ಸಿ.ಎ ಫೌಂಡೇಶನ್, ಸಿ.ಎ. ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ನ ಒಲ್ವಿಟಾ ಆನ್ಸಿಲಾ ಡಿಸೋಜಗೆ ರಾಷ್ಟ್ರಮಟ್ಟದಲ್ಲಿ 19ನೇ ರ್ಯಾಂಕ್

Spread the love

ಸಿ.ಎ ಫೌಂಡೇಶನ್, ಸಿ.ಎ. ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ನ ಒಲ್ವಿಟಾ ಆನ್ಸಿಲಾ ಡಿಸೋಜಗೆ ರಾಷ್ಟ್ರಮಟ್ಟದಲ್ಲಿ 19ನೇ ರ್ಯಾಂಕ್

ಮೂಡುಬಿದಿರೆ: ಸಿ.ಎ ಫೌಂಡೇಶನ್, ಸಿ.ಎ. ಇಂಟರ್ಮೀಡಿಯೇಟ್ ಹಾಗೂ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆ ಮಾಡಿದ್ದಾರೆ. ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಮರ್ಸ್ ಪ್ರೊಫೆಶನಲ್ ವಿಭಾಗದ ಒಲ್ವಿಟಾ ಆನ್ಸಿಲಾ ಡಿಸೋಜ ಅಖಿಲ ಭಾರತ ಮಟ್ಟದ ಟಾಪ್ 50 ಸ್ಥಾನಗಳಲ್ಲಿ 19ನೇ ರ್ಯಾಂಕ್ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಒಲ್ವಿಟಾ ಆಳ್ವಾಸ್ನ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯಡಿ ಪಿಯುಸಿ ಶಿಕ್ಷಣ ಪೂರೈಸಿದ್ದು, ಪ್ರಸ್ತುತ ದ್ವಿತೀಯ ಬಿಕಾಂ ಪದವಿ ಓದುತ್ತಿದ್ದಾರೆ. ಆಳ್ವಾಸ್ನಲ್ಲಿ ಪಿಯುಸಿ ಮಾಡಿರುವ ಈಕೆ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರು. ಗ್ರೂಪ್1 ಮತ್ತು ಗ್ರೂಪ್2 ಎರಡೂ ಪರೀಕ್ಷೆಗಳನ್ನು ಒಂದೇ ಪ್ರಯತ್ನದಲಿ ್ಲಉತ್ತೀರ್ಣರಾಗಿದ್ದು, 800ರಲ್ಲಿ 655 ಅಂಕಗಳನ್ನು ಪಡೆದಿದ್ದಾರೆ.

ಸಿ.ಎ-ಇಂಟರ್ ಇಂಟರ್ಮೀಡಿಯೇಟ್ ಫಲಿತಾಂಶ:
ಸಿ.ಎ-ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜು ಗ್ರೂಪ್-1 ಮತ್ತು ಗ್ರೂಪ್-2 ವಿಭಾಗದಲ್ಲಿ ಶೇ.23.53 ಫಲಿತಾಂಶವನ್ನು ಪಡೆದುಕೊಂಡಿದೆ. ಓಲ್ವಿಟಾ ಆನ್ಸಿಲಾ ಡಿಸೋಜ, ವಾಣಿಶ್ರೀ, ನೌಫಲ್, ಅನುಹೆಗ್ಡೆ, ಯಶಸ್ವಿನಿ, ಆಂಚಲ್, ರಾಯ್ಡನ್, ಸಾಹುಲ್ ಹಮೀದ್, ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಗ್ರೂಪ್-1 ವಿಭಾಗದಲ್ಲಿ 70.83 % ಫಲಿತಾಂಶವನ್ನು ಪಡೆದುಕೊಂಡಿದೆ. ವಿದ್ಯಾರ್ಥಿಗಳಾದ ದಿವ್ಯಾ, ಸತ್ಯರಾಜ್, ಚೈತನ್ಯ, ಗೌತಮಿ ವಿ, ಪಲ್ಲವಿ, ಗುರುಪ್ರಸಾದ್, ಪ್ರೀತೀಶ್ ಕುಡ್ವ, ನಿಖಿತಾ ಎಂ., ನಿಶಾ, ಮೆಲ್ವಿನ್, ಕೀರ್ತನಾ, ಶ್ವೇತಾ, ಶುಭಂ, ದಿನಿತಾ, ಭಾಗ್ಯಶ್ರೀ, ಜೊನಿಟಾ, ಆರುಷಿ ಉತ್ತಮ ಫಲಿತಾಂಶದೊಂದಿಗೆಉತ್ತೀರ್ಣರಾಗಿರುತ್ತಾರೆ. ಗ್ರೂಪ್-2 ವಿಭಾಗದಲ್ಲಿ ಶೇ.57.14 ಫಲಿತಾಂಶವನ್ನು ಪಡೆದುಕೊಂಡಿದ್ದು, ವಿದ್ಯಾರ್ಥಿಗಳಾದ ಮಧುರಾ, ನಿಶಾ, ಭರತ್ ಹೆಗ್ಡೆ, ಕೌಶಿಕ್ ಉತ್ತೀರ್ಣರಾಗಿದ್ದಾರೆ.

