
ಸುನಿಲ್ ಕುಮಾರ್ ಅಭಿಮಾನಿ ಬಳಗ ಮುಂಬಯಿ ವತಿಯಿಂದ ಸ್ನೇಹ ಮಿಲನ
ಮುಂಬಯಿ : ಹಿರಿಯರು ಹೇಳಿದಂತೆ ತುಳುನಾಡು ಪರಶುರಾಮ ಶೃಷ್ಟಿ. ಕರ್ನಾಟಕ ಇತರ ಯವುದೇ ಜಿಲ್ಲೆಗಳಲ್ಲಿ ಇಲ್ಲದಂತಹ ಆರಾದನ ಪದ್ದತಿಗಳಾದ ನಾಗಾರದನೆ, ದೈವಾರಾದನೆ ಇತ್ಯಾದಿಗಳು ನಮ್ಮ ಉಭಯ ಜಿಲ್ಲೆಗಳಲ್ಲಿ ಇದೆ. ಕಾರಣ ನಮ್ಮ ಜಿಲ್ಲೆಗಳು ಪರಶುರಾಮ ಶೃಷ್ಟಿ. ಆದರೆ ಜಿಲ್ಲೆಗಳಲ್ಲಿ ಎಲ್ಲಿಯೂ ಪರಶುರಾಮನಿಗೆ ಸಂಮಂದಪಟ್ಟ ಯಾವುದೇ ಚಟುವಟಿಕೆಗಳಿಲ್ಲ. ಆರು ವರ್ಷಗಳ ಹಿಂದೆಯೇ ಕಾರ್ಕಳದಲ್ಲಿ ಪರಶುರಾಮ ಥೀಂ ಪಾರ್ಕ್ ಸ್ಥಾಪಿಸುವ ಬಗ್ಗೆ ಯೋಜನೆ ಕೈಗೊಂಡಿದ್ದೆವು. ಇಂದು ಬೈಲೂರಿನಲ್ಲಿ 450 ಅಡಿ ಎತ್ತರದ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಪರಶುರಾಮ ಥೀಂ ಪಾರ್ಕ್ ನ್ನು ಸ್ಥಾಪಿಸಿದ್ದು ಜ. 27 ರಂದು ಲೋಕಾರ್ಪಣೆ ಮಾಡಲಿರುವೆವು ಎಂದು ಕಾರ್ಕಳದ ಅಭಿವೃದ್ಧಿಯ ರೂವಾರಿ, ಕರ್ನಾಟಕ ಸರ್ಕಾರದ ಇಂಧನ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಹೇಳಿದರು.
ಜ. 2ರಂದು ಸಂಜೆ ಮಿರಾರೋಡ್ ಪೂರ್ವದ ಭಾರತರತ್ನ ಲತಾ ಮಂಗೇಶ್ಕರ್ ನಾಟ್ಯ ಸಭಾಗೃಹದಲ್ಲಿ ನಡೆದ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಕಿಕ್ಕಿರಿದು ತುಂಬಿದ ಮುಂಬಯಿಯ ಅಭಿಮಾನಿಗಳಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಜಗತ್ತಿನಾದ್ಯಂತ ನೆಲೆಸಿರುವ ತುಳು ಬಾಂದವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಮುಂಬಯಿಯಲ್ಲಿರುವ ಎಲ್ಲಾ ತುಳು ಬಾಂದವರು ಜ. 27 ರಿಂದ ಜ. 29 ರ ತನಕ ನಡೆಯಲಿರುವ ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ನೀವೆಲ್ಲರೂ ಬರಬೇಕಾಗಿ ವಿನಂತಿಸಲು ಬಂದಿರುವೆನು. ಕಾರ್ಕಳದ ಜನಸಾಮಾನ್ಯರಿಗೆ ಯಾವುದೇ ರೀತಿಯ ಕೊರತೆಯಾಗದಂತೆ ಅಗತ್ಯವಾದ ಸೌಲಭ್ಯವನ್ನು ಒದಗಿಸಲು ಕಾರ್ಕಳ ಅಭಿವೃದ್ದಿಯಾಗುತ್ತಿದ್ದು ಸ್ವರ್ಣ ಕಾರ್ಕಳದ ನಮ್ಮ ಕನಸು ನೆನಸಾಗುತ್ತಿದೆ. ನಮ್ಮ ಕಾರ್ಕಳವು ಬಹುಬಲಿ ಕಾರ್ಕಳ, ಪರಶುರಾಮ ಕಾರ್ಕಳ ಹಾಗು ಸ್ವರ್ಣ ಕಾರ್ಕಳ. ವೈದ್ಯಕೀಯವಾಗಿ ಮಾತ್ರವಲ್ಲದೆ ಶೈಕ್ಷಣಿಕವಾಗಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸ್ಥಳೀಯರಿಗೆ ಅನುಕೂಲವಾಗಲು ನಾವು ಕೈಕೊಂಡ ಯೋಜನೆಯು ಆದಷ್ಟು ಬೇಗ ಪೂರ್ಣ ಗೊಳ್ಳುವಂತೆ ಮಾಡುವ ಪ್ರಯತ್ನ ನಮ್ಮದು. ಕಾರ್ಕಳ ಅಂತರಾಷ್ಟೀಯ ಮಟ್ಟದ ಪ್ರವಾಸ ಕೇಂದ್ರವಾಗುದರಲ್ಲಿ ಸಂದೇಹವಿಲ್ಲ. ಆರು ವರ್ಷದ ಹಿಂದೆ ಮುಂಬಯಿಯ ಅಂದೇರಿಯಲ್ಲಿ ಇಂತಹ ಕಾರ್ಯಕ್ರಮವನ್ನು ನೀವೆಲ್ಲರೂ ಏರ್ಪಡಿಸಿದ್ದು ಇಂದು ಸಚಿವನಾಗಿ ನಿಮ್ಮಲ್ಲಿಗೆ ಬಂದಿರುವೆನು. ನಿಮ್ಮೆಲ್ಲರ ಪ್ರೋತ್ಸಾಹದಿಂದ ಕಾರ್ಕಳವು ಹೆಚ್ಚಿನ ಅಭಿವೃದ್ದಿಯಾಗುದರಲ್ಲಿ ಸಂದೇಹವಿಲ್ಲ ಎಂದರು.
ಮಹಾನಗರದ ಸಂಘಟಕ ಕಾರ್ಕಳ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್ ಶೆಟ್ಟಿ ತೆಳ್ಳಾರು ನೇತೃತ್ವದಲ್ಲಿ ಸುನಿಲ್ ಕುಮಾರ್ ಅಭಿಮಾನಿ ಬಳಗ ಮುಂಬಯಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮುಂಬಯಿಯ ಸಂಸದ ಗೋಪಾಲ್ ಶೆಟ್ಟಿ ಅವರು ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಉದ್ಯಮಿ ರಘುವೀರ್ ಶೆಟ್ಟಿ ನಲ್ಲೂರು ವಹಿಸಿದ್ದರು.
