ್ನು ವಿತರಿಸಲಾಯಿತು.