ಸಿದ್ದರಾಮಯ್ಯ ಅವರ ಅಪ್ಪನಾಣೆಗೂ ಮುಖ್ಯಮಂತ್ರಿ ಆಗೋದಿಲ್ಲ – ನಳಿನ್ ಕುಮಾರ್ ಕಟೀಲ್

Spread the love

ಸಿದ್ದರಾಮಯ್ಯ ಅವರ ಅಪ್ಪನಾಣೆಗೂ ಮುಖ್ಯಮಂತ್ರಿ ಆಗೋದಿಲ್ಲ – ನಳಿನ್ ಕುಮಾರ್ ಕಟೀಲ್

ಉಡುಪಿ: ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ ಹಿಂದೆಯೂ ಇಂತಹ ಹಲವಾರು ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಹುಟ್ಟಿಕೊಂಡಿವೆ ಇದರಿಗೆ ಬಿಜೆಪಿಗೆ ಯಾವುದೇ ರೀತಿಯ ನಷ್ಟವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಭಾನುವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ನಾವು ಜನಾರ್ದನ ರೆಡ್ಡಿಯವರ ಜೊತೆ ಮಾತುಕತೆ ಮಾಡುತ್ತೇವೆ. ಈಗಾಗಲೇ ಶ್ರೀರಾಮುಲು ಜೊತೆ ಮಾತನಾಡಿದ್ದು ಅವರು ಜನಾರ್ದನ ರೆಡ್ಡಿಯೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಚುನಾವಣೆ ಸ್ಪರ್ಧೆ ವಿಚಾರದಲ್ಲಿ ಹಲವಾರು ಯೋಜನೆ ಯೋಜನೆಗಳು ಇವೆ. ಹತ್ತಾರು ಪಾರ್ಟಿ ಹಿಂದೆಯೂ ಬಂದಿದೆ ಮುಂದೆ ಯೂ ಬರುತ್ತದೆ ಆದರೆ ಇದರಿಂದ ಬಿಜೆಪಿಗೆ ಯಾವುದೇ ಲಾಸ್ ಇಲ್ಲ. ಬಿಜೆಪಿ ದೇಶದ ನಂಬರ್ 1 ಪಾರ್ಟಿಯಾಗಿದ್ದು, ನಾವು ಕಾಂಗ್ರೆಸ್ ನಂತಹ ಪಾರ್ಟಿಯನ್ನೇ ಎದುರಿಸಿ ಬಂದವರು. ನಮ್ಮ ಎಲ್ಲಾ ಹಿರಿಯರು ಮಾತುಕತೆ ಮಾಡುತ್ತಾರೆ, ಏನಾಗುತ್ತೋ ನೋಡೋಣ ಎಂದರು.

ತಿರುಕನೋರ್ವ ಊರಮುಂದೆ ಕನಸು ಕಾಣುತ್ತಿದ್ದನು ಎಂದು ನಾವು ಶಾಲೆಗೆ ಹೋಗುವಾಗ ಈ ಪದ್ಯ ಕೇಳಿದ್ದೇವೆ ಹಾಗೇ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಸಿದ್ದರಾಮಯ್ಯ ಅವರ ಅಪ್ಪನಾಣೆಗೂ ಮುಖ್ಯಮಂತ್ರಿ ಆಗೂದಿಲ್ಲ ಎಂದರು

ಮಂಗಳೂರು ಜಲೀಲ್ ಕೊಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕಟೀಲ್ ಕಾಂಗ್ರೆಸ್ ಇಂತಹ ಕೃತ್ಯದಿಂದ ರಾಜಕೀಯ ಲಾಭ ಪಡೆಯುತ್ತದೆ ಆದರೆ ಕಟ್ಟುನಿಟ್ಟಿನ ಕ್ರಮ ನಮ್ಮ ಸರಕಾರ ಕೈಗೊಳ್ಳುತ್ತದೆ. ಈ ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದರು.


Spread the love