ಮುಖ್ಯಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ,
ಬಿಲ್ಲವರ ಅಸೋಸಿಯೇಶನ್ ನ ಅಧ್ಯಕ್ಷ ಹರೀಶ್ ಜಿ ಅಮೀನ್, ಬಿಲ್ಲವ ಚೇಂಬರ್ ಆಪ್ ಕಾಮರ್ಸ್ ಮತ್ತು ಇಂಡಷ್ಟ್ರೀಸ್ ನ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ಆಹಾರ್ ನ್ ಅಧ್ಯಕ್ಷ ಶಿವಾನಂದ ಶೆಟ್ಟಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಮೊಗವೀರ ಮಹಾಜನ ಸೇವಾ ಸಂಘ ಬಾಗ್ವಾಡಿ ಹೋಬಳಿಯ ಗೌ. ಅಧ್ಯಕ್ಷ ಸುರೇಶ್ ಕಾಂಚನ್, ಬಂಟರ ಸಂಘದ ಉಪಾಧ್ಯಕ್ಷ ರತ್ನಾಕರ ಶೆಟ್ಟಿ, ಮುಂಡ್ಕೂರು, ಇನ್ನಂಜೆ ಚಂದ್ರಹಾಸ ಗುರುಸ್ವಾಮಿ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ, ಕರ್ನಾಟಕ ಮಲ್ಲದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ದೇವಾಡಿಗ, ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನಿನ ಅಧ್ಯಕ್ಷ ಸದಾನಂದ ಆಚಾರ್ಯ, ನವಿಮುಂಬಯಿ ಸುಪ್ರೀಂ ಹೆರಿಟೇಜ್ ನ ಸಿಎಂಡಿ ಶಿವರಾಮ ಶೆಟ್ಟಿ, ಮುಳುಂಡ್ ವೈಭವ್ ಹೋಟೆಲ್ ನ ಕರಿಯಣ್ಣ ಶೆಟ್ಟಿ, ಸಾಫಲ್ಯ ಸೇವಾ ಸಂಘದ ಭಾಸ್ಕರ ಸಫಲಿಗ, ಠಾಣೆ ಗೋಡ್ ಬಂದರ್ ಕನ್ನಡ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಡಿ. ಸಾಲ್ಯಾನ್, ಕುಲಾಲ ಸಂಘ ಮುಂಬಯಿ ಯ ಉಪಾಧ್ಯಕ್ಷ ಡಿ. ಐ. ಮೂಲ್ಯ, ಕಾರ್ಕಳ ಬಿಜೆಪಿ ನಾಯಕ ಮಹಾವೀರ್ ಜೈನ್, ಸಾಣೂರು ಸಾಂತಿಂಜ ಜನಾರ್ಧನ ಭಟ್, ರಘುವೀರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಸಂಘಟಕ ಮಹೇಶ್ ಶೆಟ್ಟಿ ತೆಳ್ಳಾರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಿರೀಶ್ ಶೆಟ್ಟಿ ತೆಳ್ಳಾರ್ ಸ್ವಾಗತಿಸಿದರು, ಅರ್ಪಿತಾ ಶೆಟ್ಟಿಯವರು ಅಭಿನಂದನಾ ಬಾಷಣವನ್ನು ಮಾಡಿದರು. ಕಾರ್ಯಕ್ರಮವನ್ನು ಅಶೋಕ ಪಕ್ಕಳ ಮತ್ತು ಕರ್ನೂರು ಮೋಹನ್ ರೈ ನಿರ್ವಹಿಸಿದರು. ಬಾಲಕೃಷ್ಣ ಶೆಟ್ಟಿ ಉಳೆಪಾಡಿ ಧನ್ಯವಾದ ಸಮರ್ಪಿಸಿದರು. ವಿಜಯ ಶೆಟ್ಟಿ ಮೂಡುಬೆಳ್ಳೆ ಯವರು ಪ್ರಾರ್ಥನೆಗೈದರು.
ಸಮಾರಂಭದಲ್ಲಿ ಎರ್ಮಾಳ್ ಹರೀಶ್ ಶೆಟ್ಟಿ, ನಗರ ಸೇವಕ ಅರವಿಂದ ಶೆಟ್ಟಿ, ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು, ಎಲ್. ವಿ. ಅಮೀನ್, ಗಂಗಾಧರ ಜೆ ಪೂಜಾರಿ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಉದಯ ಶೆಟ್ಟಿ ಪೆಲತ್ತೂರು, ರಿತೇಶ್ ಪೂಜಾರಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳನ್ನು ಗೌರವಿಸಿದರು.
ಚಿತ್ರ : ದಿನೇಶ್ ಕುಲಾಲ್