ಸುರತ್ಕಲ್ : ಅಪ್ರಾಪ್ತ ಬಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆ

Spread the love

ಸುರತ್ಕಲ್ : ಅಪ್ರಾಪ್ತ ಬಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆ

ಮಂಗಳೂರು: ಅಪ್ರಾಪ್ತ ಬಾಲಕನೋರ್ವ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕುತ್ತೆತ್ತೂರು ಗ್ರಾಮದ ಬಜಾವು ಪಾದೆಮನೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಕುತ್ತೆತ್ತೂರು ಗ್ರಾಮದ ಬಜಾವು ಪಾದೆಮನೆಯ ನಿವಾಸಿಗಳಾದ ಮೂಲತಃ ಬೊಳ್ಳಾಜೆ ಕೃ಼ಷ್ಞಾಪುರದ ಸುಧಾಕರ್ ಮತ್ತು ಭಾರತಿ ಎಂಬುವವರ ಮಗನಾದ ಹರ್ಷಿತ್ (13) ಎಂದು ಗುರುತಿಸಲಾಗಿದೆ.

ಬಾಲಕ ಹರ್ಷಿತ್ ಬೊಳ್ಳಾಜೆಯ ಚೈತನ್ಯ ಶಾಲೆಯಲ್ಲಿ ಕಲಿಯುತ್ತಿದ್ದು ಶನಿವಾರ ಶಾಲೆ ಮುಗಿಸಿ ತನ್ನ ತನ್ನ ಸೋದರ ಮಾವಂದಿರಾದ ಸುನೀಲ್ ಮತ್ತು ಪುರುಷೋತ್ತಮ ರವರ ಕುತ್ತೆತೂರಿನ ಪಾದಿಮನೆಯ ಮನೆಗೆ ರಜೆಗೆಂದು ಬಂದಿದ್ದವನು ಸೋಮವಾರ ಮುಂಜಾನೆ 5.30-6.00 ಗಂಟೆ ಸುಮಾರಿಗೆ ಮನೆಯ ಹಿಂಬದಿಯ ಮರವೊಂದಕ್ಕೆ ಪ್ಲಾಸ್ಟಿಕ್ ಚೇರ್ ಸಹಾಯದಿಂದ ಯಾವುದೋ ವೈಯುಕ್ತಿಕ ಕಾರಣದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love