ಸಿದ್ಧರಾಮೋತ್ಸವದ ಯಶಸ್ಸು, ಕಾಂಗ್ರೆಸ್’ನತ್ತ ಜನರ ಒಲವು ನೋಡಿ ಹತಾಶರಾದ ಬಿಜೆಪಿಗರು ಮೊಟ್ಟೆ ಎಸೆದಿದ್ದಾರೆ – ರಮೇಶ್‌ ಕಾಂಚನ್

Spread the love

ಸಿದ್ಧರಾಮೋತ್ಸವದ ಯಶಸ್ಸು, ಕಾಂಗ್ರೆಸ್’ನತ್ತ ಜನರ ಒಲವು ನೋಡಿ ಹತಾಶರಾದ ಬಿಜೆಪಿಗರು ಮೊಟ್ಟೆ ಎಸೆದಿದ್ದಾರೆ – ರಮೇಶ್‌ ಕಾಂಚನ್

ಉಡುಪಿ: ಸಿದ್ದರಾಮೋತ್ಸವದ ಅಭೂತಪೂರ್ವ ಯಶಸ್ಸು ಮತ್ತು ಕಾಂಗ್ರೆಸ್ ನತ್ತ ಜನರ ಒಲವು ನೋಡಿ ಹತಾಶರಾದ ಬಿಜೆಪಿಗರು ಕೊಡಗಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲು ಬಂದಿದ್ದ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆಯುವ ಪ್ರಯತ್ನ ಮಾಡಿದ್ದಾರೆಂದು ಉಡುಪಿ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.

ಇಂದು ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿದೆ.ಜನರು ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಗಣೇಶೋತ್ಸವದ ಪೆಂಡಾಲಿಗೂ 18% ಜಿ.ಎಸ್.ಟಿ ಕೊಡಬೇಕಾಗದ ಪರಿಸ್ಥಿತಿಯನ್ನು ಸರಕಾರ ತಂದೊಡ್ಡಿದೆ. ಅಧಿಕಾರ ಯಂತ್ರ ಕುಸಿದು ಸರಕಾರ ವೈಫಲ್ಯದ ಹಾದಿಯಲ್ಲಿರುವಾಗ ಹತಾಶರಾದ ಬಿಜೆಪಿ ಕಾರ್ಯಕರ್ತರು ವಿರೋಧ ಪಕ್ಷ ನಾಯಕರ ಮೇಲೆ ಮೊಟ್ಟೆ ಎಸೆಯುವಂತಹ ಪ್ರಜಾಪ್ರಭುತ್ವ ಮೌಲ್ಯದ ವಿರುದ್ಧವಾದ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ.

ಕರಾವಳಿ ಭಾಗದಲ್ಲಿ ಅತೀವೃಷ್ಠಿಯಿಂದಾಗಿ ಅಂದಾಜು 250 ಕೋಟಿಗಿಂತ ಅಧಿಕ ನಷ್ಟವಾಗಿದೆ. ಮೀನುಗಾರರ ದೋಣಿ ನಾಶವಾಗಿದೆ. ಕೃಷಿ ಭೂಮಿ ಹಾಳಾಗಿದೆ. ಜನರ ಮನೆ, ತೋಟ ನಾಶವಾಗಿದೆ. ಅದರ ಕುರಿತು ಗಮನ ಹರಿಸಬೇಕಾದ ಆಡಳಿತರೂಢ ಬಿಜೆಪಿಗರು ಇಂದು ಕೇವಲ ಹದಿನೈದು ಕೋಟಿ ಪರಿಹಾರ ಘೋಷಿಸಿ ಕೈತೊಳೆದುಕೊಂಡಿದ್ದಾರೆ. ಜನರ ಗಮನ ಬೇರೆಡೆ ಹರಿಸಲು ಹಿಂದು-ಮುಸ್ಲಿಮ್ ಆಟದಲ್ಲಿ ತಲ್ಲೀನರಾಗಿದ್ದಾರೆ.

ಬಡವರಿಗಾಗಿ ಜನಪ್ರಿಯ ಯೋಜನೆಗಳನ್ನು ತಂದ ಸಿದ್ದರಾಮಯ್ಯ ಅವರ ಸಿದ್ಧರಾಮೋತ್ಸವ ಕಾರ್ಯಕ್ರಮದ ಯಶಸ್ಸಿನ ನಂತರ ಬಿಜೆಪಿಗರು ಹತಾಶರಾಗಿದ್ದು ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರ ವರ್ಚಸನ್ನು ಹಾಳು ಮಾಡಬೇಕೆಂಬ ಉದ್ದೇಶದಿಂದ ಮಾಡಬೇಕಾದ ಅಭಿವೃದ್ಧಿ ಕೆಲಸ ಬಿಟ್ಟು ಇಂತಹ ಜನ ಮೆಚ್ಚದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆಂದು ರಮೇಶ್ ಕಾಂಚನ್ ತಿಳಿಸಿದರು.


Spread the love