ಸಿದ್ದರಾಮಯ್ಯ ಹುಟ್ಟಬ್ಬಕ್ಕೆ ಬೃಹತ್ ರಕ್ತದಾನ!

Spread the love

ಸಿದ್ದರಾಮಯ್ಯ ಹುಟ್ಟಬ್ಬಕ್ಕೆ ಬೃಹತ್ ರಕ್ತದಾನ!

ಮೈಸೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ರವರ ಹುಟ್ಟುಹಬ್ಬದ ಅಂಗವಾಗಿ ಕೃಷ್ಣರಾಜ ಯುವ ಬಳಗದ ವತಿಯಿಂದ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು ಆ ಸಂಬಂಧದ ಮಾಹಿತಿ ಪ್ರಚಾರದ ಭಿತ್ತಿಪತ್ರವನ್ನು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಬಿಡುಗಡೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಅಭಿವೃದ್ಧಿಯ ಹರಿಕಾರ ಅನ್ನಭಾಗ್ಯ ರೂವಾರಿ ಮಾಜಿ ಸಿಎಂ ಸಿದ್ದರಾಮಯ್ಯ ರವರ ಹುಟ್ಟುಹಬ್ಬವನ್ನ ರಕ್ತದಾನ ಶಿಬಿರದ ಮೂಲಕ ನೂರಾರು ಮಂದಿಗೆ ಉಪಯೋಗವಾಗುವಂತೆ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ, ಕೋವಿಡ್ ಕಾರಣದಿಂದಾಗಿ ರಕ್ತಶೇಖರಣೆ ಪ್ರಮಾಣ ಕುಸಿದಿದೆ, ಹೆರಿಗೆ, ಶಸ್ತ್ರಚಿಕಿತ್ಸೆ ಮತ್ತು ಅಪಘಾತವಾದಾಗ ರೋಗಿಗಳಿಗೆ ತುರ್ತಾಗಿ ರಕ್ತದ ಅನಿವಾರ್ಯವಾಗಿರುತ್ತದೆ ರಕ್ತಕ್ಕೆ ಪರ್ಯಾಯ ಮಾರ್ಗವಿಲ್ಲ ಕೃತಕವಾಗಿ ಉತ್ಪಾದಿಸಲು ವೈಜ್ಞಾನಿಕವಾಗಿ ಸಾಧ್ಯವಿಲ್ಲ ಹಾಗಾಗಿ ಯುವಕರು ಹೆಚ್ಚಾಗಿ ರಕ್ತದಾನದ ಮಾಡುವ ಕಡೆ ಮುಂದಾಗಬೇಕು ಎಂದರು,

ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್ ಎಂ ಕೆಂಪಿ ಮಾತನಾಡಿ ಸಿದ್ದರಾಮಯ್ಯ ರವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿರುವ ರಕ್ತದಾನ ಶಿಬಿರದಲ್ಲಿ ಅವರ ಅಭಿಮಾನಿಗಳು ಯುವಕರು ರಕ್ತದಾನ ಮಾಡಿದವರೆಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು, ರಕ್ತನೀಡಿದ ಪರಿಚಯಸ್ಥರಿಗೆ ಯಾವುದೇ ಗುಂಪಿನ ರಕ್ತ ಅನಿವಾರ್ಯತೆ ಇದ್ದಲ್ಲಿ ಪ್ರಮಾಣಪತ್ರ ತೋರಿಸಿದರೇ ಸಾಕು ತಕ್ಷಣವೇ ನೀಡಲಾಗುವುದು, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ನೊಂದಾಯಿಸಲು ಮಾಹಿತಿಗಾಗಿ 9141685147 ಸಂಪರ್ಕಿಸಬಹುದು ಎಂದರು

ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ, ಕೃಷ್ಣರಾಜ ಯುವ ಬಳಗದ ಪಳನಿಸ್ವಾಮಿ , ಮನು ಮಹೀಂದ್ರಾ, ಹರ್ಷಿತ್ ಗೌಡ, ನಂದನ್ ಚಕ್ರವರ್ತಿ ಇನ್ನಿತರರು ಇದ್ದರು.


Spread the love