
Spread the love
ಸುರತ್ಕಲ್: ಗಾಂಜಾ ಮಾರಾಟಕ್ಕೆ ಯತ್ನ – ಇಬ್ಬರ ಬಂಧನ
ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಸುರತ್ಕಲ್ ಪೋಲಿಸರು ಭಾನುವಾರ ಬಂಧಿಸಿದ್ದಾರೆ.
ಬಂಧಿತರನ್ನು ಒರಿಸ್ಸಾ ಮೂಲದವರಾದ ಚಿಂತಾಮಣಿ ಮತ್ತು ದೂಬ ಎಂದು ಗುರುತಿಸಲಾಗಿದೆ.
ಸುರತ್ಕಲ್ ಇಡ್ಯಾ ಗ್ರಾಮದ ಗೋವಿಂದ ದಾಸ ಕಾಲೇಜಿನ ಬಳಿ ಇಬ್ಬರು ಒರಿಸ್ಸಾ ಮೂಲದವರಾದ ಆರೋಪಿಗಳೂ ಮಾದಕ ದ್ರವ್ಯವಾದ ಗಾಂಜಾ ಮಾರಾಟ ಮಾಡಲೆಂದು ಬಂದಿದ್ದು, ಸುಮಾರು 3 ಕೆಜಿ 180 ಗ್ರಾಂ ಪ್ರಮಾಣದ ಗಾಂಜಾವನ್ನು ಸ್ವಾಧೀನ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಮಂಗಳೂರು ಪೊಲೀಸ್ ಆಯುಕ್ತರ ಆದೇಶದ ಮೇರೆಗೆ, ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮನೋಜ್ ಕುಮಾರ್ ನಾಯ್ಕ್ ರವರ ನಿರ್ದೇಶನದಂತೆ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರವರಾದ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದರ್ ಸಿಬ್ಬಂದಿಗಳಾದ ಅಜಿತ್, ಅಣ್ಣಪ್ಪ, ದಿಲೀಪ್ ಮತ್ತು ಕಾರ್ತಿಕ್ ರವರ ತಂಡ ಪಾಲ್ಗೊಂಡಿರುತ್ತಾರೆ.
Spread the love