ಸಿದ್ದರಾಮಯ್ಯ, ನಲಪಾಡ್‌ ಚಡ್ಡಿಗಳನ್ನು ಸುಡುತ್ತಾ ಇರಲಿ ನಾವು ಪೊರೈಸುತ್ತಾ ಇರುತ್ತೇವೆ – ಕುಯಿಲಾಡಿ ಸುರೇಶ್‌ ನಾಯಕ್

Spread the love

ಸಿದ್ದರಾಮಯ್ಯ, ನಲಪಾಡ್‌ ಚಡ್ಡಿಗಳನ್ನು ಸುಡುತ್ತಾ ಇರಲಿ ನಾವು ಪೊರೈಸುತ್ತಾ ಇರುತ್ತೇವೆ – ಕುಯಿಲಾಡಿ ಸುರೇಶ್‌ ನಾಯಕ್

ಉಡುಪಿ: ಕಾಂಗ್ರೆಸಿಗರು ಚಡ್ಡಿ ಸುಡ್ತಾ ಇರಲಿ ನಾವು ಪೂರೈಸುತ್ತಾ ಇರುತ್ತೇವೆ ಕೊನೆಗೊಂದು ದಿನ ಅವರಿಗೆ ಚಡ್ಡಿ ಹಾಕಲು ಗತಿ ಇರೋದಿಲ್ಲ ಅದು ಗ್ಯಾರಂಟಿ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಹೇಳಿದ್ದಾರೆ

ಅವರು ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಮತ್ತು ನಲಪಾಡ್‌ ಅವರು ಚಡ್ಡಿ ಸುಡುವ ಅಭಿಯಾನಕ್ಕೆ ಉಡುಪಿಯಲ್ಲೂ ಚಡ್ಡಿಗಳ ಸಂಗ್ರಹವಾಗುತ್ತಿದ್ದು, ಉಡುಪಿ ಜಿಲ್ಲೆಯಿಂದ ಬೆಂಗಳೂರಿಗೆ ಕೊರಿಯರ್ ನಲ್ಲಿ ಚಡ್ಡಿ ಕಳುಹಿಸುತ್ತೇವೆ.

ಕಾಂಗ್ರೆಸ್ ಚಡ್ಡಿಯ ಬಗ್ಗೆ ಹಗುರವಾಗಿ ಮಾತನಾಡಿದ್ದು, ಆರೆಸ್ಸೆಸ್ ಚಡ್ಡಿಯ‌ ತಾಕತ್ತು ಕಾಂಗ್ರೆಸ್ ಗೆ ಗೊತ್ತಿಲ್ಲ ಚಡ್ಡಿಯ ವಿಚಾರಕ್ಕೆ ಬಂದರೆ ಕರ್ನಾಟಕದಿಂದಲೇ ಕಾಂಗ್ರೆಸ್ ನ ಅಂತಿಮಯಾತ್ರೆ ಆರಂಭವಾಗುತ್ತದೆ. ನಾಳೆ ಬುಧವಾರ ಸಂಜೆ ಉಡುಪಿ ಜಿಲ್ಲೆಯಿಂದ ಹಳೆಯ ಚಡ್ಡಿಗಳನ್ನು ಕಳುಹಿಸುತ್ತೇವೆ. ನಾವು ಹೊಸ ಚಡ್ಡಿಗಳನ್ನು ಕಾಂಗ್ರೆಸ್ಸಿಗೆ ಕೊಡುವುದಿಲ್ಲ ಹಳೆ ಚಡ್ಡಿಗಳನ್ನೇ ಸಿದ್ದರಾಮಯ್ಯ ನಲಪಾಡ್ ಅದನ್ನು ಸುಡಲಿ ಎಂದರು.

ನಾವು ಆರೆಸ್ಸೆಸ್ ನ ಖಾಕಿ ಚಡ್ಡಿ ಕಳುಹಿಸುವುದಿಲ್ಲ ಬದಲಾಗಿ ನಮ್ಮ ಜನ ಬಳಸದೆ ಇರುವ ಚಡ್ಡಿಗಳನ್ನು ಕಳಿಸುತ್ತೇವೆ. ಕಾಂಗ್ರೆಸಿಗರಿಗೆ ಉಡುಪಿ ಜಿಲ್ಲೆಯ ವತಿಯಿಂದ ಬಳಸಲು ಯೋಗ್ಯತೆ ಇಲ್ಲದ ಹಾಳಾದ, ಹರಿದುಹೋದ ಚಡ್ಡಿಗಳನ್ನು ಕಳಿಸುತ್ತೇವೆ ಆರೆಸ್ಸೆಸ್ ಚಡ್ಡಿಯ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ಗೆ ಇಲ್ಲ ಎಂದರು.

ಆರ್ ಎಸ್ ಎಸ್ ಕಚೇರಿಗೆ ಬಾಂಬ್ ಬೆದರಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಈ ಪೊಟ್ಟು ಬೆದರಿಕೆಗೆ ಆರೆಸ್ಸೆಸ್-ಬಿಜೆಪಿ ಹೆದರುವುದಿಲ್ಲ ಕರೆ ಕೊಟ್ಟವರು ಬಾಂಬ್ ಇಟ್ಟು ನೋಡಲಿ ಬಿಜೆಪಿ ಆರ್ ಎಸ್ ಎಸ್ ಹೆದರುವ ಪರಿಸ್ಥಿತಿಯಲ್ಲಿ ಇಲ್ಲ. ನಾವು ಅಗಾಧವಾಗಿ ಆಳವಾಗಿ ಬೆಳೆದಿದ್ದೇವೆ ನೀವು ಬಾಂಬ್ ಇಟ್ಟು ನೋಡಿ ನಂತರ ಪರಿಸ್ಥಿತಿ ಏನಾವಯದೋ ಗೊತ್ತಾಗುತ್ತೆ ಎಂದರು.


Spread the love