ಸಿದ್ದರಾಮಯ್ಯ ಹಿಂದುಳಿದವರಿಗೆ ಮಾತ್ರ ನಾಯಕರಲ್ಲ, ಸರ್ವ ಜನಾಂಗಕ್ಕೂ ನಾಯಕ: ಡಿ.ಕೆ ಶಿವಕುಮಾರ್

Spread the love

ಸಿದ್ದರಾಮಯ್ಯ ಹಿಂದುಳಿದವರಿಗೆ ಮಾತ್ರ ನಾಯಕರಲ್ಲ, ಸರ್ವ ಜನಾಂಗಕ್ಕೂ ನಾಯಕ: ಡಿ.ಕೆ ಶಿವಕುಮಾರ್
 
ದಾವಣಗೆರೆ: ‘ಸಿದ್ದರಾಮಯ್ಯ ಅವರು ಹಿಂದುಳಿದವರ ನಾಯಕರಲ್ಲ, ಸರ್ವ ಜನಾಂಗಕ್ಕೂ ಅವರ ನಾಯಕ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದ ಡಿ.ಕೆ ಶಿವಕುಮಾರ್ ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

‘ಎಲ್ಲ ವರ್ಗದವರನ್ನು ಸಂಘಟನೆ ಮಾಡ ಬೇಕು. ಸಿದ್ದರಾಮಯ್ಯರನ್ನು ಅವರು ಯಾವಾಗಲೂ ಹಿಂದುಳಿದ ವರ್ಗದ ನಾಯಕ ಅಂತ ನೀವು ಬಿಂಬಿಸಬೇಡಿ, ಅವರು ಸರ್ವ ಜನಾಂಗಕ್ಕೂ, ಸರ್ವ ಧರ್ಮಕ್ಕೂ ಸಿದ್ದರಾಮಯ್ಯ ಅವರು ನಾಯಕ ಎಂಬುದನ್ನು ನೀವು ಮರೆಯಬಾರದು’ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ನಿಮಗೂ ಸಂಭ್ರಮ, ಕಾಂಗ್ರೆಸ್ಸಿಗೂ ಸಂಭ್ರಮ , ಸಿದ್ದರಾಮಯ್ಯಗೂ ಸಂಭ್ರಮ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರ ಅಧಿಕಾರ ನೀವು ನಾವೆಲ್ಲ ನೋಡಿದ್ದೇವೆ. ಬಸವಣ್ಣ ಹುಟ್ಟಿದ ದಿನವೇ ಅವರು ಅಧಿಕಾರ ವಹಿಸಿಕೊಂಡಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ತೆಗೆದುಕೊಂಡ ಒಂದು ಗಂಟೆಯಲ್ಲಿ ಯಾರೂ ಕೂಡ ಒಬ್ಬ ಬಡವ ಹಸಿವಿನಲ್ಲಿರಬಾರದು ಎಂಬ ನಿರ್ಧಾರ ಕೈಗೊಂಡಿದ್ದರೆ ಅದು ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಂದು ಹೇಳಿದರು.


Spread the love

Leave a Reply

Please enter your comment!
Please enter your name here