
ಸುಣ್ಣಂಬಳ, ಮಣಿಯಾಣಿ ಗೆ ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ
ಶ್ರೀ ಕಟೀಲು ಮೇಳದ ಹಿರಿಯ ಕಲಾವಿದ,ಪ್ರಬಂಧಕ, ಅರ್ಥಧಾರಿ, ವಾಗ್ಮಿ ಸುಣ್ಣoಬಳ ವಿಶ್ವೇಶ್ವರ ಭಟ್ ಹಾಗೂ ಖ್ಯಾತ ಹಾಸ್ಯಗಾರ ಮವುವಾರು ಬಾಲಕೃಷ್ಣ ಮಣಿ ಯಾಣಿ ಅವರಿಗೆ ಪಡುಬಿದ್ರಿ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನ ದ ಬಳಿ ನಡೆದ ಕಟೀಲು ಯಕ್ಷಗಾನ ಮೇಳ ದ ಸೇವೆ ಆಟ ದಲ್ಲಿ ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲ್ಲಟೆ ಗುತ್ತು ಮೂಲ ಕುಟುಂಬಸ್ಥರಾದ ಎರ್ಮಾಳು ರಾಧಾ ವಿಠ್ಠಲ ಶೆಟ್ಟಿ ಹಾಗೂ ಮಕ್ಕಳು ಕಂಬಳ ಕ್ಷೇತ್ರ ದಲ್ಲಿ ಕೋಣ ಗಳ ಯಜಮಾನ ರಾಗಿ ಖ್ಯಾತಿ ಪಡೆದಿದ್ದ ಮುಂಬೈ ಘಾಟ್ ಕೋಪರ್ ನ ಭಾರತ್ ಕೆಫೆ ಯ ಸಂಸ್ಥಾಪಕ ಎರ್ಮಾಳ್ ಪೂಲ ವಿಠ್ಠಲ ಶೆಟ್ಟಿ ಅವರ ಸ್ಮರಣಾರ್ಥ ಈ ಪ್ರಶಸ್ತಿ ನೀಡಿದರು.
ಕಟೀಲು ದೇವಸ್ಥಾನ ದ ಅನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಶ್ರಣ್ಣ ಅವರು ” ಕಟೀಲು ಮೇಳ ಒಂದರಲ್ಲಿಯೇ ಕಳೆದ ನಲ್ವತ್ತು ವೇಷಗಳಿಂದ ನಿರಂತರ ಕಲಾ ಸೇವೆ ಮಾಡುತ್ತಿರುವ ಸುನ್ನಂಬಳ ಅವರ ಕಲಾಯಾನ ದ ಮೇಲ್ಮೆ ಯನ್ನು ಹಾಗೂ ರಾಜ ಹಾಸ್ಯ ದ ಪ್ರತಿನಿಧಿ ಯಂತೆ ರಂಗ ಸ್ಥಳ ದಲ್ಲಿ ಮೆರೆಯುವ ಮಣಿಯಾಣಿ ಯವರ ಹಾಸ್ಯ ದ ಓಘ ವನ್ನು ಕೊಂಡಾಡಿದರು.
ರಿಬ್ಬನ್ಸ್ ಅಂಡ್ ಬಲೂನ್ಸ್ ಸಂಸ್ಥಾಪಕ ಎರ್ಮಾಳ್ ಸತೀಶ್ ಶೆಟ್ಟಿ ಅವರು ನಿರಂತರ ವಾಗಿ ಇಪ್ಪತಾರನೆಯ ವರ್ಷ ದ ತಮ್ಮ ಕುಟುಂಬ ದ ಸೇವೆ ಆಟಕ್ಕೆ ಆಗಮಿಸಿ ಹರಸಿದ ಆಶ್ರಣ್ಣ ರನ್ನು ಗವ್ತಿರವಿಸಿದರು.
ಐಕಳ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿದರು. ಎರ್ಮಾಳ್ ಹೊಸಮನೆ ಕಮಲ ನಿವಾಸ ಉದಯ ಶೆಟ್ಟಿ, ರಾಜೇಶ್ ಶೆಟ್ಟಿ ವಿಶು ಕುಮಾರ್ ಉಚ್ಚಿಲ್ ಉಪಸ್ಥಿತರಿದ್ದರು.
ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ” ವೀರ ಮಾರುತಿ “ಯಕ್ಷಗಾನ ಪ್ರದರ್ಶನ ನಡೆಯಿತು.