ಸುಜಾತಾ ಎಸ್.ಪೂಜಾರಿಗೆ ಒಕ್ಕೂಟ ಸನ್ಮಾನ

Spread the love

ಸುಜಾತಾ ಎಸ್.ಪೂಜಾರಿಗೆ ಒಕ್ಕೂಟ ಸನ್ಮಾನ

ಕುಂದಾಪುರ: ದಕ ಹಾಲು ಒಕ್ಕೂಟ 2021-22ನೇ ಸಾಲಿನಲ್ಲಿ ಮಧ್ಯಮ ವರ್ಗದ ಉತ್ತಮ ಹಾಲು ಉತ್ಪಾದ ಸಾಧನೆ ಮಾಡಿ, ಮಧ್ಯಮ ವರ್ಗದ ಹೈನುಗಾರಿಕೆ ಪ್ರಸಸ್ತಿ ಪುರಸ್ಕøತೆ ಹಕ್ಲಾಡಿ ಗ್ರಾಮ ಸಂತೆಗದ್ದೆ ನಿವಾಸಿ ಸುಜಾತಾ ಸಂತೋಷ ಪೂಜಾರಿ ಅವರ ಶನಿವಾರ ನಡೆದ ದಕ ಹಾಲು ಒಕ್ಕೂಟ ಸಭೆಯಲ್ಲಿ ಒಕ್ಕೂಟ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಸನ್ಮಾನಿಸಿದರು.

ಉಪಾಧ್ಯಕ್ಷ ಜಯರಾಮ ರೈ, ಒಕ್ಕೂಟ ಎಂಡಿ ಡಿ.ಅಶೋಕ್, ನಿಕಟಪೂರ್ವ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ಬೋಳಾ ಸದಾಶಿವ ಶೆಟ್ಟಿ, ನರಸಿಂಹ ನಾಯಕ್, ಸುಧಾಕರ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಸ್ಮಿತಾ ಆರ್.ಶೆಟ್ಟಿ, ಸುಭದ್ರಾ ರಾವ್ ಇದ್ದರು.

ಸುಜಾತಾ ಎಸ್.ಪೂಜಾರಿ ಹಕ್ಲಾಡಿ ಹಾಲು ಉತ್ಪಾದಕರ ಸೊಸೈಟಿ ಸದಸ್ಯೆ ಆಗಿದ್ದು, ಕಳೆದ ನಾಲ್ಕು ವರ್ಷದಿಂದ ಪ್ರತಿದಿನ 40 ಲೀಟರ್ ಹಾಲು ಡೇರಿಗೆ ಹಾಕುತ್ತಿದ್ದಾರೆ. ಗಣಪತಿ ಚೌತಿ ದಿನ ನಡೆದ ಹಕ್ಲಾಡಿ ಡೇರಿ ವಾರ್ಷಿಕ ಮಹಾಸಭೆಯಲ್ಲಿ ಸಂಘ ಅಧ್ಯಕ್ಷ ಬಾಳೆಮನೆ ಸಂತೋಷ ಕುಮಾರ್ ಶೆಟ್ಟಿ ಹಕ್ಲಾಡಿ ಸನ್ಮಾನಿಸಿದ್ದರು.


Spread the love