ಸಿ.ಎ ಅಂತಿಮ ಫಲಿತಾಂಶ:
ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಬಿ.ಕಾಂ. ಹಳೆವಿದ್ಯಾರ್ಥಿಗಳಾದ ಚೈತ್ರಾ, ಪ್ರಿಯಾ, ಅಜಯ್ಕೃಷ್ಣ, ಅಕ್ಷತಾಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಚೈತ್ರಾ, ಗ್ರೂಪ್-1 ಮತ್ತು ಗ್ರೂಪ್-2 ವಿಭಾಗದಲ್ಲಿ ಒಂದೇ ಬಾರಿ ಉತ್ತೀರ್ಣರಾಗಿ ಉತ್ತಮ ಅಂಕಗಳೊಂದಿಗೆ ವಿಶೇಷ ಸಾಧನೆಗೈದಿದ್ದಾರೆ.

ಸಿ.ಎ-ಫೌಂಡೇಶನ್ ಪರೀಕ್ಷಾ ಫಲಿತಾಂಶ:
ಸಿ.ಎ-ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜು ಶೇ.60.29 ಫಲಿತಾಂಶವನ್ನು ಪಡೆದುಕೊಂಡಿದೆ.ವಿದ್ಯಾರ್ಥಿಗಳಾದ ವೀಕ್ಷಾ ಶೆಟ್ಟಿ, ಜನಿತ್ ಬಿ.ಸಿ., ರಿಯಾನ, ಸುಮ, ಮನೋಜ್ ಕುಮಾರ್, ಆರನ್, ಪ್ರೀಮ, ಸುಬ್ರಮಣ್ಯ, ಚೇತನಾ, ಅಶ್ವಥ್, ರಕ್ಷಣ್ಯ, ಸಿಂಚನ, ಶಿಲ್ಪಾ, ಮನೀï, ಸಿಂಚನಾ ಹೆಬ್ಬಾರ್, ಶ್ರೇಯ, ಶಿವರಾಜ್, ಸುಗಮ, ಪ್ರೇರಣಾ, ಸ್ವರೂಪ್, ಕಾರ್ತಿಕ್, ಪಲ್ಲವಿ, ಶುಭ, ಬಸವರಾಜ್, ಪುನೀತ್, ಮಹಾಲಕ್ಷ್ಮಿ, ಅಂಜಲಿ, ಗಂಗಾ, ಕಿರಣ್, ಸುದೀಪ್, ಚರಣ್, ವಿಕ್ರಮ್, ಕೀರ್ತನಾ, ರುಚಿತಾ, ಕ್ಷಮಿತಾ, ಮಾನಸ, ವಿಘ್ನೇಶ್, ದೀಕ್ಷಿತಾ, ಸಿದ್ದಾರ್ಥ್, ಪ್ರಜ್ಞೇಶ್, ಲೇಖನಾ, ಉತ್ತೀರ್ಣರಾಗಿದ್ದಾರೆ ಎಂದು ಡಾ.ಎಂ ಮೋಹನ ಆಳ್ವ ಮಾಹಿತಿ ನೀಡಿದರು.

ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್ ಶೆಟ್ಟಿ, ಸಂಯೋಜಕರಾದ ಪ್ರಶಾಂತ್ ಎಂ.ಡಿ, ಅಶೋಕ್ ಕೆ.ಸಿ., ಆನಂದ ಪ್ರಭು, ಅಪರ್ಣಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love