ಸುರತ್ಕಲ್ ಪೊಲೀಸರ ಕಾರ್ಯಾಚರಣೆ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 250 ಲೋಡ್ ಮರಳು ವಶ

Spread the love

ಸುರತ್ಕಲ್ ಪೊಲೀಸರ ಕಾರ್ಯಾಚರಣೆ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 250 ಲೋಡ್ ಮರಳು ವಶ
 

ಸುರತ್ಕಲ್: ಸುರತ್ಕಲ್ ಪೊಲೀಸರು ರವಿವಾರ ನಡೆಸಿದ ಎರಡು ಪ್ರತ್ಯೇಕ ದಾಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 250 ಲೋಡ್ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಮತ್ತು ಉಪ ಪೊಲೀಸ್ ನಿರೀಕ್ಷಕರುಗಳಾದ ಮಲ್ಲಿಕಾರ್ಜುನ್, ಅರುಣ್ ಕುಮಾರ್ ಡಿ , ಹಾಗೂ ಸಿಬಂದಿಗಳು ಸೇರಿ ಸುರತ್ಕಲ್ ಗ್ರಾಮದ ಮುಂಚೂರು ಎಂಬಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 100 ಲೋಡ್ ನಷ್ಟು ಮರಳನ್ನು ವಶಕ್ಕೆ ಪಡೆದಿದ್ದಾರೆ ಅಲ್ಲದೆ ಮತ್ತೊಂದು ಪ್ರಕರಣದಲ್ಲಿ ಚೇಳ್ಯಾರು ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿ ಸುಮಾರು 150 ಲೋಡ್ ನಷ್ಟು ಮರಳನ್ನು ವಶಕ್ಕೆ ಪಡೆದಿದ್ದಾರೆ ಇದರೊಂದಿಗೆ ಒಟ್ಟು 35 ಲಕ್ಷ ಮೌಲ್ಯದ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣವನ್ನು ಎಮ್ ಎಮ್ ಅರ್ ಡಿ ಕಾಯ್ದೆಯಡಿಯಲ್ಲಿ ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನ ಅಧಿಕಾರಿಗಳಾದ ಕೋದಂಡರಾಮ ಮತ್ತು ಲಾಯ್ ರವರಿಗೆ ಹಸ್ತಾಂತರಿಸಲಾಗಿದೆ ಅಲ್ಲದೆ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದ ಭೂ ಮಾಲೀಕರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.


Spread the love