ಸುರತ್ಕಲ್ ಟೋಲ್ ಪ್ರತಿಭಟನೆ : ಪೊಲೀಸರು ಸಂಯಮ ಕಳೆದುಕೊಳ್ಳದಂತೆ ಕಮೀಷನರ್ ಶಶಿಕುಮಾರ್ ಸೂಚನೆ

Spread the love

ಸುರತ್ಕಲ್ ಟೋಲ್ ಪ್ರತಿಭಟನೆ : ಪೊಲೀಸರು ಸಂಯಮ ಕಳೆದುಕೊಳ್ಳದಂತೆ ಕಮೀಷನರ್ ಶಶಿಕುಮಾರ್ ಸೂಚನೆ

ಮಂಗಳೂರು: ಸುರತ್ಕಲ್ ಟೋಲ್ ತೆರವುಗೊಳಿಸುವಂತೆ ಆಗ್ರಹಿಸಿ ಆಯೋಜಿಸಿರುವ ಪ್ರತಿಭಟನೆಯಲ್ಲಿ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಸಂಯಮವಾಗಿ ವರ್ತಿಸುವಂತೆ ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಸೂಚನೆ ನೀಡಿದರು.

ಮಂಗಳವಾರ ಬೆಳಿಗ್ಗೆ ಪ್ರತಿಭಟನೆಯ ಪೊಲೀಸ್ ಬಂದೋಬಸ್ತು ಪರೀಶೀಲನೆ ನಡೆಸಿ ಬಳಿಕ ಅಧಿಕಾರಿ ಮತ್ತು ಸಿಬಂದಿಗಳಿಗೆ ಸೂಚನೆ ನೀಡಿದ ಅವರು ಟೋಲ್ ಮುಚ್ಚುವಂತೆ ಆಗ್ರಹಿಸಿ ಹಲವಾರು ವರ್ಷಗಳಿಂದ ಪ್ರತಿಭಟನೆ ನಡೆಯುತ್ತಿದ್ದು ಇಂದು ಕೂಡ ಪ್ರತಿಭಟನೆ ಆಯೋಜಿಸಲಾಗಿದೆ ಇದರಲ್ಲಿ ಹಲವಾರು ವ್ಯಕ್ತಿಗಳು ಸಂಘ-ಸಂಸ್ಥೆಗಳು ರಾಜಕೀಯ ವ್ಯಕ್ತಿಗಳು ಮುಖ್ಯವಾಗಿ ಮಹಿಳೆಯರು ಮತ್ತು ಹಿರಿಯ ನಾಗರಿಕರು ಭಾಗವಹಿಸುತ್ತಾರೆ. ವಿದ್ಯಾರ್ಥಿಗಳು ಕೂಡ ಭಾಗವಹಿಸುವ ಸಾಧ್ಯತೆ ಇರುತ್ತದೆ ಪೊಲೀಸರು ನಿಮ್ಮ ನಿಮ್ಮ ಹಿರಿಯ ಅಧಿಕಾರಿಗಳು ನೀಡಿದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಾರು ಕೂಡ ಅನುಚಿತವಾಗಿ ವರ್ತನೆ ಮಾಡುವುದು ಸಯಮ ಕಳೆದುಕೊಳ್ಳುವುದು ಮಾಡಬಾರದು ಎಂದು ಹೇಳಿದರು.

ಟೋಲ್ ತೆರವಾದರೆ ಎಲ್ಲ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ತಾವು ಕೂಡ ಅದೇ ಟೋಲ್ ನಲ್ಲಿ ನಿಮ್ಮ ಕುಟುಂಬದವರು ಓಡಾಟ ಮಾಡುತ್ತೀರಿ. ಟೋಲ್ ಮುಚ್ಚುವ ಕುರಿತು ಜಿಲ್ಲಾಧಿಕಾರಿಗಳು ನಿರ್ಣಯ ತೆಗೆದುಕೊಳ್ಳುತ್ತಾರೆ ಯಾರು ಶಾಂತಿ ಕದಡದಂತೆ ಪ್ರತಿಭಟನಾಕಾರದಲ್ಲಿ ಮನವಿ ಮಾಡಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಂಯಮ ಕಳೆದುಕೊಳ್ಳದಂತೆ ನಾನು ವಿನಂತಿಸುತ್ತೇನೆ ಯಾರೇ ಆದರೂ ಅನುಚಿತವಾಗಿ ವರ್ತಿಸಿದರೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ನಾನು ಕೂಡ ಸ್ಥಳದಲ್ಲಿ ಇದ್ದು ಇತರ ಹಿರಿಯ ಅಧಿಕಾರಿಗಳು ಇರುತ್ತಾರೆ ಎಂದರು

ಪ್ರತಿಭಟನೆಯಲ್ಲಿ ಹಿರಿಯ ನಾಗರಿಕರು ಮಹಿಳೆಯರು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ ಈ ಸಂದರ್ಭದಲ್ಲಿ ಪೊಲೀಸರು ಏನಾದರೂ ಅನುಚಿತವಾಗಿ ವರ್ತಿಸಿದರೆ ಅದು ಬೇರೆದೇ ರೂಪ ಪಡೆಯುವ ಸಾಧ್ಯತೆ ಇದೆ ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ವರ್ತಿಸಿ ಯಾರು ಕೂಡ ಗೊಂದಲಕ್ಕೆ ಅವಕಾಶ ಮಾಡಿಕೊಡದಂತೆ ಸೂಚನೆ ನೀಡಿದರು.

https://www.facebook.com/MangaloreanNews/videos/426840592928969?notif_id=1666064455279732&notif_t=live_video&ref=notif


Spread the love