ಸಿ.ಎ. ಫೈನಲ್ ಪರೀಕ್ಷಾ ಫಲಿತಾಂಶ-2021: ಆಳ್ವಾಸ್‌ನ ನಾಲ್ಕು ಜನ ಹಿರಿಯ ವಿದ್ಯಾರ್ಥಿಗಳು ಉತ್ತೀರ್ಣ

Spread the love

ಸಿ.ಎ. ಫೈನಲ್ ಪರೀಕ್ಷಾ ಫಲಿತಾಂಶ-2021: ಆಳ್ವಾಸ್‌ನ ನಾಲ್ಕು ಜನ ಹಿರಿಯ ವಿದ್ಯಾರ್ಥಿಗಳು ಉತ್ತೀರ್ಣ
 

ಮೂಡುಬಿದಿರೆ: ಡಿಸೆಂಬರ್ 2021 ರಲ್ಲಿ ನಡೆದ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ಬಿ.ಕಾಂ. ಹಳೆ ವಿದ್ಯಾರ್ಥಿನಿ ಕಿರಣ ಕಾಮತ್ ಗ್ರೂಪ್-1 ಮತ್ತು ಗ್ರೂಪ್-2 ಪರೀಕ್ಷೆಗಳನ್ನು ಒಂದೇ ಬಾರಿ ಎದುರಿಸಿ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ತಮ್ಮ ಆರ್ಟಿಕಲ್ ಶಿಪ್‌ನ್ನು ಪೈ ನಾಯಕ್ & ಅಸೋಸಿಯೇಟ್ಸ್ ಉಡುಪಿ ಇಲ್ಲಿ ಮುಗಿಸಿರುತ್ತಾರೆ.

ಆಳ್ವಾಸ್ ಕಾಲೇಜಿನ ಬಿ.ಕಾಂ.ನ ಹಿರಿಯ ವಿದ್ಯಾರ್ಥಿಗಳಾದ ಲಕ್ಷ್ಮೀಕಾಂತ್, ಸಪ್ನಾ ಕಾಮತ್, ಗಣಶ್ಯಾಮ್ ಟಿ. ಭಟ್ ಇವರು ಡಿಸೆಂಬರ್ 2021 ರಲ್ಲಿ ನಡೆದ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊAದಿಗೆ ಉತ್ತೀರ್ಣರಾಗಿರುತ್ತಾರೆ. ಲಕ್ಷ್ಮೀಕಾಂತ್ ಇವರು ತಮ್ಮ ಆರ್ಟಿಕಲ್ ಶಿಪ್‌ನ್ನು ವಗ್ರೇಚ & ಅಸೋಸಿಯೇಟ್ಸ್ ಬೆಂಗಳೂರು, ಸಪ್ನಾ ಕಾಮತ್ ಇವರು ತಮ್ಮ ಆರ್ಟಿಕಲ್ ಶಿಪ್‌ನ್ನು ಸಿಎ ನರಸಿಂಹ ನಾಯಕ್, ನಾಯಕ್ & ಅಸೋಸಿಯೇಟ್ಸ್ ಉಡುಪಿ, ಗಣಶ್ಯಾಮ್ ಟಿ. ಭಟ್ ಇವರು ತಮ್ಮ ಆರ್ಟಿಕಲ್‌ಶಿಪ್‌ನ್ನು ಮೆ. ದಾಮೋದರ್ & ಕಂಪೆನಿ ಪುತ್ತೂರು ಇಲ್ಲಿ ಮುಗಿಸಿರುತ್ತಾರೆ.

ನಾಲ್ವರು ಆಳ್ವಾಸ್‌ನ ದತ್ತು ಶಿಕ್ಷಣ ಯೋಜನಯಡಿ ಶಿಕ್ಷಣ ಪಡದೆ ವಿದ್ಯಾರ್ಥಿಗಳು
ಕಿರಣ ಕಾಮತ್ ಮತ್ತು ಲಕ್ಷ್ಮೀಕಾಂತ್ ಆಳ್ವಾಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಉಚಿತ ಶಿಕ್ಷಣ ವ್ಯವಸ್ಥೆಯಲ್ಲಿ ಪೂರೈಸಿರುತ್ತಾರೆ ಹಾಗೂ ಸಪ್ನಾ ಕಾಮತ್ ಮತ್ತು ಗಣಶ್ಯಾಮ್ ಟಿ. ಭಟ್ ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಸಾಂಸ್ಕ್ರತಿಕ ಉಚಿತ ಶಿಕ್ಷಣ ವ್ಯವಸ್ಥೆಯಲ್ಲಿ ಪೂರೈಸಿ ಈ ಸಾಧನೆ ಮೆರೆದಿದ್ದಾರೆ.

ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎ. ಮೋಹನ ಆಳ್ವ ಮತ್ತು ಪ್ರಾಂಶುಪಾಲರಾದ ಡಾ. ಕುರಿಯನ್ ಹಾಗೂ ಪದವಿ ವಾಣಿಜ್ಯ ವೃತ್ತಿಪರ ವಿಭಾಗದ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.


Spread the love