
ಸಿ.ಎ. ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ರೂತ್ ಡಿಸಿಲ್ವಾಗೆ ಎಂ.ಸಿ.ಸಿ. ಬ್ಯಾಂಕಿನ ವತಿಯಿಂದ ಸನ್ಮಾನ
ಎಂ.ಸಿ.ಸಿ. ಬ್ಯಾಂಕಿನ ವತಿಯಿಂದ ಸಿ.ಎ. ಪರೀಕ್ಷೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನವನ್ನು ಪಡೆದ ಕುಮಾರಿ ರೂತ್ ಕ್ಲೆರ್ ಡಿಸಿಲ್ವಾ ಇವರಿಗೆ ಎಂ.ಸಿ.ಸಿ. ಬ್ಯಾಂಕಿನ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಬ್ಯಾಂಕಿನಲ್ಲಿ ಹಮ್ಮಿಕೊಳ್ಳಲಾಯಿತು.
ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊರವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದರು. ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷರಾದ ಶ್ರೀ ಜೊಯ್ಲಸ್ ಡಿಸೋಜ ಇವರು ಮುಖ್ಯ ಅತಿಥಿಯಾಗಿದ್ದರು.
ಬ್ಯಾಂಕಿನ ಉಪಾಧ್ಯಕ್ಶರಾದ ಜೆರಾಲ್ಡ್ ಜೂಡ್ ಡಿಸಿಲ್ವಾರವರು ಸನ್ಮಾನಿತರ ಸನ್ಮಾನ ಪತ್ರವನ್ನು ಓದಿ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ಜೊತೆಗೆ ಕುಮಾರಿ ರೂತ್ ಕ್ಲೆರ್ ಡಿಸಿಲ್ವಾರವರು ತಮ್ಮ ಸಾಧನೆಯಿಂದ ಮಂಗಳೂರಿನ ಪ್ರತ್ಯೇಕವಾಗಿ ತುಳುನಾಡಿನ ಕೀರ್ತಿಯನ್ನು ಪ್ರಪಂಚದಾದ್ಯಂತ ಹಬ್ಬಿದ್ದಾರೆ ಎಂದು ಪ್ರಶಂಸಿಸಿದರು.
ಕಾರ್ಯದ ಅಧ್ಯಕ್ಷರಾದ ಅನಿಲ್ ಲೋಬೊರವರು, ಸನ್ಮಾನಿತರಿಗೆ ಶಾಲ್ ಹೊದಿಸಿ, ಹೂಗುಚ್ಚ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಿದರು.
ಸನ್ಮಾನಿತರಾದ ಕುಮಾರಿ ರೂತ್ ಕ್ಲೆರ್ ಡಿಸಿಲ್ವಾರವರು ಮಾತನಾಡಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿದ ಬ್ಯಾಂಕಿನವರಿಗೆ ಧನ್ಯವಾದ ಸಮರ್ಪಿಸಿ, ಬ್ಯಾಂಕಿನ ಬಗ್ಗೆ ತಮಗೆ ಇರುವ ಅಭಿಮಾನ ಮತ್ತು ಸಂತೋಷವನ್ನು ವ್ಯಕ್ತ ಪಡಿಸಿದರು.
ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷರಾದ ಜೊಯ್ಲಸ್ ಡಿಸೋಜ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮತಾನಾಡಿದ ಅವರು ಮಾತನಾಡಿ ಶತಮಾನದ ಇತಿಹಾಸವಿರುವ ಎಂ.ಸಿ.ಸಿ. ಬ್ಯಾಂಕಿನ ಪ್ರಗತಿ ಬಗ್ಗೆ ಕೊಂಡಾಡಿದರು ಮತ್ತು ಈ ಬ್ಯಾಂಕು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಕಾಣಲಿ ಎಂದು ಪ್ರಸ್ತುತ ಬ್ಯಾಂಕಿನ ಅಧ್ಯಕ್ಷರು, ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರಿಗೆ ಶುಭ ಕೋರಿದರು.
ಸಭೆಯ ಅಧ್ಯಕ್ಷ ಸ್ಥಾನದಿಂದ ಅನಿಲ್ ಲೋಬೊರವರು ಸಭೆಯನ್ನುದ್ದೇಶಿಸಿ, ಕುಮಾರಿ ರೂತ್ ಕ್ಲೆರ್ ಡಿಸಿಲ್ವಾರವರ ಅದ್ಬುತ ಸಾಧನೆಯ ಬಗ್ಗೆ ಹೆಮ್ಮೆ ಪಟ್ಟು ಅವರನ್ನು ಪ್ರಶಂಸಿದರು ಮತ್ತು ಅವರು ತಮ್ಮ ಸಿ.ಎ. ಶಿಕ್ಷಣವನ್ನು ಅಭ್ಯಾಸ ಮಾಡುತ್ತಿರುವಾಗ ನಮ್ಮ ಎಂ.ಸಿ.ಸಿ. ಬ್ಯಾಂಕಿನ ಲೆಕ್ಕ ಪರಿಶೋಧನೆಯನ್ನು ಕೂಡ ಮಾಡಿದ್ದಾರೆ ಎಂದು ನೆನಪಿಸಿ ಸಂತೋಷವನ್ನು ವ್ಯಕ್ತಪಡಿಸಿದರು. ಅವರ ಮುಂದಿನ ಜೀವನದಲ್ಲಿ ಅವರಿಗೆ ಇನ್ನೂ ಹೆಚ್ಚಿನ ಯಶಸ್ವಿ ಸಿಗಲೆಂದು ಹಾರೈಸಿದರು.
ಬ್ಯಾಂಕಿನ ನಿರ್ದೇಶಕರಾದ ಅನಿಲ್ ಪತ್ರಾವೊ, ಎಲ್ರೋಯ್ ಕಿರಣ್ ಕ್ರಾಸ್ಟೊ, ಜೆ. ಪಿ. ರೊಡ್ರಿಗಸ್, ಡೇವಿಡ್ ಡಿಸೋಜ, ಆ್ಯಂಡ್ರು ಡಿಸೋಜ, ಮಾರ್ಸೆಲ್ ಡಿಸೋಜ, ರೋಶನ್ ಡಿಸೋಜ, ಹೆರಾಲ್ಡ್ ಮೊಂತೇರೊ, ಡೊಲ್ಫಿ ಪತ್ರಾವೊ, ಪ್ರೀಡಾ ಡಿ’ಸೋಜ, ವೃತ್ತಿಪರ ನಿರ್ದೇಶಕರಾದ ಸಿ. ಜಿ. ಪಿಂಟೊ, ಉಪಮಹಾಪ್ರಬಂಧಕರಾದ ರಾಜ್ ಮಿನೇಜಸ್, ರೂತ್ ಕ್ಲೆರ್ ಡಿಸಿಲ್ವಾ ಇವರ ಪೆÇೀಷಕರಾದ ರೂಪರ್ಟ್ ಡಿ’ಸಿಲ್ವಾ ಹಾಗೂ ರೋಜಿ ಮರಿಯ ಡಿಸಿಲ್ವಾ ಹಾಜರಿದ್ದರು.
ಬ್ಯಾಂಕಿನ ಮಹಾಪ್ರಬಂಧಕರಾದ ಸುನಿಲ್ ಮಿನೇಜಸ್ ವಂದಿಸಿ, ಬ್ಯಾಂಕಿನ ನಿರ್ದೇಶಕಿಯಾದ ಐರಿನ್ ರೆಬೆಲ್ಲೊ ಕಾರ್ಯಕ್ರಮವನ್ನು ನಿರೂಪಿಸಿದರು.