ಸುರತ್ಕಲ್: ಗೆಳೆಯನ ಜೊತೆ ಈಜಲು ಹೋದ ಯುವಕ ಸಮುದ್ರ ಪಾಲು

Spread the love

ಸುರತ್ಕಲ್: ಗೆಳೆಯನ ಜೊತೆ ಈಜಲು ಹೋದ ಯುವಕ ಸಮುದ್ರ ಪಾಲು

ಸುರತ್ಕಲ್: ಎನ್ ಐ ಟಿಕೆ ಲೈಟ್ ಹೌಸ್ ಬೀಚ್ ನಲ್ಲಿ ಸಮುದ್ರಕ್ಕೆ ಇಳಿದಿದ್ದ ಇಬ್ಬರು ಸ್ನೇಹಿತರ ಪೈಕಿ ಒರ್ವ ನಾಪತ್ತೆಯಾಗಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸತ್ಯಂ (18)

ನಾಪತ್ತೆಯಾದ ಯುವಕ ಕಾನ ನಿವಾಸಿ ಸುರೇಶ್ ಪ್ರಸಾದ್ ಯಾದವ್ ಎಂಬವರ ಪುತ್ರ ಸತ್ಯಂ (18) ಎಂದು ಗುರುತಿಸಲಾಗಿದೆ. ಈತ ಕೆಪಿಟಿ ತಾಂತ್ರಿಕ ಕಾಲೇಜಿನಲ್ಲಿ ಡಿಪ್ಲೋಮಾ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದನು.

ಶನಿವಾರ ಗೆಳೆಯ ಪ್ರಭಾಕರನ್ ಜೊತೆ ಸತ್ಯಂ ಸುರತ್ಕಲ್ ಲೈಟ್ ಹೌಸ್ ಬಳಿಯ ಸಮುದ್ರ ತೀರಕ್ಕೆ ತೆರಳಿದ್ದು ಇಬ್ಬರು ನೀರಿಗಿಳಿದಿದ್ದಾರೆ ಈ ವೇಳೆ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ ಆದರೆ ಪ್ರಭಾಕರನ್ ಈಜಿ ದಡ ಸೇರಿದರೆ ಸತ್ಯಂ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಕ್ಕಿ ನಾಪತ್ತೆಯಾಗಿದ್ದಾನೆ, ಈ ವೇಳೆ ಗೆಳೆಯ ಪ್ರಭಾಕರನ್ ಸ್ಥಳೀಯರಿಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳೀಯ ಮೀನುಗಾರರು ನಾಪತ್ತೆಯಾದ ಯುವಕನ ಹುಡುಕಾಟಕ್ಕೆ ಮುಂದಾಗಿದ್ದಾರೆ.

ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪ್ರಭಾಕರನ್ ಅವರಿಂದ ಮಾಹಿತಿ ಕಲೆ ಹಾಕಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


Spread the love