ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆತ ವ್ಯವಸ್ಥಿತ ಷಡ್ಯಂತ್ರ – ಹಮ್ಮದ್ ಉಡುಪಿ

Spread the love

ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆತ ವ್ಯವಸ್ಥಿತ ಷಡ್ಯಂತ್ರ – ಹಮ್ಮದ್ ಉಡುಪಿ

ಉಡುಪಿ: ನೆರಸಂತ್ರಸ್ತರ ಸಮಸ್ಯೆ ಆಲಿಸಲು ಕೊಡಗು ಜಿಲ್ಲೆಗೆ ತೆರಳಿದ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಒಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು ಪೊಲೀಸ್ ಇಲಾಖೆ ಸಿದ್ದರಾಮಯ್ಯ ಅವರಿಗೆ ಸೂಕ್ತ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎಂದು ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಮ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗಿನಲ್ಲಿ ಪ್ರತಿ ಬಾರಿ ಆಗುತ್ತಿರುವ ಭೂ ಕುಸಿತಕ್ಕೆ ಸೂಕ್ತ ಕಾರಣ ಕಂಡು ಹಿಡಿಯಲು ವಿಫಲವಾಗಿರುವ ಸರಕಾರದ ನೀತಿಯಿಂದ ಅಲ್ಲಿನ ಜನ ಈಗಾಗಲೇ ರೋಸಿ ಹೋಗಿದ್ದು ಪ್ರಾಕೃತಿಕ ವಿಕೋಪ ಮತ್ತು ಸರಕಾರ ಅನುದಾನದಿಂದ ಕಳಪೆ ಕಾಮಗಾರಿ ಮಾಡಿರುವುದನ್ನು ಮಾಜಿ ಮುಖ್ಯಮಂತ್ರಿ ರಾಜ್ಯದ ಜನತೆಯ ಮುಂದೆ ಇಡುತ್ತಾರೆ ಎಂಬ ಭಯ ಮತ್ತು ಹತಾಷೆಯಿಂದ ಬಿಜೆಪಿಯವರು ಇಂತಹ ನೀಚ ಕೃತ್ಯ ನಡೆಸಿದ್ದಾರೆ.

ಒರ್ವ ಮಾಜಿ ಮುಖ್ಯಮಂತ್ರಿ ಅಲ್ಲದೆ ವಿರೋಧ ಪಕ್ಷದ ನಾಯಕನ ಮೇಲೆ ಮೊಟ್ಟೆ ಎಸೆತದಂತಹ ಗಂಭೀರ ಘಟನೆ ಜರುಗಿರುವುದು ಸರಕಾರದ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಗುಪ್ತಚರ ಮತ್ತು ಗೃಹ ಇಲಾಖೆ ಎಷ್ಟೊಂದು ಕಳಪೆಯಾಗಿದೆ ಎನ್ನುವುದು ಕೊಡಗಿನ ಘಟನೆಯಲ್ಲಿ ಎದ್ದು ತೋರಿಸುತ್ತದೆ.

ಮಡಿಕೇರಿ ಯಲ್ಲಿ   ವಿರೋಧ ಪಕ್ಷದ ನಾಯಕರು   ಸಿದ್ದರಾಮಯ್ಯ ನವರ ಮೇಲೆ ನಡೆದ ಗಲಾಟೆಯನ್ನು ಕಂಡರೆ ಯಾಕೋ ಅನುಮಾನ ಮೂಡಿಸುತ್ತದೆ. ಸಂವಿಧಾನ ದತ್ತವಾಗಿ ಮುಖ್ಯಮಂತ್ರಿ ಗಳಿಗೆ ಎಷ್ಟು  ರಕ್ಷಣೆ ನೀಡಬೇಕಾಗಿತ್ತೋ ಅಷ್ಟೇ ರಕ್ಷಣೆಯನ್ನು ವಿರೋಧ ಪಕ್ಷದ ನಾಯಕರಿಗೆ ನೀಡಬೇಕು ಆದರೆ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಗಳು ರಕ್ಷಣೆ ನೀಡದೆ  ಕರ್ತವ್ಯ ಲೋಪ  ಎಸಗಿದ್ದಾರೆ ಅವರನ್ನು ಕೂಡಲೇ ವಜಾಗೊಳಿಸಬೇಕು ಮತ್ತು ಕೂಡಲೇ ನಿವೃತ್ತ ನ್ಯಾಯಮೂರ್ತಿ ಗಳಿಂದ ತನಿಖೆ ನಡೆಸಿ ವಾರದಲ್ಲಿ ವರದಿ ತರಿಸಿ ಕೊಂಡು ಸತ್ಯಾಸತ್ಯತೆ ಅರಿಯಬೇಕು. ಮತ್ತು ಸಿದ್ದರಾಮಯ್ಯ ಅವರಿಗೆ ಉನ್ನತ ಮಟ್ಟದ ಭದ್ರತೆಯನ್ನು ಒದಗಿಸುವಂತೆ ಆಗ್ರಹಿಸಿದ್ದಾರೆ.


Spread the love