
ಸುರತ್ಕಲ್: ಗಾಂಜಾ ಮಾರಾಟ ಮತ್ತು ಸೇವನೆ – ನಾಲ್ವರ ಬಂಧನ
ಮಂಗಳೂರು: ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೈಕಂಪಾಡಿ ನಿವಾಸಿ ವಿಕ್ರಂ @ಜಯರಾಂ (30), ಕೊಡಿಯಾಲ್ ಬೈಲ್ ನಿವಾಸಿ ಸತೀಶ್ (50), ಕುಳಾಯಿ ನಿವಾಸಿ ಸರ್ಫರಾಜ್ (37), ಅಕ್ಷಯ್ಧ(33) ಎಂದು ಗುರುತಿಸಲಾಗಿದೆ.
ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿ ಗ್ರಾಮದ ರತ್ನಾವತಿ ಎಂಬುವವರ ಮನೆಗೆ ತಾಗಿಕೊಂಡಿರುವ ಕೊಣೆಯೊಂದರಲ್ಲಿ ಕೆಲ ಯುವಕರು ಸೇರಿಕೊಂಡು ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವುದು ಮತ್ತು ಸೇದುವುದು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಉತ್ತರ ಪೊಲೀಸ್ ಉಪ ವಿಭಾಗದ ACP ಸಾಹೇಬರಾದ ಮನೋಜ್ ಕುಮಾರ್ ನಾಯಕ್ ರವರ ಆದೇಶ ಮತ್ತು ನಿರ್ದೇಶನದ ಮೇರೆಗೆ ಸುರತ್ಕಲ್ ಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಪ್ರದೀಪ್ ಟಿ.ಆರ್. ಮತ್ತು ಸಿಬ್ಬಂದಿಗಳಾದ ಅಣ್ಣಪ್ಪ, ಅಜೀತ್ ಮ್ಯಾಥ್ಯೂ, ದಿಲೀಪ್, ಕಾರ್ತಿಕ್ ರವರ ತಂಡ ಸದರಿ ಸ್ಥಳಕ್ಕೆ ದಾಳಿ ಮಾಡಿದ್ದಾರೆ.
ಸದರಿ ಸ್ಥಳದ ರೂಮ್ ನ ಲ್ಲಿ ನಾಲ್ಕು ಜನ ವ್ಯಕ್ತಿಗಳು ಗಾಂಜಾವನ್ನು ಚಿಲ್ಲಮ್ ನಲ್ಲಿ ಹಾಕಿಕೊಂಡು ಸಿಗರೇಟ್ ಮಾದರಿಯಲ್ಲಿ ಸೇದುತ್ತಿರುವುದು ಕಂಡು ಬಂದಿದ್ದು ರೂಮ್ ನೊಳಗೆ ಹೋಗಿ ನೋಡಲಾಗಿ ಗಾಂಜಾ ತುಂಬಿದ ಪಾಕೆಟ್ ಗಳು ದೊರೆತಿದ್ದು ಸದರಿಯವರಲ್ಲಿ ವಿಕ್ರಂ @ ಜಯರಾಂ ಎಂಬಾತನು ಇತರರಿಗೆ ಗಾಂಜಾ ಮಾದಕ ವಸ್ತುವನ್ನು ತಂದು ಹಣಕ್ಕೆ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದು ಸದರಿ ವ್ಯಕ್ತಿಯನ್ನು ಕೂಲಂಕುಷವಾಗಿ ವಿಚಾರಿಸಿದಾಗ ಆತನು ಬಂದಿದ್ದ ಆಟೋರಿಕ್ಷಾದಲ್ಲಿ 750 ಗ್ರಾಂ ಗಾಂಜಾ ಮತ್ತು ತೂಕದ ಮಾಪನ ಮತ್ತು ಗಾಂಜಾ ಪ್ಯಾಕ್ ಮಾಡುವ ಖಾಲಿ ಪ್ಯಾಕೆಟ್ ಗಳು ದೊರೆತಿರುತ್ತವೆ
ಆರೋಪಿತರಿಂದ ಒಟ್ಟು 790 ಗ್ರಾಂ ಗಾಂಜಾ (ಅಂದಾಜು ಮೌಲ್ಯ-8000 ರೂ ಗಳು) 4 ಮೊಬೈಲ್ ಪೋನ್ (ಒಟ್ಟು ಅಂದಾಜು ಮೌಲ್ಯ 6000) , ನಗದು ಹಣ -2470, ಒಂದು ಆಟೋರಿಕ್ಷಾ ( ಮೌಲ್ಯ -70000 ರೂಪಾಯಿಗಳು ), ತೂಕ ಮಾಪನ (ಅಂದಾಜು ಮೌಲ್ಯ -1000 ರೂ ಗಳು ) ಆಗಿದ್ದು ವಶಪಡಿಸಿಕೊಂಡ ಒಟ್ಟು ವಸ್ತುಗಳ ಮೌಲ್ಯ – 87470 ರೂಪಾಯಿಗಳು ಆಗಿರುತ್ತದೆ.
ಈ ಬಗ್ಗೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.