ಸಿಸಿಬಿ ಪೊಲೀಸರಿಂದ 4 ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಗಳಿಗೆ ದಾಳಿ – 16 ಮಂದಿಯ ಬಂಧನ

Spread the love

ಸಿಸಿಬಿ ಪೊಲೀಸರಿಂದ 4 ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಗಳಿಗೆ ದಾಳಿ – 16 ಮಂದಿಯ ಬಂಧನ

ಮಂಗಳೂರು: ನಗರದಲ್ಲಿ ವಿವಿಧ ಕಡೆಗಳಲ್ಲಿ ಸಿಸಿಬಿ ಪೊಲೀಸರ ನೇತೃತ್ವದ ತಂಡ ದಾಳಿ ನಡೆಸಿ 4 ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ದಾಖಲಿಸಿ 16 ಮಂದಿಯನ್ನು ಬಂಧಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ನಗರ ಕಮೀಷನರ್ ಅವರು ಮಂಗಳೂರು ನಗರದಲ್ಲಿ ಯಾವುದೇ ರಿಕ್ರಿಯೇಶನ್ ಕ್ಲಬ್ ಗಳನ್ನು ತೆರೆಯಲು ಅನುಮತಿಯನ್ನು ಕೋರಿ ಅರ್ಜಿ ಸಲ್ಲಿಸಿಲ್ಲ ಅಲ್ಲದೆ ಯಾವುದೇ ಕಾನೂನು ಬಾಹಿರರ ಚಟುವಟಿಕೆಗಳನ್ನು ನಡೆಸಲು ಪೊಲೀಸ್ ಇಲಾಖೆಯಿಂದ ಅನುಮತಿ ನೀಡಿಲ್ಲ.

ಮಂಗಳೂರು ನಗರದಲ್ಲಿ ಐಪಿಎಲ್ ಸಂಬಂಧ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವ ವಿಚಾರ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ವಿಕಾಸ್, ಇವರ ನಿರ್ದೇಶನದಲ್ಲಿ ಡಿಸಿಪಿಗಳಾದ ಅರುಣಾಂಶು ಗಿರಿ ಮತ್ತು ವಿನಯ್ ಏ ಗಾಂವ್ಕರ್ ನೇತೃತ್ವದಲ್ಲಿ ನಗರದ ಸಿಸಿಬಿ ತಂಡವು ನಗರದ ವಿವಿಧ ಕಡೆಗಳಲ್ಲಿ ದಾಳಿ ನಡೆಸಿ 4 ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳನ್ನು ದಾಖಲಿಸಿರುತ್ತಾರೆ.

3 ಪ್ರಕರಣಗಳು ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆಯಲ್ಲಿ ಮತ್ತು 1 ಪ್ರಕರಣ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ 16 ಮಂದಿಯನ್ನು ದಸ್ತಗಿರಿ ಮಾಡಲಾಗಿದ್ದು, ಅವರಿಂದ 28 ಮೊಬೈಲ್ ಫೋನ್ ಗಳು ರೂ 8 ಲಕ್ಷ ಮೌಲ್ಯದ ಕಾರು ಮತ್ತು ರೂ 2 67 100 ನಗದು ಹಣವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.


Spread the love