ಸುಬ್ರಹ್ಮಣ್ಯ: ಅಪ್ರಾಪ್ತ ಯುವತಿಯ ಮಾನಭಂಗಕ್ಕೆ ಯತ್ನ – ದೂರು ದಾಖಲು

Spread the love

ಸುಬ್ರಹ್ಮಣ್ಯ: ಅಪ್ರಾಪ್ತ ಯುವತಿಯ ಮಾನಭಂಗಕ್ಕೆ ಯತ್ನ – ದೂರು ದಾಖಲು

ಕಡಬ: ಅಪ್ರಾಪ್ತ ಯುವತಿಯೋರ್ವಳು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಮಾನಭಂಗಕ್ಕೆ ಯತ್ನಿಸಿದ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಪ್ರಾಪ್ತ ಯುವತಿಯೋರ್ವಳು ಕಾಲೇಜ್ ಬಿಟ್ಟು ಮನೆಗೆ ಹಿಂತಿರುಗಲು ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಹಪೀದ್ ಎಂಬಾತನು ಯುವತಿಗೆ ಪ್ರೀತಿಸುವಂತೆ ಒತ್ತಡ ಹಾಕಿ ,ಮಗಳ ದೂರವಾಣಿ ಸಂಖ್ಯೆಯನ್ನು ಕೇಳಿದಾಗ ಅದಕ್ಕೆ ಅವಳು ನಿರಾಕರಿಸಿದ್ದು ಆಗ ಅವಳ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿಲಾಗಿದೆ.

ಈ ಕುರಿತು ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love