
ಸಿಡ್ನಿಯ ಕ್ರೀಡಾಕೂಟದಲ್ಲಿ ಕೊಡಗಿನ ಹಿರಿಯರ ಸಾಧನೆ
ಮೈಸೂರು: ಕೊಡಗಿನ ಮೂವರು ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಾಸ್ಟರ್ ಗೇಮ್ಸ್ ಚಾಂಪಿಯನ್ ಶಿಫ್ ನಲ್ಲಿ ಭಾಗವಹಿಸಿ ಒಟ್ಟು 5 ಪದಗಳನ್ನು ಪಡೆದುಕೊಂಡಿದ್ದಾರೆ.
ಪದಕ ಗೆದ್ದ ಕ್ರೀಡಾಪಟುಗಳ ಪೈಕಿ ಇಬ್ಬರು ಸಹೋದರರು ಹಿರಿಯರಾಗಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಿ ಬೆರಗು ಮೂಡಿಸಿದ್ದಾರೆ. ಗೋಣಿಕೊಪ್ಪ ಹಾಗೂ ಕದನೂರು ಗ್ರಾಮಗಳ ನಿವಾಸಿಗಳಾದ ಪಾಲೆಕಂಡ ಬೆಳ್ಳಿಯಪ್ಪ ಹಾಗೂ ಪಾಲೆಕಂಡ ಬೋಪಯ್ಯ ಭಾರತವನ್ನು ಪ್ರತಿನಿಧಿಸಿದ ಅಪರೂಪದ ಸಹೋದರರಾಗಿದ್ದಾರೆ.
ಇವರಿಬ್ಬರೂ ಭಾರತದಲ್ಲಿ ನಡೆದ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟದಲ್ಲಿ ಇದುವರೆಗೆ 13 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದರು. ಜವಲಿನ್ ಥ್ರೋ ಹಾಗೂ ಡಿಸ್ಕಸ್ ಥ್ರೋ ನಲ್ಲಿ ಬೆಳ್ಳಿಪ್ಪನವರು 100, 200, 1500 ಮೀಟರ್ ಕಾಲ್ನಡಿಗೆ ರೈಸ್ ನಲ್ಲಿ ಭಾಗವಹಿಸಿದ್ದಾರೆ.
ಹಿರಿಯರ ಕ್ರೀಡಾಕೂಟದಲ್ಲಿ ಬಿಎಸ್ಎನ್ಎಲ್ ನ ನಿವೃತ್ತ ಉದ್ಯೋಗಿ, ಕರ್ನಾಟಕದ ಮಾಸ್ಟರ್ಸ್ ಕ್ರೀಡಾಕೂಟ ಸಂಘದ ಅಧ್ಯಕ್ಷೆ ಮರಾಮಡ ಮಾಚಮ್ಮ ಅವರು ಕೂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಗಳಿಸಿದ್ದಾರೆ.