ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಕುರಿಯ ವಿಠಲ ಶಾಸ್ತ್ರೀ ಯಕ್ಷ ಪ್ರಶಸ್ತಿ ಪ್ರದಾನ

Spread the love

ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಕುರಿಯ ವಿಠಲ ಶಾಸ್ತ್ರೀಯಕ್ಷ ಪ್ರಶಸ್ತಿ ಪ್ರದಾನ

ಕುಂದಾಪುರ: ಕುರಿಯ ವಿಟ್ಠಲ ಶಾಸ್ತ್ರೀ ಯಕ್ಷಗಾನ ಪ್ರತಿಷ್ಠಾನ ಉಜಿರೆ, ಕಲಾಕ್ಷೇತ್ರ ಕುಂದಾಪುರ, ರೋಟರಿ ಕ್ಲಬ್ ವಲಯ 1ರ ಸಹಯೋಗದಲ್ಲಿ ಕುಂದಾಪುರದ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಿದ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸಮಾರೋಪ ಶನಿವಾರ ನಡೆಯಿತು.

ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ 2020ನೇ ಸಾಲಿನ ಕುರಿಯ ವಿಠಲ ಶಾಸ್ತ್ರೀಯಕ್ಷ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ನನ್ನ ಬದುಕನ್ನೇ ಬದಲಿಸಿದ ಗುರು ನಾರಾಯಣಪ್ಪ ಉಪ್ಪೂರ ಅವರ ಅನುಗ್ರಹ, ಕಾಳಿಂಗ ನಾವುಡರ ಒಡನಾಟದಿಂದ ನಾನು ಒಂದಷ್ಟು ಕಲಿತೆ. ಕುರಿಯ ವಿಠಲ ಶಾಸ್ತ್ರೀಗಳ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವುದು ಅವಿಸ್ಮರಣೀಯ ಕ್ಷಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಬದಲಾವಣೆಗೆ ಒಗ್ಗಿಕೊಳ್ಳುವುದು ಅನಿವಾರ್ಯ. ಯಕ್ಷಗಾನವು ಇದರಿಂದ ಹೊರತಲ್ಲ ಎಂದು ಹೇಳಿದರು.

ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್, ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ, ರೋಟರಿ ಕ್ಲಬ್ನ ಡಾ| ಜಗದೀಶ ಶೆಟ್ಟಿ ಉಪಸ್ಥಿತರಿದ್ದರು. ವಿ| ಉಮಾಕಾಂತ್ ಭಟ್ ಅಭಿನಂದನ ನುಡಿಗಳನ್ನಾಡಿದರು. ಕುರಿಯ ಪ್ರತಿಷ್ಠಾನ ಸಂಚಾಲಕ ಉಜಿರೆ ಅಶೋಕ ಭಟ್ ನಿರ್ವಹಿಸಿದರು.


Spread the love